ಗುಡಿ ಕೈಗಾರಿಕೆಗಳಿಗೆ ಸರ್ಕಾರದಿಂದ ಹೆಚ್ಚಿನ ಸೌಲಭ್ಯ- ಶಾಸಕ ಕೆ.ರಾಘವೇಂದ್ರ ಹಿಟ್ನಾಳ

ಭಾಗ್ಯಾನಗರ ಗ್ರಾಮದಲ್ಲಿ ೨೦೧೩-೧೪ನೇ ಸಾಲಿನ ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ವಿಶೇಷ ಅಭಿವೃದ್ಧಿ ಯೋಜನೆಯಡಿಯಲ್ಲಿ ೧೦ ಲಕ್ಷದ ಸಾಮಾನ್ಯ ಸೌಲಭ್ಯ ಕೇಂದ್ರ ಹಾಗೂ ಹೆಚ್.ಕೆ.ಡಿ.ಬಿ. ಯೋಜನೆಯಡಿಯಲ್ಲಿ ಅಂದಾಜು ಮೊತ್ತ ೫೦.೦೦ ಲಕ್ಷದ ಸಿ.ಸಿ. ಕಾಮಗಾರಿಯ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ  ಶಾಸಕ  ರಾಘವೇಂದ್ರ ಹಿಟ್ನಾಳ ರವರು  ಜನಪ್ರೀಯ ಮುಖ್ಯಮಂತ್ರಿ  ಸಿದ್ದರಾಮಯ್ಯನವರು ಗುಡಿ ಕೈಗಾರಿಕಾ ಅಭಿವೃದ್ಧಿಗೆ ಹೆಚ್ಚಿನ ಸಹಾಯಧನ ನೀಡುತ್ತಿದ್ದು, ಇದರ ಸದುಉಪಯೋಗವನ್ನು ಪಡೆದುಕೊಂಡು ನೇಕಾರರು ಆರ್ಥಿಕವಾಗಿ ಸ್ವಾವಲಂಭಿಗಳಾಗಬೇಕೆಂದು ಹೇಳಿದರು. ನೇಕಾರರ ಮಕ್ಕಳ ವಿದ್ಯಾಬ್ಯಾಸಕ್ಕಾಗಿ ಹೆಚ್ಚಿನ ಶಿಕ್ಷಣ ಸಾಲ ಸೌಲಭ್ಯಕೊಡುತ್ತಿದ್ದು, ತಮ್ಮ ಮಕ್ಕಳಿಗೆ ಉನ್ನತ ಮಟ್ಟದ ಶಿಕ್ಷಣವನ್ನು ಕೋಡಿಸಬೇಕು. ತಾಂತ್ರಿಕ ಯುಗದಲ್ಲಿ ಹೆಚ್ಚಿನ ಪೈಪೋಟಿ ಇದ್ದು ಹಳೆಮಾದರಿಯ ಸೀರೆ ಮತ್ತು ಬಟ್ಟೆಗಳನ್ನು ನೇಯುವ ಪದ್ದತಿಬದಲಾಯಿಸಿ ಹೊಸ ಹೊಸ ಯಂತ್ರಗಳನ್ನು ಕೊಂಡುಕೊಂಡು ಉತ್ಪಾದನೆಯನ್ನು ಹೆಚ್ಚಿಸಿ ಅಧಿಕ ಲಾಭಬರುವಂತೆ ವ್ಯಾಪಾರವನ್ನು ವೃದ್ಧಿಸಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯೆ ವನಿತಾ ಗಡಾದ, ಪಕ್ಷದ ಮುಖಂಡರಾದ ಕೆ.ಎಮ್.ಸಯ್ಯದ್, ಗವಿಸಿದ್ದಪ್ಪ ಮುದಗಲ್, ಯಮನೂರಪ್ಪ ಕಬ್ಬೇರ್, ಪ್ರಸನ್ನ ಗಡಾದ, ಹೊನ್ನುರಸಾಬ್ ಬೈರಾಪೂರು, ಕೃಷ್ಣ ಇಟ್ಟಂಗಿ, ಶ್ರೀನಿವಾಸ ಗುಪ್ತಾ, ದಾನಪ್ಪ, ಶ್ರೀನಿವಾಸ ಹ್ಯಾಟಿ, ಚನ್ನಪ್ಪ ತಟ್ಟಿ, ಮೆಹಬುಬ್ ಪಾಷಾ, ಬೋಗಪ್ಪ ಡಾಣಿ, ಕೃಷ್ಣ ಕಬ್ಬೇರ, ಇನ್ನೂ ಅನೇಕ ಗ್ರಾ.ಪಂಚಾಯತಿಯ ಸದಸ್ಯರು ಊರಿನ ಗುರು ಹಿರಿಯರು ಕಾಂಗ್ರೇಸ್ ಕಾರ್ಯರ್ತರು ಉಪಸ್ಥಿತರಿದ್ದರು. 
Please follow and like us:
error