ಸ್ವಾತಂತ್ರ್ಯದಲ್ಲಿ ಒಂದು ದಿನ ಹುಲಿಯಂತೆ ಬದುಕುವುದು ಲೇಸು.

ದಾಸ್ಯದಲ್ಲಿ ನೂರು ವರ್ಷ ನಾಯಿಯಂತೆ ಬಾಳುವುದುಕ್ಕಿಂತ ಸ್ವಾತಂತ್ರ್ಯದಲ್ಲಿ ಒಂದು ದಿನ ಹುಲಿಯಂತೆ ಬದುಕುವುದು ಲೇಸು.
ಕೊಪ್ಪಳ : ನಗರದ ಸರಸ್ವತಿ ವಿದ್ಯಾಮಂದಿರದಲ್ಲಿ ೨೬೩ನೇ ಟಿಪ್ಪು ಸುಲ್ತಾನ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಟಿಪ್ಪು ಸುಲ್ತಾನರವರ ಭಾವ ಚಿತ್ರಕ್ಕೆ ಶಾಲೆಯ ಮುಖ್ಯೋಪಾಧ್ಯಾಯರಾದ ರೇಣುಕಾ ಅತ್ತನೂರ ರವರು ಪೂಜೆ ನೇರವೆರಿಸಿ ಮಾತನಾಡಿದ ಟಿಪ್ಪುವಿಗೆ ಮೈಸೂರಿನ ಹುಲಿ ಎಂದು ಬಿರುದು ಬರಲು ಕಾರಣವೇನು ಎಂಬುವುದರ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ರೊಶನಿ ವಿದ್ಯಾರ್ಥಿನಿ ಟಿಪ್ಪು ಸುಲ್ತಾನರವರ ವೇಷಧರಿಸಿ ನೋಡುಗರನ್ನು ಗಮನಸೆಳೆದಳು. 
ಹಾಗೇ ಟಿಪ್ಪುವಿನ ಬಾಲ್ಯ ಜೀವನ ಅವರ ವ್ಯಕ್ತಿತ್ವದ ಬಗ್ಗೆ ಆಶಾ, ರೇಣುಕಾ, ಮುಬಿನಾ ಭಾನು, ನಿಶಾ, ನಿರ್ಮಲಾ ಇತರ ವಿದ್ಯಾರ್ಥಿಗಳು ಮಾತನಾಡಿದರು. 
ಟಿಪ್ಪು ಸ್ವಾತಂತ್ರ್ಯ ಹೋರಾಟದಲ್ಲಿ ಕತ್ತಿ ಎಳೆದು ರಣರಂಗದಲ್ಲಿ ಶತ್ರುಗಳನ್ನು ಸೋಲಿಸಿ ವೀರ ಮರಣ ಹೊಂದಿದ ಸಮರಗಳ ಬಗ್ಗೆ ಸಹ ಶಿಕ್ಷಕರಾದ ಜಿ.ಎ.ಗೌಡ್ರು, ಜಯಮ್ಮ, ಜ್ಯೋತಿ. ಕೆ ರವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಆರ್.ಹೆಚ್.ಅತ್ತನೂರು ರವರು ನಗುವಿನ ಮುಖದಲ್ಲಿ, ಪ್ರೀತಿಯಿಂದ ಹೃದಯ ವೈಶಲ್ಯ ಸನ್ನಡೆತೆಯಿಂದ ಗೌರವವನ್ನು ಹೆಚ್ಚಿಸಿಕೊಂಡು ನಾವು ಮಾದರಿಯಾಗಿ ಬದುಕೊಣ ಎಂದು ಈ ಶುಭ ಸಂದರ್ಭದಲ್ಲಿ ಕಿವಿ ಮಾತನ್ನು ಹೇಳಿದರು. 
ಆಶಾ ಅತ್ತನೂರ ಸಂಗಡಿಗರು ಪ್ರಾರ್ಥಿಸಿದರು, ಪರಮೇಶ ಚಿಂತಾಮಣಿ ಸ್ವಾಗತಿಸಿದರು, ಆಶಾ ದೊಡ್ಡಮನಿ ನಿರೂಪಿಸಿದರು.
Please follow and like us:

Related posts

Leave a Comment