You are here
Home > Koppal News > ಜೆಡಿಎಸ್‌ಗೆ ಅನ್ಸಾರಿಯವರು ಅನಿವಾರ್ಯವಲ್ಲ : ಮಹಾಂತಯ್ಯನಮಠ

ಜೆಡಿಎಸ್‌ಗೆ ಅನ್ಸಾರಿಯವರು ಅನಿವಾರ್ಯವಲ್ಲ : ಮಹಾಂತಯ್ಯನಮಠ

ಜೆಡಿಎಸ್ ಅನ್ಸಾರಿಯವರಿಗೆ ಅನಿವಾರ್ಯ, 
ಕೊಪ್ಪಳ, ಜ.೨೭ : ಜಾತ್ಯಾತೀತ ಜನತಾದಳ ಪಕ್ಷವು ಸಾಕಷ್ಟು ನಾಯಕರನ್ನು ನಾಡಿಗೆ ಕೊಡುಗೆಯಾಗಿ ನೀಡಿದೆ. ಅಂತೆಯೇ ಅನ್ಸಾರಿ ಜೆಡಿಎಸ್ ಕೂಡ ಅನಿವಾರ್ಯವಲ್ಲ, ಶಾಸಕರಾದ ಇಕ್ಬಾಲ್ ಅನ್ಸಾರಿ ಈ ಹಿಂದೆ ಪಕ್ಷ ಬಿಟ್ಟು ಮತ್ತೇ ಪಕ್ಷ ಸೇರಿದ ಅನಿವಾರ್ಯತೆ ಅವರಿಗೆ ಹೊರತು ಪಕ್ಷಕ್ಕಿಲ್ಲವೆಂಬುದನ್ನು ಅವರು ಮನದಟ್ಟ ಮಾಡಿಕೊಳ್ಳಬೇಕು ಎಂದು ಜೆಡಿಎಸ್ ಪಕ್ಷದ ಮುಖಂಡ ವೀರೇಶ ಮಹಾಂತಯ್ಯನಮಠ ತಿಳಿಸಿದ್ದಾರೆ.

