ಪಲ್ಸ್ ಪೋಲಿಯೋ ಕಾರ್ಯಕ್ರಮ ಜಿಲ್ಲೆಯಲ್ಲಿ ಶೇ. ೧೦೦. ೮೦ ರಷ್ಟು ಸಾಧನೆ.

ಕೊಪ್ಪಳ
ಜ. ೨೧ (ಕ ವಾ) ಕೊಪ್ಪಳ ಜಿಲ್ಲೆಯಲ್ಲಿ ಕಳೆದ ಜ. ೧೭ ರಿಂದ ೨೦ ರವರೆಗೆ
ಜರುಗಿದ ಮೊದಲ ಸುತ್ತಿನ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದಡಿ ಐದು ವರ್ಷದೊಳಗಿನ
೧,೯೬,೬೮೧ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಮೂಲಕ ಶೇ. ೧೦೦. ೮೦ ರಷ್ಟು ಸಾಧನೆಯಾಗಿದೆ
ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ ಬಾಸೂರ ಅವರು
ತಿಳಿಸಿದ್ದಾರೆ.
     ಈ ಬಾರಿಯ ಮೊದಲ ಸುತ್ತಿನ ಪಲ್ಸ್ ಪೋಲಿಯೋ ಕಾರ್ಯಕ್ರಮದಡಿ
ಜಿಲ್ಲೆಯಲ್ಲಿ ೧೯೫೧೨೧ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು.  ಆದರೆ
೧,೯೬,೬೮೧ ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಮೂಲಕ ಗುರಿ ಮೀರಿ ಸಾಧನೆ ಮಾಡಲಾಗಿದೆ.  ಜ.
೧೭ ರಂದು ಲಸಿಕಾ ಕೇಂದ್ರದಲ್ಲಿ ೧. ೬೬ ಲಕ್ಷ ಮಕ್ಕಳಿಗೆ ಪೋಲಿಯೋ ಹನಿ ಹಾಕಲಾಗಿದೆ.  ಜ.
೧೮ ರಿಂದ ೨೦ ರವರೆಗೆ ಮನೆ, ಮನೆ ಭೇಟಿ ನೀಡುವುದು, ಅಲ್ಲದೆ ಇಟ್ಟಂಗಿ ಭಟ್ಟಿ, ಕೈಗಾರಿಕಾ
ಪ್ರದೇಶಗಳು, ಸ್ಲಂ ಪ್ರದೇಶಗಳು, ಕಟ್ಟಡ ನಿರ್ಮಾಣ ಸ್ಥಳಗಳಿಗೂ ಸಹ ಸಂಚಾರಿ ಘಟಕಗಳ ಮೂಲಕ
ಭೇಟಿ ನೀಡಿ ೫ ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಕಾರ್ಯಕ್ರಮ
ಹಮ್ಮಿಕೊಳ್ಳಲಾಯಿತು.  ಮೊದಲನೆ ಸುತ್ತಿನ ಲಸಿಕಾ ಕಾರ್ಯಕ್ರಮದಡಿ ಕೊಪ್ಪಳ ತಾಲೂಕಿನ
೫೪,೨೪೪ ಮಕ್ಕಳು, ಗಂಗಾವತಿ- ೬೭೩೨೦, ಕುಷ್ಟಗಿ-೩೯೮೯೨ ಮತ್ತು ಯಲಬುರ್ಗಾ ತಾಲೂಕಿನಲ್ಲಿ
೩೫೨೨೫ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಗಿದೆ.  ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ
ಯಶಸ್ವಿಗೆ ಸಹಕರಿಸಿದ ಎಲ್ಲ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕರು,
ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು, ಸಂಘ ಸಂಸ್ಥೆಗಳು
ಎಲ್ಲರಿಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ ಬಾಸೂರ
ಅವರು ಅಭಿನಂದನೆ ಸಲ್ಲಿಸಿದ್ದಾರೆ.
Please follow and like us:
error