ರೈತರಿಗೆ ವಿದ್ಯುತ್ ಪೂರೈಕೆಯಲ್ಲಿ ಸಿದ್ದು ಸರ್ಕಾರ ವಿಫಲ -ಸಿದ್ಲಿಂಗಯ್ಯಸ್ವಾಮಿ

ಕೊಪ್ಪಳ -೦೪ ರಾಜ್ಯದ ರೈತರಿಗೆ ಸಮರ್ಪಕ ವಿದ್ಯುತ್ ಪೂರೈಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಂಗ್ರೇಸ್ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದ್ದು. ಇಂಧನ ಸಚಿವ ಡಿ.ಕೆ. ಶಿವಕುಮಾರ ರೈತರಿಗೆ ೨೪ ಘಂಟೆ ನಿರಂತರವಾಗಿ ವಿದ್ಯುತ್ ನೀಡುತ್ತಿದ್ದೇವೆ ಎಂದು ಸುಳ್ಳು ಹೇಳಿಕೆಗಳನ್ನು ನೀಡಿ ರೈತರಿಗೆ ಮೋಸವೆಸಗುತ್ತಿದ್ದಾರೆ. ಒಟ್ಟಿನಲ್ಲಿ ರಾಜ್ಯದ ರೈತರ ಹಿತ ಕಾಪಾಡುವಲ್ಲಿ ಕಾಂಗ್ರೇಸ್ ಸರ್ಕಾರ ಬೇಜವಾಬ್ದಾರಿಯಾಗಿ ವರ್ತಿಸುತ್ತಿದೆ ಎಂದು ಬಿಜೆಪಿ ಮುಖಂಡ ಸಿದ್ಲಿಂಗಯ್ಯಸ್ವಾಮಿ ಹಿರೇಮಠರವರು ರಾಜ್ಯಸರ್ಕಾರ ವಿರುದ್ದ ಆಕ್ರೋಶ ವ್ಯೆಕ್ತಪಡಿಸಿ ಮಾತನಾಡಿದರು. 
ಅವರು ಸೋಮುವಾರ ನಗರದ ವಿದ್ಯುತ್ ಕಛೇರಿಗೆ ರೈತರು ಮುತ್ತಿಗೆ ಹಾಕಿ ಅಸಮರ್ಪಕ ವಿದ್ಯುತ್ ಪೂರೈಕೆ ಮತ್ತು ಲೋಡ್ ಶೆಡ್ಡಿಂಗ್ ಖಂಡಿಸಿ ಪಕ್ಷದ ರೈತ ಮೋರ್ಚ ಘಟಕದಿಂದ ಜೆಸ್ಕಾಂ ಕಛೇರಿ ಮುತ್ತಿಗೆ ಕಾರ್ಯಕ್ರಮದಲ್ಲಿ ಮಾತನಾಡಿ, ಕೊಪ್ಪಳ ಜಿಲ್ಲೆ ಮಳೆ ಇಲ್ಲದೆ ತೀವೃ ಬರಗಾಲ ಮತ್ತು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದು ರೈತರು ಅಲ್ಪ ಪ್ರಮಾಣದ ನೀರಿನ ಪಂಪಸೆಟ್‌ಗಳನ್ನೇ ನಂಬಿ ಅಲ್ಪ ಸ್ವಲ್ಪ ಬೆಳೆಗಳನ್ನು ಬೆಳೆದಿದ್ದು ಸರಿಯಾಗಿ ವಿದ್ಯುತ್ ಪೂರೈಕೆ ಇಲ್ಲದೆ ಬೆಳೆಗಳು ಒಣಗಿ ಹಾಳಾಗುವಂತಹ ಪರಸ್ಥತಿ ಉಂಟಾಗಿ ರೈತರು ಸಂಕಷ್ಟ  ಪಡುತ್ತಿದ್ದಾರೆ ಎಂದು ಹೇಳಿದರು. ಕೂಡಲೇ ಅನಿಯಮಿತ ಲೋಡ್ ಶೆಡ್ಡಿಂಗ್ ನಿಲ್ಲಿಸಬೇಕು, ರೈತರಿಗೆ ಕನಿಷ್ಠ ೮ ಘಂಟೆ ೩ ಪೇಸ್ ವಿದ್ಯುತ್ ಪೂರೈಸಬೇಕು, ಸುಟ್ಟುಹೋದ ಟ್ರಾನ್ಸಫಾರ‍್ಮಗಳನ್ನು ತಕ್ಷಣ ಬದಲಾಯಿಸಬೇಕು, ರೈತರ ಪಂಪಸೆಟ್‌ಗಳಿಗೆ ಶೀಘ್ರ ವಿದ್ಯುತ್ ಸಂಪರ್ಕ ಕಲ್ಪಿಸಬೇಕು, ಹಳೆಯ ತಂತಿಗಳನ್ನು ಮತ್ತು ಕಂಬಗಳನ್ನು ಬದಲಿಸಬೇಕು. ವಿದ್ಯುತ್ ನಷ್ಠ ತಪ್ಪಿಸಿ ರೈತರ ಪಂಪಸೆಟ್ ಉಳಿಸಬೇಕು. ಲೈನ್‌ಮ್ಯಾನ್‌ಗಳ ಕೊರತೆ ನೀಗಿಸಬೇಕು, ಅಕ್ರಮ ಪಂಪಸೆಟ್‌ಗಳನ್ನು ಸಕ್ರಮಗೊಳಿಸಬೇಕು ಎಂದು  ಜೆಸ್ಕಾಂ ಅಧಿಕಾರಿಗಳ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಅರ್ಪಿಸಿ ಒತ್ತಾಯಿಸಿದರು
ಇಂದು ನಡೆದ ಪ್ರತಿಭಟನೆಯಲ್ಲಿ ಸಿದ್ಲಿಂಗಯ್ಯಸ್ವಾಮಿ ಹಿರೇಮಠ ಅಳವಂಡಿ, ತಾಲೂಕ ರೈತ ಮೋರ್ಚಾ ಅಧ್ಯಕ್ಷ ದೇವಪ್ಪ ವೆಂಕಟಾಪೂರ, ಗ್ರಾಮಾಂತರ ಅಧ್ಯಕ್ಷ ಡಾ|| ಕೊಟ್ರೇಶ ಶೇಡ್ಮಿ, ಡಿ. ಮಲ್ಲಣ್ಣ, ದೇವರಾಜ ಹಾಲಸಮುದ್ರ, ಮಲ್ಲಪ್ಪ ಬೇಲೇರಿ, ಹಾಲೇಶ ಕಂದಾರಿ, ಪರಮಾನಂದ ಯಾಳಗಿ, ನಾಮದೇವ ಜಕ್ಕಲಿ, ಮುದಿಯಪ್ಪ ತಿಗರಿ, ಎಚ್,ಎ ಕುಟಗನಹಳ್ಳಿ ವಕೀಲರು, ಸುರೇಶ ಮುದೋಳ, ರಾಮನಗೌಡ ,ದೊಡ್ಡನಿಂಗಪ್ಪ, ಮಲ್ಲಪ್ಪ ದದೆಗಲ್, ವಡಿಕೇರಿ ಯಮನಪ್ಪ, ಬಸವನಗೌಡ ಪೋಲಿಸ್ ಪಾಟೀಲ್, ರವಿ ಹಟ್ಟಿ, ನಿಂಗಪ್ಪ, ಕರಿಬಸಪ್ಪ ಮೇಟಿ, ಹನುಮಂತಪ್ಪ ನಯಕ್, ಈರಯ್ಯ ಮೆತಗಲ್, ಇನ್ನು ಮುಂತಾದವರು ಪಾಲ್ಗೊಮಡಿದ್ದರು.

Leave a Reply