ಸುರೇಶ ಭೂಮರೆಡ್ಡಿಗೆ ವಿಶ್ವಜ್ಯೋತಿ ಪ್ರಶಸ್ತಿ ಪ್ರದಾನ

ಕೊಪ್ಪಳ, ನ. ೧೦. ಕೊಪ್ಪಳ ಜಿಲ್ಲೆಯ ಸಮಾಜ ಸೇವಕ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಭುಮರೆಡ್ಡಿಗೆ ವಿಶ್ವಜ್ಯೋತಿ ರಾಷ್ಟ್ರೀಯ ಭಾವೈಕ್ಯತಾ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಸಾಮಾಜಿಕ ಸೇವೆ ಹಾಗೂ ತಾಂತ್ರಿಕ ಸೇವೆಯನ್ನು ಪರಿಗಣಿಸಿ ಇಂದು ನಗರದ ಅವರ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಚಲನಚಿತ್ರ ನಿರ್ದೇಶಕ ಹಾಗೂ ಪತ್ರಕರ್ತ ರಮೇಶ ಸುರ್ವೆ ಹಾಗೂ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ  ಮಂಜುನಾಥ ಜಿ. ಗೊಂಡಬಾಳ ಪ್ರಶಸ್ತಿ ಪ್ರದಾನ ಮಾಡಿದರು.
ಹಲವಾರು ಜನರ ಸಮ್ಮುಖದಲ್ಲಿ ಶುಭಹಾರೈಸಿ ಕೊಪ್ಪಳದ ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ಹಾಗೂ ವಿಶ್ವ ಎಜ್ಯುಕೇಶನಲ್ ಆಂಡ್ ವೆಲ್‌ಫೇರ್ ಅಕಾಡೆಮಿ ಸಂಯುಕ್ತವಾಗಿ ಪ್ರಶಸ್ತಿ ನೀಡಿ ಗೌರವಿಸಿತು. ಈ ಸಂದರ್ಭದಲ್ಲಿ ಗುತ್ತಿಗೆದಾರರಾದ ಷಣ್ಮುಖಪ್ಪ ಘಂಟಿ, ನಿಸಾಮುದ್ದೀನ ದಫೇದಾರ್, ಕರಾಟೆ ಶಿಕ್ಷಕ, ಯುವ ಮುಖಂಡ ಶ್ರೀನಿವಾಸ ಪಂಡಿತ, ಕಮಲ್ ಪಾಶಾ ಒಂಟಿ ಇನ್ನಿತರರಿದ್ದರು.

Related posts

Leave a Comment