ಕಡಲೆ ಬೆಳೆಯಲ್ಲಿ ಎಲೆ ತಿನ್ನುವ ಕೀಡೆ ಬಾಧೆ ನಿರ್ವಹಣೆಗೆ ಸಲಹೆಗಳು.

ಕೊಪ್ಪಳ
ಅ. ೨೧ (ಕ ವಾ) ಜಿಲ್ಲೆಯಲ್ಲಿ ಹೆಚ್ಚಿನ ಪ್ರದೇಶದಲ್ಲಿ ಕಡಲೆ
ಬಿತ್ತನೆಯಾಗಿದ್ದು ಮೊಳಕೆ ಹಾಗೂ ಬೆಳವಣಿಗೆ ಹಂತದಲ್ಲಿದೆ. ಈಗಾಗಲೆ ಕೆಲವು ಗ್ರಾಮಗಳಲ್ಲಿ
ಈ ಬೆಳೆ ಎಲೆ ತಿನ್ನುವ ಹುಳುಗಳ ಬಾಧೆಗೊಳಗಾಗುತ್ತಿದೆ. ಎಲೆ ತಿನ್ನುವ ಕೀಡೆಗಳು
ಪ್ರಾರಂಭಿಕ ಹಂತದಲ್ಲಿ ಎಲೆಯ ಹಸಿರು ಭಾಗವನ್ನು ಕೆರೆದು ತಿನ್ನುತ್ತವೆ. ನಂತರ ಎಲೆ,
ಮೊಗ್ಗು ಮತ್ತು ಕಾಯಿಗಳನ್ನು ತಿನ್ನುತ್ತವೆ. ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿದ್ದರೆ
ಮುಂದಿನ ಹಂತದಲ್ಲಿ ಸಾಕಷ್ಟು ಬೆಳೆ ನಷ್ಟವಾಗುವ ಸಂಭವವಿರುತ್ತದೆ.
     ಕೀಡೆ ಹಾಗು
ರೋಗ ನಿರ್ವಹಣಾ ಕ್ರಮಗಳಿಗೆ ಸಲಹೆಗಳು ಇಂತಿವೆ.  ಕಡಲೆ ಬಿತ್ತುವಾಗ ಎಕರೆಗೆ ೫೦ ಗ್ರಾಂ
ನಷ್ಟು ಜೋಳ ಹಾಗೂ ಸೂರ್ಯಕಾಂತಿ ಬೀಜಗಳನ್ನು ಬಿತ್ತುವುದರಿಂದ ಪಕ್ಷಿಗಳಿಗೆ ಕೀಡೆಗಳನ್ನು
ಹೆಕ್ಕಿ ತಿನ್ನಲು ಸಹಕಾರಿಯಾಗುತ್ತವೆ.  ಹಕ್ಕಿಗಳು ಕೀಡೆಗಳನ್ನು ತಿನ್ನಲು ಆಶ್ರಯಕ್ಕೆ
ಎತ್ತರವಿರುವ ಮರದ ಟೊಂಗೆಗಳನ್ನು ಅಲ್ಲಲ್ಲಿ ನೆಡಬೇಕು.  ಮೊದಲನೆಯ ಸಿಂಪರಣೆಯಾಗಿ
ತತ್ತಿಗಳನ್ನು ನಾಶಪಡಿಸಲು ೦.೬ ಗ್ರಾಂ ಮಿಥೋಮಿಲ್ ೪೦ ಎಸ್.ಪಿ ಅಥವಾ ೦.೬ ಗ್ರಾಂ
ಥೈಯೋಡಿಕಾರ್ಬ್ ೭೫ ಡಬ್ಲ್ಯೂ ಪಿ ಅಥವಾ ೨ ಮಿ.ಲೀ ಪ್ರೋಫೆನೋಫಾಸ್ ೫೦ ಇ.ಸಿ ಪ್ರತೀ ಲೀ.
ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.  ೧೦ ಗಿಡಗಳಲ್ಲಿ ಒಂದು ಕೀಡೆ ಕಂಡುಬಂದರೆ
ಪ್ಲೂಬೆಂಡಿಯೊಮೈಡ್ ೪೮೦ ಎಸ್.ಸಿ ೦.೦೭೫ ಮಿ.ಲೀ, ರೈನಾಕ್ಷಿಪೈರ್ ೦.೧೫ ಮಿ.ಲೀ, ೦.೩
ಮಿ.ಲೀ ಇಂಡಾಕ್ಸಕಾರ್ಬ್ ೧೫ ಎಸ್.ಸಿ ಅಥವಾ ೦.೧ ಮಿ.ಲೀ ಸ್ಪೈನೋಸ್ಯಾದ್, ೨.೫ ಮಿ.ಲೀ
ಕ್ಲೋರ್‌ಪೈರಿಫಾಸ್ ೨೦ ಇ.ಸಿ ಅಥವಾ ೨ ಮಿ.ಲೀ ಕ್ವಿನಾಲ್‌ಫಾಸ್ ೨೫ ಇ.ಸಿ ಪ್ರತೀ ಲೀಟರ್
ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.  ೧ ಕೆ.ಜಿ ಬೆಳ್ಳುಳ್ಳಿಯನ್ನು ೧೦೦ ಮಿ.ಲೀ ಸೀಮೆ
ಎಣ್ಣೆಯಲ್ಲಿ ನೆನೆ
ನೆಟೆ/ಸಿಡಿ
ರೋಗದ ನಿರ್ವಹಣೆಗೆ, ಬಿತ್ತುವಾಗ ಪ್ರತೀ ಕೆ.ಜಿ ಬೀಜಕ್ಕೆ ೪ ಗ್ರಾಂ ಟ್ರೈಕೋಡರ್ಮ
ಶಿಲೀಂದ್ರನಾಶಕದಿಂದ ಬೀಜೋಪಚಾರ ಮಾಡಬೇಕು.  ರೋಗ ಪೀಡಿತ ಸಸ್ಯಗಳನ್ನು ಕಿತ್ತು
ನಾಶಪಡಿಸಬೇಕು
     ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ
ಕೇಂದ್ರದ ವಿಷಯ ತಜ್ಞರಾದ ರೋಹಿತ್ ಕೆ.ಎ (೯೮೪೫೧೯೪೩೨೮) ಇವರನ್ನು ಸಂಪರ್ಕಿಸಬೇಕೆಂದು
ವಿಸ್ತರಣಾ ಮುಂದಾಳು ಡಾ. ಎಂ.ಬಿ ಪಾಟೀಲ (೯೪೮೦೬೯೬೩೧೯)

