ಹೋರಾಟಗಾರರ ಆದರ್ಶಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು-ರಾಯರೆಡ್ಡಿ.

ಯಲಬುರ್ಗಾ-17- ದೇಶಕ್ಕೆ ಸ್ವಾತಂತ್ರ ಸಿಕ್ಕರೂ ಹೈದ್ರಾಬಾದ ಕರ್ನಾಟಕ ಭಾಗ ನಿಜಾಮ ಆಳ್ವಿಕೆಯಿಂದ ವಿಮೋಚನೆಯಾಗಿರಲಿಲ್ಲ ಈ ಭಾಗದ ಹೋರಾಟಗಾರರ ಪರಿಶ್ರಮದಿಂದ ತಡವಾಗಿ ಸ್ವಾತಂತ್ಯ್ರ ದೊರಕಿತು. ಇಂದಿನ ಯುವಕರು ಸ್ವಾತಂತ್ಯ್ರ ಹೋರಾಟಗಾರರ ಆದರ್ಶಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.
          ಅವರು ಪಟ್ಟಣದ ಬಯಲು ರಂಗ ಮಂದಿರದಲ್ಲಿ ಆಯೋಜಿಸಲಾಗಿದ್ದ ಹೈದ್ರಾಬಾದ ಕರ್ನಾಟಕ ವಿಮೋಚನಾ ದಿನಾಚರಣೆಯ ಉದ್ಘಾಟನೆ ನೆರವೇರಿಸಿ ಮಾತನಾಡಿ  ಹಿಂದುಳಿದ ಹಣೆಪಟ್ಟಿ ಹೊಂದಿರುವ ಹೈದ್ರಾಬಾದ ಕರ್ನಾಟಕ ಭಾಗದ ಅಭಿವೃದ್ದಿಗೆ ಈ ಭಾಗದ ಜನರ ಹೋರಾಟದ ಫಲವಾಗಿ ೩೭೧ (ಜೆ) ಕಾಲಂ ಜಾರಿಗೆ ಬಂದಿದ್ದು ಶಿಕ್ಷಣ ,ಉದ್ಯೋಗದಲ್ಲಿ ಮೀಸಲಾತಿ ದೊರೆಯತ್ತಿದೆ ಅದರ ಸದುಪಯೋಗವನ್ನು  ಪಡೆದುಕೊಳ್ಳಬೇಕು .ತಾಲೂಕಿನಲ್ಲಿ ಸಾಕಷ್ಷು ಅಭಿವೃದ್ದಿ ಕೆಲಸಗಳು ಆಗಬೇಕಿದೆ ರೈಲ್ವೆ ,ಹೆದ್ದಾರಿ , ನೀರಾವರಿ ಮತ್
    ತಹಶೀಲದಾರ  ಶಿವಲಿಂಗಪ್ಪ ಪಟ್ಟದಕಲ್ ಧ್ವಜಾರೋಹಣ ನೆರವೇರಿಸಿ ಪ್ರಾಸ್ತಾವಿಕ ಮಾತನಾಡಿದರು. ಪ್ರಾಚಾರ್ಯ ಡಾ : ಶಿವರಾಜ ಗುರಿಕಾರ ಸ.ಪ್ರ.ದರ್ಜೆ ಕಾಲೇಜು ಯಲಬುರ್ಗಾ ಹೈದ್ರಾಬಾದ ಕರ್ನಾಟಕ ಭಾಗದ ಕುರಿತು ವಿಶೇಷ ಉಪನ್ಯಾಸ ನೀಡಿದರು.
    ಹೈ.ಕ.ಕಲಂ ೩೭೧ (ಜೆ) ಸಲುವಾಗಿ ಹೋರಾಟ  ಸಮಿತಿಯ ಮುಖಂಡರಾದ ಮುನಿಯಪ್ಪ ಹುಬ್ಬಳ್ಳಿ , ಶ್ರೀಪಾದಪ್ಪ ಅಧಿಕಾರಿ ,ಶರಣಬಸಪ್ಪ ದಾನಕೈ ,ರವಿತೇಜ ಅಬ್ಬಿಗೇರಿ, ನಾಗರಾಜ ಕೊಪ್ಪಳರವರಿಗೆ ಸನ್ಮಾನಿಸಲಾಯಿತು.
    ಈ ಸಂಧರ್ಭದಲ್ಲಿ ಜಿ.ಪಂ ಸದಸ್ಯ ರಾಮಣ್ಣ ಸಾಲಭಾವಿ , ತಾ.ಪಂ ಅಧ್ಯಕ್ಷೆ ಮಹಾದೇವಿ ಕಂಬಳಿ ,ತಾ.ಪಂ ಉಪಾಧ್ಯಕ್ಷ ಶೇಖರಪ್ಪ ವಾರದ ,ಪ.ಪಂ ಅದ್ಯಕ್ಷೆ ಭಾಗೀರಥಿ ಜೋಗಿನ ,ಪ.ಪಂ ಉಪಾದ್ಯಕ್ಷೆ ಜಯಶ್ರೀ ಅರಕೇರಿ , ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಮಹೇಶ ಹಳ್ಳಿ ,ಸಿ.ಪಿ.ಐ ನಾಗರಾಜ ಕಮ್ಮಾರ , ಪಿ.ಎಸ್.ಐ ವಿನಾಯಕ , ,ಶರಣಪ್ಪ ಗಾಂಜಿ, ಪ.ಪಂ ಸದಸ್ಯರಾದ ಸಿದ್ದರಾಮೇಶ ಬೇಲೆರಿ ,ನಂದಿತಾ ದಾನರೆಡ್ಡಿ , ಶರಣಮ್ಮ ಪೂಜಾರ ಮತ್ತಿತರರು ಇದ್ದರು.

ತು ಕೈಗಾರಿಕೊದ್ಯಮ ಮಾಡಿ ತಾಲೂಕನ್ನು ಮಾದರಿಯನ್ನಾಗಿ ಮಾಡುವುದು ನನ್ನ ಕನಸಾಗಿದೆ ಎಂದರು.

Please follow and like us:
error