ಎಬಿವಿಪಿ ಪ್ರತಿಭಟನೆ

ಪಿ.ಯು. ವಿದ್ಯಾರ್ಥಿಗಳಿಗೆ ತಕ್ಷಣವೇ ಪಠ್ಯ-ಪುಸ್ತಕ ವಿತರಿಸಲು ಹಾಗೂ ಸರ್ಕಾರಿ ಕಾಲೇಜುಗಳಲ್ಲಿ ಉಪನ್ಯಾಸಕರನ್ನು ನೇಮಿಸಲು ಆಗ್ರಹಿಸಿ ದಿನಾಂಕ ೨೭.೦೬.೨೦೧೩ ರಂದು ರಾಜ್ಯಾದ್ಯಂತ ಪ್ರತಿಭಟನೆ ಎಬಿವಿಪಿ 

ಸರ್ಕಾರಿ ಕಾಲೇಜುಗಳಲ್ಲಿ ಉಪನ್ಯಾಸಕರನ್ನು ನೇಮಿಸಲು  ಎಬಿವಿಪಿ ಆಗ್ರಹ :
 ರಾಜ್ಯದ ಬಹುತೇಕ ಸರ್ಕಾರಿ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆಯಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ತುಂಬ ತೊಂದರೆಯಾಗುತ್ತಿದ್ದು,  ತಕ್ಷಣವೇ ಸರ್ಕಾರ ಉಪನ್ಯಾಸಕರನ್ನು ನೇಮಿಸಿ, ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ಸರ್ಕಾರವನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಗ್ರಹಿಸುತ್ತದೆ. 
ವಿ.ವಿ.ಗಳ ಸಿಂಡಿಕೇಟ್ ಸದಸ್ಯತ್ವ ರದ್ದು: ಎಬಿವಿಪಿ ಖಂಡನೆ
ಈ ಹಿಂದಿನ ಸರ್ಕಾರ ನಾಮ ನಿರ್ದೇಶಿಸಿದ್ದ ಬೆಂಗಳೂರು, ಮೈಸೂರು ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ವಿ.ವಿ.ಗಳ ಸಿಂಡಿಕೇಟ್ ಸದಸ್ಯತ್ವವನ್ನು ಪ್ರಸ್ತುತ ಸರ್ಕಾರ ರದ್ದು ಮಾಡಿ ಆದೇಶಿಸಿರುವ ಕ್ರಮವನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಖಂಡಿಸುತ್ತದೆ.
ವಿಶ್ವವಿದ್ಯಾಲಯಗಳು ಒಂದು ಸ್ವತಂತ್ರ ಸಂಸ್ಥೆಯಾಗಿದ್ದು, ವಿ.ವಿ.ಗಳು ತನ್ನದೇ ಆದ ಘನತೆ-ಗೌರವ ಹೊಂದಿವೆ. ಗುಣಮಟ್ಟದ ಶಿಕ್ಷಣ ನೀಡುವಲ್ಲಿ, ವಿ.ವಿ.ಯ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಶಿಕ್ಷಣತಜ್ಞರನ್ನು ಸಿಂಡಿಕೇಟ್ ಸದಸ್ಯರನ್ನಾಗಿ ನೇಮಿಸುತ್ತದೆ. ಆದರೆ ವಿ.ವಿ.ಯ ಸಿಂಡಿಕೇಟ್ ಸದಸ್ಯತ್ವವನ್ನು ಏಕಾಏಕಿ ರದ್ದುಪಡಿಸುವುದರಿಂದ ವಿ.ವಿ.ಗಳಲ್ಲಿ ಅಸ್ತಿರತೆ ಹಾಗೂ ಆಡಳಿತಾತ್ಮಕವಾಗಿ ವಿ.ವಿ.ಗಳ ಮೇಲೆ ಪರಿಣಾಮ ಬೀರಲಿದೆ. ಪ್ರಸ್ತುತ ಸರ್ಕಾರ ಇಂತಹ ದಿಢೀರ ನಿರ್ಧಾರದ ಕ್ರಮ ಸರಿಯಲ್ಲ. ಸರ್ಕಾರ ಇನ್ನೊಮ್ಮೆ ನಿರ್ಧಾರವನ್ನು ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹಾಗು ವಿ.ವಿ.ಗಳಲ್ಲಿ ಉನ್ನತ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸರ್ಕಾರ ಕಾಳಜಿ ವಹಿಸಬೇಕೆಂದು ಎಬಿವಿಪಿ ಆಗ್ರಹಿಸುತ್ತದೆ. 
ಈ ಪ್ರತಿಭಟನೆಯು ಸರಕಾರಿ ಕಾಲೇಜಿನಿಂದ ಆರಂಭವಾಗಿ ತಹಸಿಲ್ದಾರ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಪ್ರತಿಭಟನೆಯ ನೆತೃತ್ವವನ್ನು ರಾಜ್ಯ ಸಹ ಕಾರ್ಯದರ್ಶಿ ರಾಕೇಶ.ಪಾನಘಂಟಿ, ಜಿಲ್ಲಾ ಸಂಚಾಲಕ ಮೊನೇಶ ಕಮ್ಮಾರ, ರಾಜ್ಯಕಾರ್‍ಯಕಾರಿಣಿ ಸದಸ್ಯ ಗವಿಸಿದ್ದಪ್ಪ ಜಂತಕಲ್, ಜಿಲ್ಲಾ ಸಂಘಟನ ಕಾರ್ಯದರ್ಶಿ ಶಿವಾನಂದ ಬಿರಾದರ, ಅಮಿತ ಕಂಪ್ಲಿಕರ, ಸಂಕೇತ, ಚೇತನ, ಮಂಜುನಾಥ, ಪ್ರವೀಣ, ನಟರಾಜ, ಪರಶುರಾಮ ಮತ್ತು ಇತರರು ಭಾಗವಹಿಸಿದ್ದರು. 
Please follow and like us:
error