ಪ್ರಭು ಹೆಬ್ಬಾಳರಿಗೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ‘ವಾಣಿಜ್ಯ ರತ್ನ’ ಪ್ರಶಸ್ತಿ

 ಕೊಪ್ಪಳದ ವರ್ತಕರಾದ ಪ್ರಭು ಹೆಬ್ಬಾಳ ಇವರಿಗೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಪ್ರತಿಷ್ಟಿತ ‘ವಾಣಿಜ್ಯ ರತ್ನ’ ಪ್ರಶಸ್ತಿ ದೊರಕಿದೆ. ೧೯೨೮ ರಲ್ಲಿ ಆರಂಭವಾಗಿರುವ ಈ ಸಂಸ್ಥೆಯು ಕರ್ನಾಟಕದ

ವಿಶೇಷವಾಗಿ ಉತ್ತರ ಕರ್ನಾಟಕದ ವ್ಯಾಪಾರ, ಉದ್ಧಿಮೆ, ವಿವಿಧ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗಾಗಿ ೮ ದಶಕಗಳಿಂದ ಶ್ರಮಿಸುತ್ತಿದೆ. ಎರಡೂವರೆ ಸಾವಿರ ವ್ಯಾಪಾರಸ್ಥರು, ಉದ್ಧಿಮೆದಾರ ಸದಸ್ಯರನ್ನು, ೧೦೦ ಕ್ಕೂ ಹೆಚ್ಚಿನ ಸಂಘ-ಸಂಸ್ಥೆಯವರ ಸದಸ್ಯತ್ವವನ್ನು ಹೊಂದಿರುವ ಈ ಸಂಸ್ಥೆಯ ವತಿಯಿಂದ ನಡೆಯಲಿರುವ ಸಂಸ್ಥಾಪಕರ ದಿನಾಚರಣೆ ನಿಮಿತ್ಯ ಪ್ರ್ರಭು ಹೆಬ್ಬಾಳರಿಗೆ ದಿ. ೦೧-೦೮-೨೦೧೩ ರಂದು ಹುಬ್ಬಳ್ಳಿಯ ಚಂದ್ರವದನ ದೇಸಾಯಿ ಸಭಾಗೃಹದಲ್ಲಿ ಮಧ್ಯಾಹ್ನ ೩ ಗಂಟೆಗೆ ಹಮ್ಮಿಕೊಳ್ಳಲಾಗಿರುವ ಬೃಹತ್ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ‘ವಾಣಿಜ್ಯ ರತ್ನ’ ಪ್ರಶಸ್ತಿ ನೀಡಲಾಗುವುದು. ವಾಣಿಜ್ಯ ಮತ್ತು ಉದ್ಧಿಮೆ ಕ್ಷೇತ್ರದಲ್ಲಿ ಖ್ಯಾತಿ ಹೊಂದಿರುವ ರಾಜ್ಯದ ಐವರು ಗಣ್ಯವರ್ತಕರಿಗೆ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಅವರಲ್ಲಿ ಪ್ರಭು ಹೆಬ್ಬಾಳರು ಒಬ್ಬರಾಗಿದ್ದಾರೆ ಎಂದು ಸಂಸ್ಥೆಯ ಗೌರವ ಕಾರ್ಯದರ್ಶಿ ವಿಶ್ವನಾಥ ಗಿಣಿಮಾವ  ತಿಳಿಸಿದ್ದಾರೆ.

Please follow and like us:
error