You are here
Home > Koppal News > ಇಂದಿರಾ ಪ್ರಿಯದರ್ಶಿನಿ ವಿಶ್ವಕಂಡ ಮಹಾನ್ ನಾಯಕಿ-ಶಾಸಕ ಕೆ. ರಾಘವೇಂದ್ರ ಹಿಟ್ನಾಳ

ಇಂದಿರಾ ಪ್ರಿಯದರ್ಶಿನಿ ವಿಶ್ವಕಂಡ ಮಹಾನ್ ನಾಯಕಿ-ಶಾಸಕ ಕೆ. ರಾಘವೇಂದ್ರ ಹಿಟ್ನಾಳ

   

ಮಂಗಳವಾರ ಬೆಳೆಗ್ಗೆ ೧೦.೦೦ ಗಂಟೆಗೆ ನಗರದ ಜಿಲ್ಲಾ ಕಾಂಗ್ರೇಸ್ ಕಾರ್ಯಾಲಯದಲ್ಲಿ ನಡೆದ ಮಾಜಿ ಪ್ರದಾನಿ ದಿ|| ಇಂದಿರಾಗಾಂದಿಯವರ ೯೭ನೇ ಜನ್ಮದಿನಾಚಾರಣೆ ಅಂಗವಾಗಿ ಮಾತನಾಡಿದ ಶಾಸಕ ರಾಘವೇಂದ್ರ ಹಿಟ್ನಾಳರವರು ಇಂದಿರಾ  ಪ್ರಿಯದರ್ಶಿನಿ ಆಧುನಿಕ ಭಾರತಕ್ಕೆ ಅಪಾರ ಕೋಡುಗೆ ನೀಡಿದ ಮಹಾನ್ ನಾಯಕಿ ದೇಶದ ಬಡವರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದು ಅವರ ಯಶಸ್ವಿಗೆ ಗರೀಬಿ ಹಟಾವ್ ಮಹತ್ವಾಕಾಂಕ್ಷಿ ಯೋಜನೆ ಮೂಲಕ ವಿದವಾವೇತನ, ವೃದ್ಯಾಪವೇತ, ಉಳುವನೆ ಒಡೆಯ, ಬ್ಯಾಂಕುಗಳ ರಾಷ್ಠ್ರೀಕರಣ ಮಾಡಿ ಬಡವರು ಆರ್ಥೀಕವಾಗಿ ಸಬಲರಾಗಲು ಅನೇಕ ಜನಪರ ಯೋಜನೆಗಳನ್ನು ಜಾರಿಗೆತಂದರು. ಇವರು ಪ್ರದಾನಿಮಂತ್ರಿಯಾಗಿದ್ದಾಗ ಇಸ್ರೋ ವಿಜ್ನಾನ ಕೇಂದ್ರ ಪ್ರಾರಂಬಿಸಿದರು ಇವರ ಅಧಿಕಾರ ಅವದಿಯ ಹೆಗ್ಗಳಿಕೆ ಯಾಗಿದೆ. ದೇಶವನ್ನು ತಾಂತ್ರಿಕಯುಗಕ್ಕೆ ವಿಶ್ವದಲ್ಲಿ ಭಾರತವನ್ನು ಮುಂದುವರಿದ ರಾಷ್ರಗಳ ಜೋತೆಗೆ ಪೈಪೋಟಿಗೋಳಿಸದ ಉಕ್ಕಿನ ಮಹಿಳೆ ಇಂದಿರಾ ಜೀ ಆಗಿದ್ದಾರೆ. ಪಂಜಾಬ್ ಬಯೋತ್ಪಾದಕವನ್ನು ಸದೇಬಡಿದು, ಪಾಕಿಸ್ತಾನದ ಕಪಿಮುಷ್ಠಿಯಿಂದ ಬ್ಲಾಂಗಾದೇಶವನ್ನು  ಸ್ವಾತಂತ್ರ್ಯಗೋಳಿಸಿದ ಮಹಾನ್ ನಾಯಕಿ ದಿ|| ಮಾಜಿ ಪ್ರದಾನಿ ಇಂದಿರಾಗಾಂದಿಯವರಾಗಿದ್ದಾರೆ ಎಂದು ಹೇಳಿದರು.        

