ಮತ ಜಾಗೃತಿ : ಕೊಪ್ಪಳದಲ್ಲಿ ಏ.೦೨ ರಂದು ಮ್ಯಾರಾಥಾನ ಓಟ

 ಕೊಪ್ಪಳ ನಗರದಲ್ಲಿ ಮತದಾರರ ಜಾಗೃತಿಗಾಗಿ ಜಿಲ್ಲಾ ಸ್ವೀಪ್ ಸಮಿತಿಯಿಂದ ನಗರದ ಎಲ್ಲಾ ಕಾಲೇಜುಗಳ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಮ್ಯಾರಾಥಾನ ಓಟ ಸ್ಪರ್ಧೆಯನ್ನು ಏ.೦೨ ರಂದು ಬೆಳಿಗ್ಗೆ ೮.೩೦ ಕ್ಕೆ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವೈ.ಸುದರ್ಶನರಾವ್ ಅವರು ತಿಳಿಸಿದ್ದಾರೆ.
ಈ ಮ್ಯಾರಾಥಾನ ಓಟವು ನಗರದ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಮೈದಾನದಿಂದ ಪ್ರಾರಂಭಗೊಂಡು ಸಾಲಾರಜಂಗ್ ರೋಡನಿಂದ ಹೊರಟು ಟಿಪ್ಪುಸುಲ್ತಾನ್ ಸರ್ಕಲ್‌ನಿಂದ ಕಿತ್ತೂರರಾಣಿ ಚನ್ನಮ್ಮ ಸರ್ಕಲ್ ನಂತರ ಅಂಬೇಡ್ಕರ ಸರ್ಕಲ್ ಮುಖಾಂತರ ಶಾರದಾ ಟಾಕೀಸ್‌ನಿಂದ ಬಲಭಾಗಕ್ಕೆ ತಿರಿಗಿ ಗಡಿಯಾರ ಕಂಬದಿಂದ ಜವಾಹರ ರಸ್ತೆಗೆ ಪ್ರವೇಶಿಸಿ ಆಜಾದ್ ಸರ್ಕಲ್ ಮುಖಾಂತರ ಅಶೋಕ ಸರ್ಕಲ್ ಮುಖಾಂತರ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮೈದಾನವನ್ನು ಪ್ರವೇಶಿಸಿ ಮುಕ್ತಾಯಗೊಳಿಸಲಾಗುವುದು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಮತದಾರರ ಜಾಗೃತಿಯ ಮ್ಯಾರಾಥಾನ್ ಓಟ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕು ಎಂದು   ಮನವಿ ಮಾಡಿದ್ದಾರೆ.

Leave a Reply