You are here
Home > Koppal News > ಸ್ವಾಮಿ ವಿವೇಕಾನಂದರ ೧೫೨ ನೇ ಜಯಂತಿ

ಸ್ವಾಮಿ ವಿವೇಕಾನಂದರ ೧೫೨ ನೇ ಜಯಂತಿ

ಶ್ರೀ ಸಾಯಿ ಅಭಿವೃದ್ಧಿ ಹಾಗೂ ಶಿಕ್ಷಣ ಸಂಘ (ರಿ) ಕೊಪ್ಪಳ ಇವರ ವತಿಯಿಂದ ಸಾಯಿ ಬೂಡಕನ್ ಕರಾಟೆ ಕ್ಲಬ್ ನಲ್ಲಿ ಯುವಕರ ಪ್ರೇಮಿ ಸ್ವಾಮಿ ವಿವೇಕಾನಂದರ ೧೫೨ ನೇ ಜಯಂತಿಯನ್ನು ಕರಾಟೆ ಕ್ಲಬ್ ವೈಯಕ್ತಿಕ ಸಹಾಸ ಪ್ರದಶ್ನ ಪ್ರದಶಿಸುತ್ತಿರುವುದರ ಮೂಲಕ ಆಚರಿಸಲಾಯಿತು. ಸಂಘದ ವತಿಯಿಂದ ಎಲ್ಲಾ ಯುವ ಕರಾಟೆ ಪಟುಗಳಿಗೆ  ಸಿಹಿಯನ್ನು ಹಂಚಲಾಯಿತು.
           
ಮುರಾರ್ಜಿ ದೇಸಾಯಿ ಶಾಲೆಯ ಶಿಕ್ಷಕರಾದ ಸುರೇಶ ಸಾಲಗುಂದಿ ಸ್ವಾಮಿ ವಿವೇಕಾನಂದರ ವಿಚಾರಗಳಬಗ್ಗೆ ಮಾತನಾಡಿ ಯುವಕರು ದಿನದಿಂದ ದಿನಕ್ಕೆ ಹೊಸದನ್ನು ಮಾಡುತ್ತಿರಬೇಕು ಎಂದು ಯುವಕ-ಯುವತಿಯರನ್ನು ಪ್ರೆರೇಪಿಸಿದರು. ಶ್ರೀಕಾಂತ ಪಿ.ಕಲಾಲ. ಚಿರಂಜೀವಿ ಗಿಣಗೇರಾ, ಸವಿತಾ, ಮೋಹಿತ್, ಮೆಹತಾ, ಅಲ್ತಾಫ್ ಎಂ. ಆರ್, ಅಭಿಷೇಕ , ಅರ್ಜುನ್ ಉಪಸ್ಥಿತರಿದ್ದರು,.

Leave a Reply

Top