ಸಿ ಮಿಕ್ಸಿಯಲ್ಲಿ ರುಬ್ಬಿ ಮೂರು ಲೀಟರ್ ದ್ರಾವಣ ತಯಾರಿಸಿ ಎರಡು
ದ್ರಾವಣಗಳನ್ನು ನಾಲ್ಕು ನೂರು ಲೀಟರ್ ನೀರಿನಲ್ಲಿ ಬೆರೆಸಿ ಒಂದು ಎಕರೆ ಸಿಂಪರಣೆಗೆ
ಉಪಯೋಗಿಸಿ. ಶೇ.೫ರ ಬೇವಿನ ಬೀಜದ ಕಷಾಯವನ್ನು ಸಿಂಪಡಿಸಬೇಕು. ಈ ದ್ರಾವಣದ ಜೊತೆಗೆ ೧೦೦
ಗ್ರಾಂ ಸಾಬೂನಿನ ಪುಡಿಯನ್ನು ೩೦೦ ರಿಂದ ೪೦೦ ಲೀ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. 
ಕಾಳು ಕಟ್ಟುವ ಹಂತದಲ್ಲಿ ಪ್ರತೀ ಎಕರೆಗೆ ೧೦ ಸೇರು ಚುರುಮುರಿ (ಮಂಡಕ್ಕಿ/ಮಂಡುಳು) ಹೊಲದ
ತುಂಬೆಲ್ಲ ಚೆಲ್ಲುವುದರಿಂದ ಪಕ್ಷಿಗಳಿಗೆ ಕೀಡೆ ತಿನ್ನಲು ಪ್ರೋತ್ಸಾಹಿಸಿದಂತಾಗುತ್ತದೆ.

Please follow and like us:
error