fbpx

ಕೇಂದ್ರ ಕೃಷಿ ಇಲಾಖೆ ಸ್ಥಾಯಿ ಸಮಿತಿಗೆ ಸಂಸದ ಸಂಗಣ್ಣ ಕರಡಿ ನೇಮಕ

 ಕೇಂದ್ರ ಸರ್ಕಾರದ ಕೃಷಿ ಇಲಾಖೆಗೆ ಸಂಬಂಧಿಸಿದ   ಸ್ಥಾಯಿ ಸಮಿತಿಯ ಸದಸ್ಯರನ್ನಾಗಿ ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರನ್ನು ನೇಮಕ ಮಾಡಲಾಗಿದೆ. 
  ಈ ಕುರಿತಂತೆ ಲೋಕಸಭೆ ಸಚಿವಾಲಯದ ಕೃಷಿ ಇಲಾಖೆ ಸಮಿತಿಯ ಉಪ ಕಾರ್ಯದರ್ಶಿಗಳು ನೇಮಕ ಕುರಿತಂತೆ ಸಂಸದರಿಗೆ ಪತ್ರ ಬರೆದಿದ್ದಾರೆ.
  ಕೇಂದ್ರ ಕೃಷಿ ಇಲಾಖೆ ೨೦೧೪-೧೫ ನೇ ಸಾಲಿಗಾಗಿ ಸ್ಥಾಯಿ ಸಮಿತಿಯನ್ನು ರಚಿಸಲಾಗಿದ್ದು, ಬಿಹಾರ ರಾಜ್ಯದ ಸಂಸದ   ನಾರಾಯಣ ಯಾದವ್ ಅವರು ಸಮಿತಿಯ ಅಧ್ಯಕ್ಷರಾಗಿರುತ್ತಾರೆ.  ಕೊಪ್ಪಳ ಸಂಸದ ಸಂಗಣ್ಣ ಕರಡಿ ಸೇರಿದಂತೆ ಒಟ್ಟು ೩೧ ಸಂಸದರು ಸಮಿತಿಯ ಸದಸ್ಯರುಗಳಾಗಿರುತ್ತಾರೆ.  ಸಮಿತಿಯು ೨೦೧೪ ರ ಸೆ. ೦೧ ರಿಂದ ೨೦೧೫ ರ ಆಗಸ್ಟ್ ೩೧ ರವರೆಗೆ ಕಾರ್ಯ ನಿರ್ವಹಿಸಲಿದೆ ಎಂದು ಆದೇಶ ಪತ್ರದಲ್ಲಿ ತಿಳಿಸಲಾಗಿದೆ .
Please follow and like us:
error

Leave a Reply

error: Content is protected !!