fbpx

ಮೊಬೈಲ್‌ಯುಗದಲ್ಲೂ ನಾಟಕ ಕಲೆ ಪೋಶಿಸುತ್ತಿರುವ ಯುವಕರ ಕೆಲಸ ಮೆಚ್ಚುವಂತದ್ದು – ಕೆ.ಎಂ. ಸಯ್ಯದ್.

ಕೊಪ್ಪಳ- ಆ,೨೬ ನಾಟಕಗಳು ಕೇವಲ ಮನೋರಂಜನೆ ನೀಡುವುದಷ್ಟೇಅಲ್ಲ ಬುದುಕಿ ನೀತಿ ಪಾಠವನ್ನು ಕಲಿಸಿಕೊಡುತ್ತವೆ. ನಾಟಕಗಳಲ್ಲಿ ಕೆಟ್ಟಪಾತ್ರಗಳಿಗೆ ಕೊನೆಗೆ ಶಿಕ್ಷೆಗಾಗುತ್ತದೆ. ನಿಜ ಜೀವನದಲ್ಲೂ ಕೂಡಾ ಹಾಗೇಯೇ. ಕೆಟ್ಟದನ್ನು ಇಲ್ಲಿಯೇ ಬಿಟ್ಟು ಒಳ್ಳೆಯನ್ನು ಮಾತ್ರ ತೆಗೆದುಕೊಂಡು ಹೋಗಿ ಕೆಟ್ಟವರೆಸಿಕೊಳ್ಳದೆ ಒಳ್ಳೆ ನಡೆನುಡಿ ಬೆಳೆಸಿಕೊಂಡು ಬಾಳಬೇಕು ಅಂದಾಗ ಮಾತ್ರ ಜೀವನ ಹಸನಾಗಿರುತ್ತದೆ ಎಂದು ಸಯ್ಯದ್ ಫೌಂಡೇಶನ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಕೆ.ಎಂ.ಸಯ್ಯದ್ ಹೇಳಿದರು. ಅವರು ಭಾಗ್ಯನಗರದ ಶ್ರೀಗುರು ವೀರಭದ್ರೇಶ್ವರ ೨೨ನೇ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ರಾತ್ರಿ ಏರ್ಪಡಿಸಿದ್ದ  ಸೇಡಿಟ್ಟ ಶ್ರೀರಾಮ ನಾಟಕ ಪ್ರದರ್ಶನ ಉದ್ಘಾಟಿಸಿ ಮತನಾಡುತ್ತಿದ್ದರು. ಇಂದಿನದಿನಗಳಲ್ಲಿ ನಾಟಕಮಾಡುವುದು ಕಷ್ಟಕರದ ಕೆಲಸ ನಾಟಕ ಅದ್ಭುತವಾದ ಕಲೆ ಎಲ್ಲರೂ ಮೋಬೈಲ್ ದಾಸರಾಗಿರುವ ಇಂದಿನ ದಿನಗಳಲ್ಲಿ ಇಷ್ಟಪಟ್ಟು ನಾಟಕ ಮಾಡುತ್ತಿರುವ ಶ್ರೀಗುರು ಬಸವೇಶ್ವರ ಯುವಕ ಮಂಡಳಿಯ ಯುವಕರ ಕೆಲಸ ಮೆಚ್ಚುವಂಹದ್ದು ಎಂದರು.
  ಮುಂದುವರೆದು ಮಾತನಾಡಿದ ಅವರು ನಮ್ಮ ಪುಟ್ಟರಾಜ ಗವಾಯಿಗಳು ನಾಟಕಗಳಿಗೆ ಹೆಚ್ಚು ಪ್ರೋತ್ಸಾಹಿಸಿ ಅಪಾರವಾದ ಕೊಡುಗೆ ನೀಡಿದ್ದಾರೆ ತಾವೇ ಸ್ವತಃ ಮನೆಮನೆಗಳಿಗೆ ತೆರಳಿ ದೇಣಿಗೆ ಸಂಗ್ರಹಿಸಿ ಸಂಕಷ್ಟದಲ್ಲಿರುವ ನಾಟಕ ಮಂಡಳಿಗಳಿಗೆ ನೀಡಿ ಕಲಾವಿದರುಗಳನ್ನು ಪ್ರೋತ್ಸಾಹಿಸುತ್ತಿದ್ದರು. ನಮ್ಮ ಈ ಭಾಗದಲ್ಲಿ ಬಹಳಷ್ಟು ಪ್ರತಿಭೆಗಳು