ಎಪ್ರಿಲ್ ೩ಕ್ಕೆ ಸಾಂಸ್ಕೃತಿಕ ಕಲಾವಿದರ ಸಭೆ

 ಕೊಪ್ಪಳ, ಎ.೦೧: ಜಿಲ್ಲೆಯಲ್ಲಿ ವಿವಿಧ ಕಲಾ ಪ್ರಕಾರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಲಾವಿದರನ್ನು ಒಂದೇ ವೇದಿಕೆಗೆ ತಂದು ಕಲೆ ಹಾಗೂ ಕಲಾವಿದರ ಉತ್ತೇಜನಕ್ಕಾಗಿ ಒಂದು ಸಂಸ್ಥೆ ರಚಿಸುವುದು ಅಗತ್ಯವಾಗಿದ್ದು, ಜನಪದ ಕಲೆಗಳಾದ, ಕುಟ್ಟುವುದು, ಬೀಸುವುದು, ಹಂತಿಹಾಡು ಮೋಹರಂ ಪದಗಳು, ಡೊಳ್ಳಿನ ಹಾಡುಗಳು, ಚೌಡಿಕೆ ಹಾಡುಗಳು, ಕೋಲಾಟದ ಪದಗಳು ತತ್ವಪದಗಳು ಗೀಗಿಹಾಡುಗಳು ಗೊಂದಲಿಗ ಪದಗಳು, ಪ್ರದರ್ಶನ ಕಲೆಗಳಾದ ಕೋಲಾಟ, ಡೊಳ್ಳು ಕುಣಿತ, ಜೋಗತಿ ಕುಣಿತ, ಹಗಲುವೇಷ, ತೊಗಲುಗೊಂಬೆಯಾಟ, ಬಯಲಾಟ, ಸಣ್ಣಾಟ, ದೊಡ್ಡಾಟ, ಶ್ರೀಕೃಷ್ಣಪಾರಿಜಾತ, ಕರಡಿಮಜಲು, ಹಲಗಿ ಮಜಲು, ಮುಂತಾದ ಜಾನಪದ ಕಲಾ ಪ್ರಕಾರಗಳು ಹಾಗೂ ಶಿಷ್ಟ ಕಲೆಗಳಾದ, ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ, ಏಕಪಾತ್ರಾಭಿನಯ, ಭರತನಾಟ್ಯ, ನೃತ್ಯರೂಪಕಗಳು, ಮುಂತಾದ ಕಲೆಗಳ ಕಲಾವಿದರನ್ನು ಒಂದೇ ವೇದಿಕೆಗೆ ತಂದು ಕಲೆ ಅಭಿವೃದ್ಧಿ ಮತ್ತು ಕಲಾವಿದರ ಏಳಿಗೆಗಾಗಿ ಶ್ರಮಿಸುವ ನಿಟ್ಟಿನಲ್ಲಿ ಇದೇ ದಿನಾಂಕ ೦೩ ರಂದು ಕೊಪ್ಪಳ ಜಿಲ್ಲೆಯ ಸಾಂಸ್ಕೃತಿಕ ಕಲಾವಿದರ ಸಂಘ ರಚನೆ ಕುರಿತು ನಗರದ ಸಾಹಿತ್ಯಭವನದ ಹತ್ತಿರವಿರುವ ಸಿರಿಗನ್ನಡ ಪುಸ್ತಕ ಮಳಿಗೆ ಆವರಣದಲ್ಲಿ ಬೆ. ೧೧.೦೦ ಗಂಟೆಗೆ ಹಿರಿಯ ಸಾಹಿತಿ ಎಚ್. ಎಸ್. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದೆ.
ಆದ್ದರಿಂದ ಜಿಲ್ಲೆಯ ಎಲ್ಲ ಕಲಾವಿದರು ತಪ್ಪದೇ ಈ ಸಭೆಗೆ ಹಾಜರಾಗಿ ತಮ್ಮ ಅಮೂಲ್ಯವಾದ ಸಲಹೆ, ಸೂಚನೆ ನೀಡಿ ಸಭೆಯನ್ನು ಯಶಸ್ವಿಗೊಳಿಸಬೇಕು ಎಂದು ಕರ್ನಾಟಕ ಜಾಪದ ಪರಿಷತ್ ಜಿಲ್ಲಾ ಅಧ್ಯಕ್ಷರಾದ ಬಸವರಾಜ ಆಕಳವಾಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ. ೯೫೯೦೪೬೩೭೩೦ ಸಂಪರ್ಕಿಸಲು ಕೋರಾಗಿದೆ.

Leave a Reply