ಕನಕಗಿರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪ್ರಗತಿಪರ ಸಂಘಟನೆಗಳಿಂದ ಘೇರಾವ್

 ಕನಕಗಿರಿಯಲ್ಲಿ ವೇದಿಕೆಗೆ ಬಂದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪ್ರಗತಿಪರ ಸಂಘಟನೆಗಳ ಮುಖಂಡರು ಕಾರ್ಯಕರ್ತರೊಂದಿಗೆ ಘೇರಾವ್ ಹಾಕಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಕಾರ್ಯಕ್ರಮಕ್ಕೆ ಸ್ವಾಗತಿಸಿದ್ದಾರೆ.

ಹೊಸಗುಡ್ಡ ಹನುಮಮ್ಮಳ ಹತ್ಯೆ ಪ್ರಕರಣ ಮತ್ತು ಮರಕುಂಬಿಯ ದಲಿತರ ಬಹಿಷ್ಕಾರಗಳ ಪ್ರಕರಣಗಳನ್ನು ನ್ಯಾಯಾಂಗ ತನಿಖೆಗೊಳಪಡಿಸಲು ಕೊಪ್ಪಳ ಜಿಲ್ಲೆಯಲ್ಲಿ ಅಸ್ಪೃಶ್ಯ ದಲಿತರ ಮೇಲೆ ಆಗುತ್ತಿರುವ ದೌರ್ಜನ್ಯಗಳನ್ನು ತಡೆಯಬೇಕು, ದಲಿತರ ಬೆಂಬಲಕ್ಕೆ ನಿಲ್ಲದ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿಯವರನ್ನು ಸಂಪುಟದಿಂದ ಕೈಬಿಡಬೇಕೆಂದು ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದ್ದಾರೆ. ಈ ಹೋರಾಟದ ಘೇರಾವ್‌ನಲ್ಲಿ ವಿಠ್ಠಪ್ಪ ಗೋರಂಟ್ಲಿ, ಭಾರದ್ವಾಜ್, ಡಿ.ಹೆಚ್. ಪೂಜಾರ್, ಹೆಚ್.ಎನ್. ಬಡಿಗೇರ್, ಬಸವರಾಜ ಶೀಲವಂತರ, ಕನಕಪ್ಪ ಹುಲಿಹೈದರ, ಏಸಪ್ಪ ಹೊಸ್ಕೇರ, ಕೆಂಚಪ್ಪ ಹಿರೇಖೇಡ ಮತ್ತು ಮೃತ ಹನುಮಮ್ಮಳ ಕುಟುಂಬದೊಂದಿಗೆ ನೂರಕ್ಕೂ ಹೆಚ್ಚು ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು.

Please follow and like us:
error