ಎಲೆಮರೆ ಕಾಯಿಯಹಾಗಿವೆ ಅವುಗಳನ್ನು ಗುರುತಿಸುವ ಕೆಲಸ ಆಗಬೇಕಾಗಿದೆ. ಇಂದಿನ ದಿನಗಳಲ್ಲಿ ಧಾರಾವಾಹಿ ಮತ್ತು ಚಲನಚಿತ್ರಗಳಲ್ಲಿ ಬಹಳಷ್ಟು ಅವಕಾಶಗಳಿವೆ  ಸತತ ಪರಿಶ್ರಮದಿಂದ ಅವಕಾಶಗಳನ್ನು ಪಡೆದುಕೊಂಡು ಇಲ್ಲಿನ ಕಲಾವಿದರು ರಾಷ್ಟ್ರೀಯ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲಿ ಎಂದ ಅವರು ಬಹುದಿನ ಭಾಗ್ಯನ
     ಗುರುಬಸವೇಶ್ವರ ಟ್ರಸ್ಟ್ ಕಮೀಟಿ ಅಧ್ಯಕ್ಷ ಶಿವನಗೌಡ ಶಾಂತಗಿರಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು, ವಾಣೀಜ್ಯೋಧ್ಯಮಿ ಶ್ರೀನಿವಾಸ ಗುಪ್ತಾ  ಜ್ಯೋತಿ ಬೆಳಗಿಸಿದರು. ಮುಖ್ಯ ಅತಿಥಿಗಳಾಗಿ   ಜಿ.ಪಂ ಮಾಜಿ ಉಪಾಧ್ಯಕ್ಷ ಯಮನಪ್ಪ ಕಬ್ಬೇರ್, ಡಾ.ಕೊಟ್ರೇಶ್ ಶೇಡ್ಮಿ, ತಾ.ಪಂ ಸದಸ್ಯ ದಾನಪ್ಪ ಕವಲೂರ್, ಶ್ರೀನಿವಾಸ್ ಹ್ಯಾಟಿ, ತುಕಾರಾಂ ಗಡಾದ್, ಭೋಗಪ್ಪ ಡಾಣಿ, ಪಂಪಣ್ಣ ಕೆಂಚಗುಂಡಿ, ಮಹೇಶ್ ಹುರಕಡ್ಲಿ, ಬಸಣ್ಣ ಹ್ಯಾಟಿ, ಚನ್ನಪ್ಪ ತಟ್ಟಿ, ನೀಲಕಂಠಪ್ಪ ಮೈಲಿ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಂತರ ನಾಟಕ ಪ್ರದರ್ಶನ ಗೊಂಡು ಯಶಶ್ವಿಯಾಗಿ ಜರುಗಿ ಜನಮನಸೆಳೆಯಿತು.

ಗರ ರೇಲ್ವೆ ಗೇಟ್ ಮೇಲ್ಸೇತುವೆ ತಕ್ಷಣ ಕಾರ್ಯಾರಂಭವಾಗಲಿ ನಮ್ಮ  ರಾಜ್ಯ ಸರ್ಕಾರಕ್ಕೆ ಇಲ್ಲಿನ ಶಾಸಕರ ಮೂಲಕ ಮನವರಿಕೆಮಾಡಿ ಕೇಂದ್ರ ರ್ಕಾರದ ಮೇಲೆ ಒತ್ತಡ ತಂದು ಕಾರ್ಯರೂಪಕ್ಕೆ ತರಲು ನಾನುಸಹ  ಪ್ರಾಮಾಣಿಕ ಪ್ರಯತ್ನಮಾಡುವುದಾಗಿ ಸಯ್ಯದ್ ಫೌಂಡೇಶನ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಕೆ.ಎಂ.ಸಯ್ಯದ್ ಹೇಳಿದರು.

Please follow and like us:
error

Leave a Reply

error: Content is protected !!