fbpx

ಗರಡಿ ಮನೆಗಳನ್ನು ನಿರ್ಮಿಸಲು ಒತ್ತಾಯ

 ಕರ್ನಾಟಕ ಸರ್ಕಾರ ಹಳ್ಳಿಗೊದು ಆಟದ ಮೈದಾನ ಯೋಜನೆ ಜಾರಿಗೆ ತರುತ್ತಿರುವದು ಸ್ವಾಗತಾರ್ಹ ಇದರಿಂದ ಹಳ್ಳಿಗಳಲ್ಲಿ ಮಕ್ಕಳು ಆಡುತ್ತ ಆರೋಗ್ಯಕರವಾಗಿ ಬೆಳೆಯಲು ತುಂಬ ಉಪಯುಕ್ತವಾಗಿದೆ. ಅದರ ಜೊತೆಯಲ್ಲೇ ಆಟದ ಮೈದಾನಗಳಲ್ಲಿ ಗರಡಿ ಮನೆ ನಿರ್ಮಿಸಿದರೆ ಗ್ರಾಮೀಣ ಭಾಗದಲ್ಲಿ ಆರೋಗ್ಯಕರ ಹಾಗೂ ಸದೃಢ ಯುವಕರು ರೂಪಗೊಳ್ಳುತ್ತಾರೆ. ಹೀಗಾಗಿ ತಾವು ಜಾರಿ ತರಲು ಪ್ರಯತ್ನಿಸುತ್ತಿರುವ ಹಳ್ಳಿಗೊಂದು ಆಟದ ಮೈದಾನದ ಯೋಜನೆಯಲ್ಲಿ ಸ್ವಲ್ಪ ಮಾರ್ಪಡಿಸಿ ಅದರಲ್ಲಿ ಗರಡಿ ಮನೆಗಳನ್ನು ಸೇರಿಸಿ ಜಾರಿಗೊಳಿಸುವದರಿಂದ ಗ್ರಾಮೀಣ ಹಾಗೂ ಐತಿಹಾಸಿಕ ರಾಜರ ಕಾಲದ ಕುಸ್ತಿ ಕಲೆಯನ್ನು ಕಾಪಾಡಿ ಮುಂದಿನ ಪೀಳಿಗೆಗೂ  ಒದಗಿಸಿದಂತಾಗುತ್ತದೆ.
ಈಗಾಗಲೇ ನಗರ ಪ್ರದೇಶಗಳಲ್ಲಿ ಹಾಗೂ ಕೆಲ ಹಳ್ಳಿಗಳಲ್ಲಿಯ ಗರಡಿ ಮನೆಗಳ ಶೀಥಲಗೊಂಡಿದ್ದು, ಬಿದ್ದಿದ್ದು, ಗರಡಿ ಮನೆಗಳನ್ನು ಕಟ್ಟಿಸುವ ಮೂಲಕ ಗರಡಿ ಮನೆಗಳನ್ನು ಪುನಶ್ಚೇತನಗೊಳಿಸಬೇಕು.
ಹೊಬಳಿ, ತಾಲೂಕ, ಜಿಲ್ಲಾ, ರಾಜ್ಯ ಮಟ್ಟದಲ್ಲಿ ಕುಸ್ತಿ ಸ್ವರ್ಧೆಗಳನ್ನು ಸರ್ಕಾರವೇ ಏರ್ಪಡಿಸುವುದು, ಕುಸ್ತಿ ಸ್ಪರ್ಧೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಕುಸ್ತಿ ಕಲೆಯನ್ನು ಪೋಷಿಸಬೇಕು. 
ಕುಸ್ತಿಪಟುಗಳಿಗೆ ನೀಡುತ್ತಿರುವ ಪಿಂಚಣಿಯನ್ನು ಮಾಸಿಕ ೫೦೦/- ರೂ ಬದಲಿಗೆ ಮೂರು ಸಾವಿರ ನೀಡಬೇಕು, ಗರಡಿ ಮನೆಗಳಿಗೆ ಪ್ರಣಿತಿ ಹೊಂದಿದೆ ಕುಸ್ತಿಪಟುಗಳನ್ನು ತರಬೇತಿಗೆ ನೇಮಿಸಿ ಮಾಸಿಕ ೧೦ ಸಾವಿರ ರೂ. ಗೌರವ ಧನ ನೀಡಬೇಕು ಎಂದು       ಮಂಜುನಾಥ ದೊಡ್ಡಮನಿ ಪೈಲ್ವಾನ್     ಜಾಫರ್ ಅಲಿ ಪೈಲ್ವಾನ್ ಸಚಿವರಾದ ಹೆಚ್.ಕೆ.ಪಾಟೀಲ್ ರಿಗೆ ಮನವಿ ಸಲ್ಲಿಸಿದರು.

ಆದರ್ಶ ಕುಸ್ತಿ ಕ್ರೀಡಾಪಟುಗಳ ಸಂಘ ಜಿಲ್ಲಾ ಘಟಕ    ಕೊಪ್ಪಳದ ಪದಾಧಿಕಾರಿಗಳಾದ ಎಸ್.ಎ.ಗಫಾರ್

Please follow and like us:
error

Leave a Reply

error: Content is protected !!