ಬಿ.ಜೆ.ಪಿ. ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ.

   ಕೊಪ್ಪಳ-೧೩, ನಗರದ ಶಾಸಕರ ಕಾರ್ಯಲಯದಲ್ಲಿ ಅಳವಂಡಿ ಮಾಜಿ ಅಧ್ಯಕ್ಷರಾದ ಶ್ರೀ ಮಂಜುನಾಥ ಬಾವಿಕಟ್ಟಿ, ಗ್ರಾಮ ಪಂಚಾಯತ್ ಅಳವಂಡಿ ಸದಸ್ಯರಾದ ಭರಮಪ್ಪ ಬಿಸರಳ್ಳಿ, ಹಾಗೂ ಬಿ.ಜೆ.ಪಿ. ಮುಖಂಡರಾದ ಮಲ್ಲಪ್ಪ ಬೆಣಕಲ್ ಇವರು ತಮ್ಮ ಅಪಾರ ಬೆಂಗಲಿಗರೊಂದಿಗೆ ಜಿಲ್ಲಾ ಅಧ್ಯಕ್ಷ ಕೆ.ಬಸವರಾಜ ಹಿಟ್ನಾಳ ಇವರ ನೇತ್ರುತ್ವದಲ್ಲಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿಕೊಂಡು ಬಿ.ಜೆ.ಪಿ. ಪಕ್ಷ ತೊರೆದು ಕಾಂಗ್ರೆಸ್ ಗೆ ಸೇರ್ಪಡೆ

ಗೊಂಡರು. ಈ ಸಂದರ್ಭದಲ್ಲಿ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ, ಬ್ಲಾಕ್ ಅಧ್ಯಕ್ಷರಾದ ಎಸ್.ಬಿ.ನಾಗರಳ್ಳಿ, ಪ್ರಸನ್ನ ಗಡಾದ, ಪಕ್ಷದ ಮುಖಂಡರುಗಳಾದ ಅಮ್ಜದ್ ಪಟೇಲ್, ಕೆ.ಎಮ್.ಸಯ್ಯದ್, ಬಸವರೆಡ್ಡಪ್ಪ ಹಳ್ಳಿಕೇರಿ, ಸುರೇಶ ಭುಮರೆಡ್ಡಿ, ಹಟ್ಟಿ ಭರಮಪ್ಪ, ಸುರೇಶ ದಾಸರೆಡ್ಡಿ, ಬಸವರಾಜ ಹಾರಗೇರಿ, ಯುವಕಾಂಗ್ರೆಸ್ ಉಪಾಧ್ಯಕ್ಷ ಗುರುಬಸವರಾಜ ಹಳ್ಳಿಕೇರಿ, ನಜೀರ್, ಹನುಮಂತ ಹಳ್ಳಿಕೇರಿ, ಇನ್ನೂ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರೆಂದು ವಕ್ತಾರ ಅಕ್ಬರಪಾಷಾ ಪಲ್ಟನ ತಿಳಿಸಿದ್ದಾರೆ.

Please follow and like us:
error