ಅವರು ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ, ಹಿಂದೆ ಇಕ್ಬಾಲ್ ಅನ್ಸಾರಿಯವರು ಪಕ್ಷದಡಿಯಲ್ಲಿ ಶಾಸಕರಾಗಿ, ಸಚಿವರಾಗಿ ಅಧಿಕಾರ ಅನುಭವಿಸಿದರು. ತದ ನಂತರ ಪಕ್ಷ ಬಿಟ್ಟು ಹೋಗಿದ್ದರು. ತಪ್ಪಿನ ಅರಿವಿನಿಂದ ಪುನಃ ಪಕ್ಷಕ್ಕೆ ಮರಳಿ ಬಂದಾಗ ಪಕ್ಷದ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರಾದ, ಮಾಜಿ ಪ್ರಧಾನಿ    ಹೆಚ್.ಡಿ. ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ  ಹೆಚ್.ಡಿ. ಕುಮಾರಸ್ವಾಮಿಯವರು ತೋರಿದ ಅನುಕಂಪದಿಂದ ಹಾಗೂ ಜಿಲ್ಲೆಯ ಪಕ್ಷದ ನಾಯಕರು ಬೆಂಬಲಿಸಿದ ಪರಿಣಾಮವಾಗಿಯೇ ಅವರು ಇಂದು ಶಾಸಕರಾಗಿದ್ದಾರೆ. ಮಾಜಿ ಮುಖ್ಯಮಂತ್ರಿ  ಹಾಗೂ ರಾಜ್ಯಾಧ್ಯಕ್ಷ  ಹೆಚ್.ಡಿ. ಕುಮಾರಸ್ವಾಮಿಯವರು ನೀಡಿದ ಜೆಡಿಎಸ್ ಪಕ್ಷದ ‘ಬಿ’ ಪಾರಂನಿಂದ ಚುನಾವಣೆ ಎದುರಿಸಿದ ಶಾಸಕರಾದ ಇಕ್ಬಾಲ್ ಅನ್ಸಾರಿ ಇಂದು ಅವರನ್ನು ಪ್ರಶ್ನಿಸುವ ಹಕ್ಕು ಅವರಿಗಿಲ್ಲ. ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿಗೆ ತಾಕತ್ತಿದ್ದರೇ ಕನಕಗಿರಿ ಜಿಲ್ಲಾ ಪಂಚಾಯತ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ “ರಸೂಲಸಾಬ ಮಖಂದರ್” ರವರನ್ನು ಗೆಲ್ಲಿಸಲಿ ಎಂದು ಮಹಾಂತಯ್ಯಮಠ ಸವಾಲೆಸಗಿದ್ದಾರೆ. ಈ ಹಿಂದಿನ ಅನೇಕ ಚುನಾವಣೆಗಳಲ್ಲಿ ಅನ್ಯಪಕ್ಷಗಳ ನಾಯಕರೊಂದಿಗೆ ಓಳ ಒಪ್ಪಂದ ಮಾಡಿಕೊಂಡು ಪಕ್ಷದ ಅಭ್ಯರ್ಥಿಗಳನ್ನು ಯಾಮಾರಿಸುತ್ತಾ ಬಂದಿರುವ ಅನ್ಸಾರಿಯ ನಿಜ ಬಣ್ಣ ಈಗ ಬಯಲಾಗಿದೆ. ಅವರ ಹದ್ದುಮಿರಿದ ವರ್ತನೆಗೆ ಮುಂದಿನ ದಿನಮಾನಗಳಲ್ಲಿ ಕಾಲವೇ ಅವರಿಗೆ ಉತ್ತರಿಸಲಿದೆ ಎಂದು ಕಿಡಿಕಾರಿದ ಅವರು, ಶಾಸಕರಾದ ಇಕ್ಬಾಲ್ ಅನ್ಸಾರಿ ಗಂಗಾವತಿಗೆ ಮಾತ್ರ ತಾವು ಸಿಮಿತಿ ಎಂಬುದನ್ನು ತಮ್ಮ ಹೇಳಿಕೆಯಿಂದ ತಾವೇ ಸಾಬೀತುಪಡಿಸಿಕೊಂಡಿದ್ದಾರೆ. ಅದರೆ ಇದುವರೆಗೂ ನಾವು ಅವರನ್ನು ರಾಜ್ಯಮಟ್ಟದ ನಾಯಕರು ಎಂದು ಭಾವಿಸಿದ್ದೇವು ಅದನ್ನು ಅವರೇ ತಮ್ಮ ಹೇಳಿಕೆ ಮೂಲಕ ತಾವು ಗಂಗಾವತಿಗೆ ಮಾತ್ರ ಸಿಮಿತಿ ಎಂದು ಸಾಭೀತು ಪಡಿಸಿಕೊಂಡಿದ್ದಾರೆ. ಒಟ್ಟಾರೆ ಅವರೇ ಇಂದು ಪಕ್ಷಕ್ಕೆ ಉಂಡಮನೆಗೆ ಜಂತಿ ಏಣೆಸುವಂತೆ ನಡೆದುಕೊಳ್ಳುತ್ತಿರುವುದು ಜಿಲ್ಲಾ ಜೆಡಿಎಸ್ ಪಕ್ಷವನ್ನು ಮುಜುಗರಕ್ಕೀಡು ಮಾಡಿದ್ದಾರೆ.  ಅದೇ ರೀತಿ ನಮ್ಮ ಬಗ್ಗೆ ಹಗುರವಾಗಿ ಮಾತನಾಡುವ ನೈತಿಕಹಕ್ಕು ಶಾಸಕ ಇಕ್ಬಾಲ್ ಅನ್ಸ್ಸಾರಿಯವರಿಗಿಲ್ಲ. ಹಾಗೇ ಅವರು ಪಕ್ಷದ ಮುಖಂಡರ ಬಗ್ಗೆ ಗೌರವದಿಂದ ಮಾತನಾಡಬೇಕು. ಅದು ಬಿಟ್ಟು, ಪಕ್ಷ ಹಾಗೂ ಮುಖಂಡರನ್ನು ಹಿಯಾಳಿಸಿ ಮತನಾಡುತ್ತಿರುವುದು ಸರಿಯಲ್ಲ. ಬೇಕಾದರೆ ಅವರು ಪಕ್ಷ ಬಿಟ್ಟು ಹೋಗಲಿ ಇದರಿಂದ ಪಕ್ಷಕ್ಕೇನು ನಷ್ಟವಿಲ್ಲ. ಜಿಲ್ಲೆಯಲ್ಲಿ ಪಕ್ಷ ಕಟ್ಟುವುದು ಪಕ್ಷದ ಪ್ರಾಮಾಣಿಕ ಕಾರ್ಯಕರ್ತರಿಗೆ ಹಾಗೂ ನಾಯಕರಿಗೆ ಗೊತ್ತಿದೆ ಎಂದು ಸವಾಲೆಸೇದಿದ್ದಾರೆ.  

Leave a Reply

Top