ನೃತ್ಯ ಶಿಕ್ಷಕಿ ಕೆ.ಜಿ ಕವಿತಗಣೇಶಗೆ ಕೀನ್ಯಾ ವಿಶ್ವ ಸಂಸ್ಕೃತಿ ಸಮ್ಮೇಳನಕ್ಕೆ ಆಹ್ವಾನ

 ಭರತ ನಾಟ್ಯದಲ್ಲಿ ವಿದ್ವತ ಪದವಿ ಪಡೆದ ನೃತ್ಯ ಶಿಕ್ಷಕಿ, ನಿರ್ದೇಶಕಿ ತಳಕಲ್ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿ ಕೆ.ಜಿ.ಕವಿತಾ ಗಣೇಶ ರವರಿಗೆ ಕೀನ್ಯಾ ವಿಶ್ವ ಸಂಸ್ಕೃತಿ ಸಮ್ಮೇಳನಕ್ಕೆ ಆಹ್ವಾನಿಸಿ ನೃತ್ಯ ಪ್ರದರ್ಶನಕ್ಕೆ ಕೊರಿದ್ದಾರೆ ಎಂದು ಶಿಕ್ಷಕಿ ಕೆ.ಜಿ.ಕವಿತಾ ಗಣೇಶ ತಿಳಿಸಿದ್ದಾರೆ.
ಈ ಕುರಿತು ಅವರು ಪ್ರಕಟಣೆ ನೀಡಿ, ಮಂಗಳೂರು ಹೃದಯವಾಹಿನಿ ಬಳಗ ಮತ್ತು ಕನ್ನಡ ಸಾಂಸ್ಕೃತಿಕ ಸಂಘ ಕೀನ್ಯಾ ಇವರ ಸಂಯುಕ್ತಾಶ್ರಯದಲ್ಲಿ ನೈರೋಬಿಯಾದ ಓಸ್ವಾಲ್ ಸೆಂಟರ್ ಸಭಾಂಗಣದಲ್ಲಿ ಮಾರ್ಚ ೧ ಮತ್ತು ೨ ರಂದು  ೨ ದಿನಗಳ ಕಾಲ ೧೦ ನೇ ವಿಶ್ವ ಕನ್ನಡ ಸಂಸ್ಕೃತಿ ಸಮೇಳನ ಹಮ್ಮಿಕೊಳ್ಳಲಾಗಿದೆ. ಸಮ್ಮೇಳದಲ್ಲಿ ಉದ್ಯಮ ಗೋಷ್ಠಿ, ಕವಿ ಗೋಷ್ಠಿ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು ಈ ಕಾರ್ಯಕ್ರಮದಲ್ಲಿ ಕೆ.ಜಿ. ಕವಿತಾಗಣೇಶ ರವರು ನೃತ್ಯ ಪ್ರದರ್ಶನ ನೀಡಲು ಇದೇ ದಿ.೨೭ ರಂದು ವಿದೇಶಿ ಪ್ರವಾಸ ಕೈಗೊಂಡಿದ್ದಾರೆ.  
Please follow and like us:

Related posts

Leave a Comment