fbpx

ಬೋಧಕ ಸಿಬ್ಬಂದಿಗಳಿಗೆ ಸೇವಾ ಕೃಪಾಂಕ : ಅರ್ಜಿ ಆಹ್ವಾನ

 ಹೊರ ಸಂಪನ್ಮೂಲ ಬೋಧಕ ಸಿಬ್ಬಂದಿಗಳಿಗೆ ಸೇವಾ ಕೃಪಾಂಕ ನೀಡುವ ಕುರಿತಂತೆ ವಸತಿ ಶಾಲೆಗಳಲ್ಲಿ ಹೊರ ಸಂಪನ್ಮೂಲ ಸಂಸ್ಥೆಗಳ ಮುಖಾಂತರ ಸೇವೆ ಸಲ್ಲಿಸಿದ ಶಿಕ್ಷಕರುಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
  ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು ಇವರು ನಡೆಸಿದ ನೇರ ನೇಮಕಾತಿ ಪರೀಕ್ಷೆಗೆ ಕುಳಿತಿರುವ ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು ವ್ಯಾಪ್ತಿಯಲ್ಲಿ  ೨೦೦೪-೦೫ ರ ನಂತರದ ವರ್ಷಗಳಲ್ಲಿ ನೇಮಕಗೊಂಡು ದಿ: ೦೧-೦೪-೨೦೧೧ ರವರೆಗೆ ಕಾರ್ಯ ನಿರ್ವಹಿಸಿದ ಹೊರ ಸಂಪನ್ಮೂಲ ಬೋಧಕ ಸಿಬ್ಬಂದಿಗಳಿಗೆ ಹೈಕೋರ್ಟ್ ತೀರ್ಪಿನ ಅನ್ವಯ ಸೇವಾ ಕೃಪಾಂಕವನ್ನು ನೀಡಲು, ಈ ಹಿಂದೆ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಹೊರ ಸಂಪನ್ಮೂಲ ಸಂಸ್ಥೆಗಳ ಮುಖಾಂತರ ಸೇವೆ ಸಲ್ಲಿಸಿದ ಶಿಕ್ಷಕರುಗಳಿಂದ ಅರ್ಜಿ ಆಹ್ವಾನಿಸಲಾಗಿದೆ.  ಅರ್ಹ ಶಿಕ್ಷಕರು ನಿಗದಿತ ಅರ್ಜಿ ನಮೂನೆಯನ್ನು ಬಿಸಿಎಂ ಇಲಾಖೆಯ ವಸತಿ ಶಾಲೆಗಳ ಪ್ರಾಚಾರ್ಯರಿಂದ ಅಥವಾ ಜಿಲ್ಲಾ ಬಿಸಿಎಂ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಹೊರ ಸಂಪನ್ಮೂಲ ಏಜೆನ್ಸಿದಾರರಿಂದ ನೀಡಲಾದ ನೇಮಕಾತಿ ಆದೇಶದ ಪ್ರತಿ, ವಿದ್ಯಾರ್ಹತೆಗಳ ಅಂಕಪಟಟಿಗಳೊಂದಿಗೆ ನಮೂನೆ-೧ ರ ಮಾಹಿತಿ.  ಸಂಘವು ಕೇಂದ್ರೀಕೃತ ದಾಖಲಾತಿ ಘಟಕದಿಂದ ದಿ: ೨೪-೦೭-೨೦೧೧ ರಿಂದ ೨೭-೦೭-೨೦೧೧ ರವರೆಗೆ ನೇರ ನೇಮಕಾತಿಗೆ ಏರ್ಪಡಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗೆ ಕುಳಿತ ನೊಂದಣಿ ಸಂಖ್ಯೆ, ಪರೀಕ್ಷೆ ತೆಗೆದುಕೊಂಡ ಹುದ್ದೆಗಳ ವಿವರ, ಅಂಕಗಳ ಮಾಹಿತಿ.  ಪ್ರಾಂಶುಪಾಲರು/ಸಹಶಿಕ್ಷಕರು ಕರ್ತವ್ಯ ನಿರ್ವಹಿಸಿದ ಅವಧಿ, ಬೋಧಿಸಿದ ವಿಷಯಗಳು ಮತ್ತು ನಿರ್ವಹಿಸಿದ ಹುದ್ದೆಯ ಬಗ್ಗೆ ಪ್ರತ್ಯೇಕ ಮಾಹಿತಿ ಲಗತ್ತಿಸಿ ಫೆ. ೨೫ ರ ಒಳಗಾಗಿ ಸಲ್ಲಿಸುವಂತೆ ಜಿಲ್ಲಾ ಬಿಸಿಎಂ ಅಧಿಕಾರಿ ಬಿ. ಕಲ್ಲೇಶ್   ತಿಳಿಸಿದ್ದಾರೆ.
Please follow and like us:
error

Leave a Reply

error: Content is protected !!