ಸ್ವಾಮಿ ವಿವೇಕಾಂದರ ೧೫೦ನೇ ಜನ್ಮ ದಿನಾಚರಣೆ

ಕೊಪ್ಪಳ, ಜ. ೧೩ : ಜ್ಞಾನ ಬಂಧು ಪ್ರಾಥಮಿಕ ಶಾಲೆಯಲ್ಲಿ ಸ್ವಾಮಿ ವಿವೇಕಾನಂದ ರವರ ೧೫೦ನೇ ಜನ್ಮ ದಿನಾಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.  
ಸ್ವಾಮಿ ವಿವೇಕಾನಂದರ ಜಯಂತಿಯ ಅಂಗವಾಗಿ ಸಪ್ತಾಹವನ್ನು ಆಚರಿಸಲಾಯಿತು.  ಪ್ರತಿದಿನ ಮಕ್ಕಳಿಗೆ ವಿವೇಕಾಂದರ ಬಾಲ್ಯ ಜೀವನ ಚರಿತ್ರೆ, ಅವರ ಉದಾತ್ತ ವಿಚಾರಗಳ ಬಗ್ಗೆ ಪ್ರತಿದಿನ ಬೆಳಿಗ್ಗೆ ಹೇಳಲಾಯಿತು.  ನಂತರ ಕೊನೆಯ ದಿನವಾದ ವಿವೇಕಾನಂದ ಜಯಂತಿಯನ್ನು ಸಂಸ್ಥೆಯ ಅಧ್ಯಕ್ಷರಾದ ದಾನಪ್ಪ ಜಿ.ಕೆ ರವರು ಅಧ್ಯಕ್ಷತೆಯನ್ನು ವಹಿಸಿದ್ದರು.   ದಾನಪ್ಪ ಜಿ.ಕೆ ರವರು ಮಾತನಾಡಿ ಮಕ್ಕಳಲ್ಲಿ ಉದಾತ್ತ ವಿಚಾರಗಳನ್ನು ಮಕ್ಕಳಲ್ಲಿ ತುಂಬಿ ಅವರ ಪ್ರಗತಿಗಾಗಿ ಶ್ರಮಿಸಿ ಎಂದು ಹೇಳಿದರು.  ಊರಿನ ಹಿರಿಯರು & ಪಾಲಕರೊಡಗೂಡಿ ವಿಜೃಂಭಣೆಯಿಂದ ಆಚರಿಸಾಯಿತು.  ಕಾರ್ಯಕ್ರಮದಲ್ಲಿ ವಿವೇಕಾನಂದರ ಬಾಲ್ಯ ಜೀವನ ಚರಿತ್ರೆ, ಉದಾತ್ತ ವಿಚಾರಗಳ ಬಗ್ಗೆ ಮಕ್ಕಳು ಹಾಗೂ ಶಿಕ್ಷಕಿಯರು ಎಲ್ಲರಿಗೂ ತಿಳಿಯ ಪಡಿಸಿದರು.  ಎಲ್ಲಾ ಪಾಲಕರೊಡಗೂಡಿ ವಿವೇಕಾನಂದ ಜಯಂತಿಯನ್ನು ಆಚರಿಸಲಾಯಿತು.
Please follow and like us:
error