ಕೊಪ್ಪಳ : ನವಜಾತ ಹೆಣ್ಣು ಶಿಶುಗಳ ಪತ್ತೆ

  ಕೊಪ್ಪಳ ಜಿಲ್ಲೆಯ ಕವಲೂರ ಗ್ರಾಮದ ಶ್ರೀದುರ್ಗಮ್ಮದೇವಿ ಕಾಲೋನಿ ಬಳಿ ಮುಳ್ಳು ಬೇಲಿಯಲ್ಲಿ ಈಚೆಗೆ ನವಜಾತ ಹೆಣ್ಣು ಶಿಶುವೊಂದು ಪತ್ತೆಯಾಗಿದೆ.  
        ಮುಳ್ಳು ಬೇಲಿಯಿಂದ ಮಗು ಅಳುತ್ತಿರುವ ಶಬ್ದ ಗಮನಿಸಿರುವ ಗ್ರಾಮದ ಸಾರ್ವಜನಿಕರು ಮಗುವನ್ನು ರಕ್ಷಿಸಿ, ಚಿಕಿತ್ಸೆಗಾಗಿ ಕವಲೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ, ಬಳಿಕ ಜಿಲ್ಲಾ ಮಕ್ಕಳ ರಕ್ಷಣಾ ಘಟಕ್ಕೆ ಮಾಹಿತಿ ನೀಡಿದ್ದಾರೆ. ಪ್ರಸ್ತುತ ಶಿಶುವು ಕೊಪ್ಪಳದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.  ಅದೇ ರೀತಿ  ಕೊಪ್ಪಳ ತಾಲೂಕಿನ ಹುಲಿಗಿಯ ರೈಲ್ವೇ ಸ್ಟೇಷನ್ ಹತ್ತಿರದ ರಸ್ತೆ ಬದಿಯಲ್ಲಿ ಫೆ.೧೧ ರಂದು ಎರಡು ದಿನದ ನವಜಾತ ಶಿಶುವೊಂದು ಪತ್ತೆಯಾಗಿದೆ. ಸಾರ್ವಜನಿಕರು ಶಿಶುವನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ವಶಕ್ಕೆ ಒಪ್ಪಿಸಿದ್ದು, ಸಮಿತಿಯು ಹೆಚ್ಚಿನ ಚಿಕಿತ್ಸೆಗಾಗಿ ಶಿಶುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದೆ. 
       ಶಿಶುಗಳಿಗೆ ಸಂಬಂಧಪಟ್ಟ ಪೋಷಕರು ಯಾರಾದರೂ ಇದ್ದಲ್ಲಿ ಅಧೀಕ್ಷಕರು, ಸರಕಾರಿ ಬಾಲಕಿಯರ ಬಾಲ ಮಂದಿರ, ಧನ್ವಂತರಿ ಕಾಲೋನಿ, ಭಾಗ್ಯನಗರ, ಕೊಪ್ಪಳ. ದೂರವಾಣಿ ಸಂಖ್ಯೆ: ೦೮೫೩೯-೨೩೪೪೧೦ ಇಲ್ಲಿಗೆ ೪೫ ದಿನಗಳೊಳಗಾಗಿ ಸಂಪರ್ಕಿಸಬಹುದಾಗಿದೆ. ಇಲ್ಲವಾದಲ್ಲಿ ಕಾನೂನು ಪ್ರಕಾರ ಶಿಶುವನ್ನು ದತ್ತು ಪ್ರಕ್ರಿಯೆಗೆ ಒಳಪಡಿಸಲಾಗುವುದು ಎಂದು ಮಕ್ಕಳ ಕಲ್ಯಾಣ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಕೊಪ್ಪಳದ ಸರಕಾರಿ ಬಾಲಕಿಯರ ಬಾಲ ಮಂದಿರದ ಅಧೀಕ್ಷಕರು ತಿಳಿಸಿದ್ದಾರೆ.
Please follow and like us:
error