ಡಾ||ಬಿ.ಆರ್.ಅಂಬೇಡ್ಕರ ರಾಷ್ಟ್ರದ ಮಹಾನ್ ಸಮಾನತೆಯ ಹರಿಕಾರ-ಕೆ. ಬಸವರಾಜ ಹಿಟ್ನಾಳ

ಕೊಪ್ಪಳ:ಏ -ಮಹಾರಾಷ್ಠ್ರದ ರತ್ನಗಿರಿ ಜಿಲ್ಲೆಯ ಅಂಬೇವಾಡಿ ಎಂಬ ಕು-ಗ್ರಾಮದಲ್ಲಿ ರಾಮ್‌ಪಾಲ್‌ಜೀ ಮತ್ತು ಬೀಮಾಬಾಯಿ ದಂಪತಿಗಳ ಮಗನಾಗಿ ಜನಿಸಿದ ಡಾ||ಬಿ.ಆರ್.ಅಂಬೇಡ್ಕರವರು ಸಮಾಜದ ಅಸ್ಪ್ರುಶ್ಯತೆ ವ್ಯವಸ್ಥೆಯಿಂದ ಬಾಲ್ಯ ವ್ಯವಸ್ಥೆಯಲ್ಲಿ ಅನೇಕ ಕಷ್ಟಕಾಪ್ರಣ್ಯಗಳನ್ನು ಅನುಭವಿಸದರು. ವಿದೇಶದಲ್ಲಿ ಹೆಚ್ಚಿನ ವ್ಯಾಸಾಂಗ ಮುಗಿಸಿಕೊಂಡು ಸ್ವದೇಶಕ್ಕೆ ಬಂದು ಸ್ವತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೋಂಡು ಗಾಂಧಿ ಮತ್ತು ಮದನ್ ಮೋಹನ ಮಾಳ್ವೆಯವರ ಸಮಾಜಿಕ ತತ್ವಗಳನ್ನು ಅಳವಡಿಸಿಕೊಂಡರು. ಇವರೂಬ್ಬ ಮಹಾನ್ ರಾಷ್ಠ್ರಪ್ರೇಮಿಯಾಗಿದ್ದರು  ಎಂದು  ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಕೆ.ಬಸವರಾಜ ಹಿಟ್ನಾಳರ ಹೇಳಿದರು. ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಲಯದಲ್ಲಿ ಡಾ||ಬಾಬಾ ಸಾಹೇಬ್ ಅಂಬೇಡ್ಕರವರ ೧೨೪ನೇ ಜನ್ಮದಿನಾಚಾರಣೆ ಅಂಗವಾಗಿ ಮಾತನಾಡಿದ ಅವರು  ಭಾರತದ ಸಂವಿದಾನದ ಕರಡುಸಮಿತಿಯ ಅಧ್ಯಕ್ಷರಾದ ಡಾ||ಅಂಬೇಡ್ಕರವರು ಸಮಾಜದ ಎಲ್ಲಾ ವರ್ಗದ ಜನತೆಗೆ ಸರ್ಕಾರದಿಂದ ಸೌಲಭ್ಯ ಒದಗಿಸಲು ಸಮಾನತೆಯ ನೀತಿಯನ್ನು ಜಾರಿಗೆ ತಂದರು. ಭಾರತ ದೇಶವನ್ನು ಜಾತ್ಯಾತೀತ ರಾಷ್ಠ್ರವೇಂದು ಸಂವಿದಾನದಲ್ಲಿ ಘೋಷಿಸಿದರು. ಭಾರತದ ಕಾನೂನು ಸಚಿವರಾಗಿದ್ದ ಇವರು ಮಹಿಳೆಯರಿಗೂ ಎಲ್ಲಾ ಕ್ಷೇತ್ರಗಳಲ್ಲಿ ಪುರುಷರಷ್ಠೆ ಸಮಾನತೆ ಕಾಯ್ದೆ ಜಾರಿಗೆತರಬೇಕೆಂದು ಹೇಳಿದ್ದರು. ರಾಷ್ಟ್ರಕಂಡ ಮಹಾನ್ ನಾಯಕ ಡಾ||ಅಂಬೇಡ್ಕರವರು ಸದಾ ಅಮರರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಸ್.ಬಿ.ನಾಗರಳ್ಳಿ, ಶಾಂತಣ್ಣ ಮುದುಗಲ್, ಅಂದಣ್ಣ ಅಗಡಿ, ಜುಲ್ಲು ಖಾದರಿ, ಪ್ರಶಾಂತ ರಾಯ್‌ಕರ್, ಗವಿಸಿದ್ದಪ್ಪ ಮುದುಗಲ್, ಕೃಷ್ಣ ಇಟ್ಟಂಗಿ, ಇಂದಿರಾಭಾವಿ ಕಟ್ಟಿ, ವೈಜನಾಥ ದಿವಟರ್, ಎ.ವಿ.ಕಣವಿ ವಕೀಲರು, ಗವಿಸಿದ್ದಯ್ಯ ಹುಡೇಜಾಲಿ, ಮಾನ್ವಿಪಾಷಾ, ಇಬ್ರಾಹಿಂಅಡ್ಡೆವಾಲೆ, ಅಜ್ಜಪ್ಪ ಸ್ವಾಮಿ, ನೂರುಜಾಹನ್ ಬೇಗಂ, ಚನ್ನಮ್ಮ, ನೀಲಾಂಬರಿ,ವಕ್ತಾರ ಅಕ್ಬರಪಾಷಾ ಪಲ್ಟನ  ಶಿವು ಕೊಣಂಗಿ, ಮಂಜುಳಾ ಉಪಸ್ಥಿತರಿದ್ದರು.  ಶಿವಾನಂದ ಹೂದ್ಲೂರು ಕಾರ್ಯಕ್ರಮ ನಿರೂಪಿಸಿ ಕೊನೆಗೆ ವಂದಿಸಿದರು.

Leave a Reply