ನಾಳೆ ಮತ್ತು ನಾಡಿದ್ದು ಜೆ.ಡಿ.ಎಸ್ ಪಕ್ಷದ ವಿಧಾನಸಭೆ ಚುನಾವಣಾ ಪ್ರಚಾರ

ಕೊಪ್ಪಳ :- ಜಾತ್ಯಾತೀತ ಜನತಾದಳ ಮುಂಬರುವ ವಿಧಾನಸಭಾ ಚುನಾವಣೆ ಅಂಗವಾಗಿ ಜೆ.ಡಿ.ಎಸ್ ಜಿಲ್ಲಾಧ್ಯಕ್ಷ ಎಸ್.ಬಿ. ಖಾದ್ರಿ ಗಂಗಾವತಿ ಹಾಗೂ ಕೊಪ್ಪಳ ತಾಲೂಕ ಜೆ.ಡಿಎಸ್ ಅಧ್ಯಕ್ಷರ ನೇತೃತ್ವದಲ್ಲಿ ಮತ್ತು ಜೆ.ಡಿ.ಎಸ್ ಪಕ್ಷದ ಎಲ್ಲಾ ಘಟಕಗಳ ಪದಾಧಿಕಾರಿಗಳು ಹಾಗೂ ಹಿರಿಯ ಮುಖಂಡರು ಕಾರ್ಯರ್ತರ ನೇತೃತ್ವದಲ್ಲಿ ನಾಳೆ ದಿನಾಂಕ ೦೧-೦೪೨೦೧೩ ರ ಸೊಮವಾರದಂದು ಬೆಳಿಗ್ಗೆ ೮ ಗಂಟೆಗೆ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಠದಲ್ಲಿ ಪೂಜೆ ಸಲಿಸಿ ಶ್ರೀಗಳ ಆಶೀರ್ವಾದ ಪಡೆದು ಮತ್ತು ಸೈಯದ್ ಪೀರ್ ಷಾ ಖಾದ್ರಿ ದರ್ಗಾಕ್ಕೆ ಭೇಟಿ ನೀಡಿ ದರ್ಶನವನ್ನು ಪಡೇದು ಕೊಪ್ಪಳ ನಗರದಲ್ಲಿ ಪಾದಯಾತ್ರೆಯ ಮೂಲಕ ಪ್ರಚಾರ ಮಾಡಲಿದ್ದೇವೆ ಮತ್ತು ಅದೇ ರೀತಿ ದಿನಾಂಕ ೦೨-೦೪-೨೦೧೩ ರ ಮಂಗಳವಾರ ದಂದು ಹುಲಗಿ ಗ್ರಾಮದ ಶ್ರೀ ಹುಲಿಗೆಮ್ಮಾ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಹುಲಗಿ, ಹೊಸಹಳ್ಳಿ, ಹೊಸ ಲಿಂಗಾಪೂರ, ಮುನಿರಾಬಾದ್ ಗ್ರಾಮಗಳಲ್ಲಿ ಪ್ರಚಾರ ನಡೆಸಲಿದ್ದೆವೆ.    ಕೊಪ್ಪಳ ತಾಲೂಕಿನ ಜೆ.ಡಿ.ಎಸ್ ಪಕ್ಷದ ಎಲ್ಲಾ ಪದಾಧಿಕಾರಿಗಳು ಹಾಗೂ ಹಿರಿಯ ಮುಖಂಡರು ಹಾಗೂ ಯುವ ಮುಖಂಡರು ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗಿಳಿಸಬೇಕೆಂದು  ತಾಲೂಕ ಅಧ್ಯಕ್ಷರಾದ ಅಂದಪ್ಪ ಮರೆಬಾಳ ತಿಳಿಸಿದ್ದಾರೆ. 
Please follow and like us:
error