ಇರಕಲ್ಲಗಡ ಕ್ಷೇತ್ರ : ಮೂರು ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

 : ಜಿಲ್ಲಾ ಪಂಚಾಯತಿಯ ಇರಕಲ್ಲಗಡಾ ಕ್ಷೇತ್ರ ಉಪಚುನಾವಣೆ ಸಂಬಂಧ ಫೆ. ೧೫ ರಂದು ಮೂವರು ಅಭ್ಯರ್ಥಿಗಳಿಂದ ೦೫ ನಾಮಪತ್ರ ಸಲ್ಲಿಕೆಯಾಗಿದೆ. 
  ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದ ಫೆ. ೧೫ ರಂದು ಸಲ್ಲಿಕೆಯಾಗಿರುವ ನಾಮಪತ್ರಗಳ ವಿವರ ಇಂತಿದೆ.  ದನಕನದೊಡ್ಡಿ ಗ್ರಾಮದ ರೇಣುಕಮ್ಮ ಗಂಡ ನಿಂಗಪ್ಪ ಕುಷ್ಟಗಿ ಅವರು ಜೆ.ಡಿ.ಎಸ್. ಅಭ್ಯರ್ಥಿಯಾಗಿ ಒಂದು ನಾಮಪತ್ರ ಸಲ್ಲಿಸಿದ್ದಾರೆ.  ಚಿಲಕಮುಖಿ ಗ್ರಾಮದ ರೇಣುಕಾ ಗಂಡ ನಿಂಗಪ್ಪ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಎರಡು ನಾಮಪತ್ರ, ಮತ್ತು ಯಲಮಗೇರಾ ಗ್ರಾಮದ ಕಸ್ತೂರಮ್ಮ ಗಂಡ ಬಸನಗೌಡ ಅವರು ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಎರಡು ನಾಮಪತ್ರ ಸಲ್ಲಿಸಿದ್ದಾರೆ.  ಒಟ್ಟಾರೆ ಈವರೆಗೆ ಮೂವರು ಅಭ್ಯರ್ಥಿಗಳಿಂದ ೦೬ ನಾಮಪತ್ರಗಳು ಸಲ್ಲಿಕೆಯಾಗಿವೆ.   ಫೆ. ೧೬ ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ.  ಫೆ. ೧೮ ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕವಾಗಿದ್ದು, ಮತದಾನದ ಅಗತ್ಯ ಬಿದ್ದಲ್ಲಿ, ಮತದಾನವು ಫೆ. ೨೬ ರಂದು ಬೆಳಿಗ್ಗೆ ೭ ಗಂಟೆಯಿಂದ ಸಂಜೆ ೫ ಗಂಟೆಯವರೆಗೆ ನಡೆಯಲಿದೆ ಎಂದು ಜಿ.ಪಂ. ಇರಕಲ್ಲಗಡ ಕ್ಷೇತ್ರ ಚುನಾವಣಾಧಿಕಾರಿಯಾಗಿರುವ ಸಹಾಯಕ ಆಯುಕ್ತ ಎಂ. ಶರಣಬಸಪ್ಪ  ತಿಳಿಸಿದ್ದಾರೆ.
Please follow and like us:
error