You are here
Home > Koppal News > ಸನ್ಮಾನದಿಂದ ಜವಾಬ್ದಾರಿ ಹೆಚ್ಚಿದೆ- ಡಾ. ಕೆ.ಬಿ. ಬ್ಯಾಳಿ

ಸನ್ಮಾನದಿಂದ ಜವಾಬ್ದಾರಿ ಹೆಚ್ಚಿದೆ- ಡಾ. ಕೆ.ಬಿ. ಬ್ಯಾಳಿ

ಕೊಪ್ಪಳ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನವರು ನನ್ನನ್ನು ಕೊಪ್ಪಳ ಜಿಲ್ಲಾ ೮ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಕ್ಕೆ ನಾನು ಅವರಿಗೆ ಋಣಿಯಾಗಿದ್ದೇನೆ. ಇಂದು ಸನ್ಮಾನ ಮಾಡಿದ್ದಕ್ಕೆ ನನಗೆ ಇನ್ನಷ್ಟು ಜವಾಬ್ದಾರಿ ಹೆಚ್ಚಾಗಿದೆ. ಈ ಸನ್ಮಾನವನ್ನು ಎಲ್ಲ ಕನ್ನಡದ ಮನಸ್ಸುಗಳ ಪರವಾಗಿ ಸ್ವೀಕರಿಸುತ್ತಿದ್ದೇನೆ ಎಂದು ಕೊಪ್ಪಳ ಜಿಲ್ಲಾ ೮ ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರಾದ ಡಾ. ಕೆ. ಬಿ. ಬ್ಯಾಳಿ ಹೇಳಿದರು.
ಅವರು ರವಿವಾರ ಸಂಜೆ ಕೊಪ್ಪಳದ ದಕ್ಷಿಣ ಭಾರತ ಕಾನೂನು ಕಾಲೇಜಿನಲ್ಲಿ ಕೊಪ್ಪಳ ಜಿಲ್ಲಾ ಜಯಕರ್ನಾಟಕ ಸಂಘಟನೆ, ಕೊಪ್ಪಳ ಜಿಲ್ಲಾ ಕನ್ನಡ ಸೇನೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಮಾತನಾಡುತ್ತಾ, ಡಾ. ಕೆ. ಬಿ. ಬ್ಯಾಳಿಯವರು ಪ್ರತಿಭಾವಂತ ಸಾಹಿತಿಗಳು. ಅನೇಕ ಕವನ ಸಂಕಲನ, ಹಾಯಿಕುಗಳು, ಸಂಪಾದನೆ ಮುಂತಾದ ಸಾಹಿತ್ಯ  ಪ್ರಕಾರದಲ್ಲಿ ಸೇವೆ ಸಲ್ಲಿಸುವುದರೊಂದಿಗೆ ಕೊಪ್ಪಳ ಜಿಲ್ಲೆಯ ಪ್ರಥಮ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಸೇವೆಯನ್ನು ಪರಿಗಣಿಸಿ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಇವರನ್ನು ಕೊಪ್ಪಳ ಜಿಲ್ಲಾ ಮೂರನೇ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆಮಾಡಿ  ಗೌರವಿಸಿದೆ ಎಂದರು. 
ಜಯಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷರಾದ ಬಳ್ಳಾರಿ ರಾಮಣ್ಣ ನಾಯಕ ಮಾತನಾಡಿ, ಡಾ.ಕೆ.ಬಿ. ಬ್ಯಾಳಿಯವರು ತಮ್ಮ ಸಮ್ಮೇಳನ ಅಧ್ಯಕ್ಷೀಯ ಭಾಷಣದಲ್ಲಿ ತುಂಗಭದ್ರ ನದಿಯ ಹೂಳೆತ್ತುವ ಕಾರ್ಯದ ಬಗ್ಗೆ ಗಮನ ಸೆಳೆಯಬೇಕು. ಜಿಲ್ಲೆಯ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕು ಎಂದರು. 
ಕನ್ನಡ ಸೇನೆ ಜಿಲ್ಲಾಧ್ಯಕ್ಷರಾದ ಚನ್ನಬಸವ ಜೇಕಿನ್ ಅವರು ಮಾತನಾಡಿ, ಡಾ. ಕೆ.ಬಿ.ಬ್ಯಾಳಿಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕೊಪ್ಪಳ ಜಿಲ್ಲೆಯ ರೈತರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲಿ, ಜಿಂಕೆ ವನ ಸ್ಥಾಪನೆ ಬಗ್ಗೆ ಸಮ್ಮೇಳನದಲ್ಲಿ ಪ್ರಸ್ಥಾಪಿಸಲಿ ಎಂದರು. 
ಜಯ ಕರ್ನಾಟಕ ಸಂಘಟನೆಯ ಟಿ. ಗೌಸಸಾಬ್ ವಡ್ಡರಹಟ್ಟಿ, ಬಂದೇನವಾಜ್ ನರ್ಸರಿ ಕ್ಯಾಂಪ್, ಟಿ. ನಬೀಸಾಬ್ ವಡ್ಡರಹಟ್ಟಿ, ಯಮನೂರಪ್ಪ ನರ್ಸರಿ ಕ್ಯಾಂಪ್, ಅಮರ ನರ್ಸರಿ ಕ್ಯಾಂಪ್, ಕನ್ನಡ ಸೇನೆಯ ಜಿಲ್ಲಾ ಉಪಾಧ್ಯಕ್ಷರಾದ ಆದಿಲ್ ಪಾಷಾ, ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಶರಣಯ್ಯ ಸ್ವಾಮಿ, ನಿಜಗುಣಪ್ಪ, ಜಿಲ್ಲಾ ಸಹ ಕಾರ್ಯದರ್ಶಿ ವಿರೂಪಾಕ್ಷಯ್ಯ ಗೊಂಡಬಾಳ, ಯಲಬುರ್ಗಾ ತಾಲೂಕಾ ಅಧ್ಯಕ್ಷರಾದ ಅಮರೇಶ ಪಲ್ಲೇದ, ರಂಗ ಕಲಾವಿದರಾದ ಬಾಬಣ್ಣ ಕಲ್ಮನಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

Leave a Reply

Top