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೇಸ್ ಜಿಲ್ಲಾಅಧ್ಯಕ್ಷರಾದ ಕೆ.ಬಸವರಾಜ ಹಿಟ್ನಾಳರವರು ಮಾತನಾಡಿ ಇಂದಿರಾಗಾಂದಿಯವರ ಅದಿಕಾರ ಅವದಿಯಲ್ಲಿ ಭಾರತದೇಶವು  ಆರ್ಥಿಕವಾಗಿ ಅಭಿವೃದ್ದಿ ಹೊಂದಿ ವಿಶ್ವವೇ ಭಾರತದತ್ತ ಮುಖ ಮಾಡಿದ ಅನೇಕ ಉದಾಹರಣೆಗಳಿವೆ ದೇಶಕ್ಕಾಗಿ ಪ್ರಾಣ ನೀಡಿದ ಮಹಾನ್ ವೀರ ಮಹಿಳೆ ಇವರ ಅಧಿಕಾರದ ಅವದಿಯು ಭಾರತದ ಇತಿಹಾಸದ ಇವರ ತ್ಯಾಗಬಲಿದಾನ ಸುವರ್ಣ ಅಕ್ಷರದಲ್ಲಿ ಬರೆದಿಡುವದಾಗಿದೆ ಎಂದು ಇವರ ವ್ಯಕ್ತಿತ್ವವನ್ನು ಗುಣಗಾಣಿಸಿದರು.
ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ.ಕಾರ್ಯದರ್ಶಿ ವೈ.ವಿ.ಘೋರ್ಪಡೆ, ಪಕ್ಷದ ಮುಖಂಡರಾದ ಅಂದಣ್ಣ ಅಗಡಿ, ಎಸ್.ಬಿ.ನಾಗರಳ್ಳಿ, ಶಾಂತಣ್ಣ ಮುದುಗಲ್, ಜುಲ್ಲು ಖಾದರಿ, ಮರ್ದಾನಲಿ ಅಡ್ಡೆವಾಲೆ, ಶ್ರೀಮತಿ ಲತಾ ವೀರಣ್ಣ ಸಂಡೂರು, ಗವಿಸಿದ್ದಪ್ಪ ಮುದುಗಲ್, ಕೆ.ಎಮ್.ಸಯ್ಯದ್, ಶ್ರೀಮತಿ ರೇಣುಕಾ ಪೂಜಾರ, ಶಕುಂತಲಾ ಹುಡೆಜಾಲಿ, ಅಪ್ಸರಸಾಬ್ ಅಕ್ತಾರ, ಶ್ರೀಮತಿ ಇಂದಿರಾ ಭಾವಿಕಟ್ಟಿ, ಕೃಷ್ಣ ಇಟ್ಟಂಗಿ, ಗಾಳೆಪ್ಪ ಪೂಜಾರ, ಶಿವಾನಂದ ಹೂದ್ಲೂರು, ಮಾನ್ವಿ ಪಾಷಾ, ದೇವಣ್ಣ ಮೆಕಾಳಿ, ಬಾಷಾಸಾಬ್ ಕತೀಬ್, ವಿಶ್ವನಾಥ ರಾಜು, ನಿಸಾರ್ ಕೊಲ್ಕಾರ, ಅಜ್ಜಪ್ಪ ಸ್ವಾಮಿ, ಸುಜಾತಾ ಮುಲಿಮನಿ, ಕಾಶಿನಾಥ ರೆಡ್ಡಿ, ಶಾಹೀದ್ ಕವಲೂರು, ಮುನೀರ್ ಸಿದ್ದಕಿ, ಇನ್ನೂ ಅನೇಕ ಕಾಂಗ್ರೇಸ್ ಕಾರ್ಯಕರ್ತರು ಉಪಸ್ಥಿತರಿದ್ದರು .

Leave a Reply

Top