ಕುವೆಂಪು ಶಾಲೆಗೆ ಶೇ ೮೬% ರ ಫಲಿತಾಂಶ

 ಕೊಪ್ಪಳ ನಗರದ ಕುವೆಂಪು ಪ್ರೌಢಶಾಲೆಯ ೨೦೧೩-೧೪ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಶೇ ೮೬%  ರಷ್ಟು ದಾಖಲೆ ಫಲಿತಾಂಶ ಗಳಿಸಿದೆ. 
ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ೪೯ ವಿದ್ಯಾರ್ಥಿಗಳು ಹಾಜರಾಗಿದ್ದು ಅದರಲ್ಲಿ  ೨ ಡಿಸ್ಟಿಂಕ್ಷನ್, ೨೧ ಪ್ರಥಮ ದರ್ಜೆ, ೮ ದ್ವಿತೀಯ ದರ್ಜೆ  ಹಾಗೂ ೧೧ ತೃತೀಯ ದರ್ಜೆಯಲ್ಲಿ ಪಾಸಾಗಿರುತ್ತಾರೆ.   
ಶಾಲೆಗೆ ಶೇ ೯೧.೨೦ ರಷ್ಟು ಫಲಿತಾಂಶವನ್ನು ಕುಮಾರಿ ಸಹನಾ ಚನ್ನಪ್ಪ ದಿನ್ನಿ ,   ರೂಪಾ ಕಟ್ಟಿಮನಿ ೮೬.೭೨%, ಸರಸ್ವತಿ ಅರಕೇರಿ ೮೪.೯೬%, ಭವ್ಯಾ ಮೋಟಗಿ ೮೨.೫೬, ಪೂಜಾ ಕುಲಕರ್ಣಿ ೮೧.೭೬%,  ಅಕ್ಷೆಯ ಟೆಂಗಿನಕಾಯಿ ೮೦.೦೦%, ಸಿಂದು ಸಾನಬಾಳ ೮೦.೦೦% ಪಡೆದಿರುತ್ತಾರೆ ಉತ್ತಮ ಸಾಧನೆಗೈದ ಎಲ್ಲಾ ಮಕ್ಕಳಿಗೆ , ಸಹಕರಿಸಿದ ಪಾಲಕರು ಮತ್ತು ಶಿಕ್ಷಕವೃಂದಕ್ಕೆ ಈ ಸಂಸ್ಥೆಯ ಅಧ್ಯಕ್ಷರು ಹಾಗೂ ಎಲ್ಲಾ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದನೆಯನ್ನು ಸಲ್ಲಿಸಿದ್ದಾರೆ. 
Please follow and like us:
error