ಪಾಲಕರು ಪ್ರೀತಿಯಿಂದ ಮಕ್ಕಳ ಮನಸ್ಸನ್ನು ಗೆಲ್ಲಬೇಕು

ಕೊಪ್ಪಳ :- ಪ್ರಶ್ನೆ ಮಾಡುವ ಮಕ್ಕಳ ವೈಜ್ಞಾನಿಕ ಮನೋಭಾವನೆಗೆ ಹಿರಿಯರು ಪ್ರೋತ್ಸಾಹಿಸಬೇಕು ಹಾಗೂ ಮಕ್ಕಳ ಕನಸು ನನಸಾಗಬೇಕಾದರೆ ಪಾಲಕರು ಪ್ರೀತಿಯಿಂದ ಮಕ್ಕಳ ಮನಸ್ಸನ್ನು ಗೆಲ್ಲಬೇಕು. ತಿರುಳ್ಗನ್ನಡ ನೆಲದ ಭಾಷೆಗೆ ಜೀವವನ್ನು ಅಕ್ಬರ್ ಕಾಲಿಮಿರ್ಚಿಯವರು ತಂದು ಕೊಟ್ಟಿದ್ದಾರೆ ಎಂದು ಗಜೇಂದ್ರಗಡ ಭೂಮರಡ್ಡಿ ಕಾಲೇಜಿನ ಉಪನ್ಯಾಸಕ ಸಾಹಿತಿ ಡಾ. ಮಲ್ಲಿಕಾರ್ಜುನ ಕುಂಬಾರ ಅಭಿಪ್ರಾಯ ಪಟ್ಟರು. 
ಭಾಗ್ಯನಗರದ ಕನ್ನಡ ಮೈತ್ರಿ ಪ್ರಕಾಶನ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇವರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ರಾಘವೇಂದ್ರ ಮಠದ ಕಲ್ಯಾಣ ಮಂಟಪದಲ್ಲಿ ಜರುಗಿದ ಅಕ್ಬರ್ ಕಾಲಿಮಿರ್ಚಿ ಅವರ “ಬಾಪು-ಪಾಪು” ಮಕ್ಕಳ ಕವನ ಸಂಕಲನವನ್ನು ಬಿಡುಗಡೆ ಗೊಳಿಸಿ ಮಾತನಾಡುತ್ತದ್ದ ಅವರು ತಿರುಳ್ಗನ್ನಡ ನಾಡಿನ ಸಾಹಿತ್ಯ ಸಂಸ್ಕೃತಿ ಪರಂಪರೆ ವೈಶಿಷ್ಟ್ಯತೆ ಸಾರುವ ಸರಳ ಸಾಹಿತ್ಯದಲ್ಲಿ ಮಕ್ಕಳ ಕವನ ಸಂಕಲನ ರಚಿಸಿ ಮಕ್ಕಳ ಸಾಹಿತ್ಯದ ಕೊಡುಗೆಗೆ ಅಕ್ಬರರವರು ಸಲ್ಲಿಸಿದ ಸೇವೆ ಸ್ಮರಣಿಯ ಎಂದರು. ಸರಳವಾಗಿ ಎಲ್ಲರಿಗೂ ತಿಳಿಯುವಂತೆ ರಚಿಸಿದ ಕವನ ಸಂಕಲನ ಮಾದರಿಯಾಗಿದೆ ಎಂದರು.
  ಸಾಹಿತಿಗಳಾದ ಈಶ್ವರ ಹತ್ತಿಯವರು ಕೃತಿಯನ್ನು ಪರಿಚಯಿಸುತ್ತಾ ಮಕ್ಕಳ ಕೌತುಕ ಹಾಗೂ ಕುತುಹಲಕ್ಕೆ ನೀರು ಎರಿಚಿ ತಣ್ಣಗೆ ಮಾಡಬಾರದು ಮಕ್ಕಳ ಮನಸ್ಸನ್ನು ಅರಿತು ಹಿರಿಯರು ಅವರ ಆಶೆಗೆ ತಕ್ಕಂತೆ ಪ್ರೋತ್ಸಾಹಿಸಿದರೆ. ಅದೇ ಮಕ್ಕಳು ಮುಂದಿನ ದಿನಮಾನಗಳಲ್ಲಿ ತಮ್ಮದೆಯಾದ ಕ್ಷೇತ್ರದಲ್ಲಿ ಸಾಧನೆ ಮಾಡಲಿಕ್ಕೆ ಸಾಧ್ಯವಾಗುತ್ತದೆ. ನಾಡಿನ ಹೆಸರಾಂತ ಸಾಹಿತಿಗಳು ಎಲ್ಲರು. ಮಕ್ಕಳ ಸಾಹಿತ್ಯವನ್ನು ರಚಿಸಿಯೇ ನಾಡಿನಲ್ಲಿ ಗುರುತಿಸಿಕೊಂಡಿದ್ದಾರೆ. ಬೌದ್ಧಿಕ ಹಾಗೂ ಮಾನಸಿಕವಾಗಿ ಮಕ್ಕಳ ಬೆಳವಣಿಗೆಗೆ ಪೂರಕವಾದ ವಾತರವರಣವನ್ನು ಕಲ್ಪಿಸಬೇಕಾಗಿದೆ ಎಂದರು. 
ಬಾಪು-ಪಾಪು ಕವನ ಸಂಕಲನದ ಕೃತಿಕಾರ ಅಕ್ಬರ್ ಕಾಲಿಮಿರ್ಚಿ ಮಾತನಾಡಿ ಈಗಾಗಲೇ ೧೨ಕೃತಿಗಳನ್ನು ರಚಿಸಿ ೧೩ ನೇ ಕೃತಿಯನ್ನು ಬಿಡುಗಡೆಗೊಳಿಸಲು ಸಹಕರಿಸಿದ ಎಲ್ಲಾ ಮಹನಿಯರನ್ನು ಸ್ಮರಿಸುತ್ತಾ ಕವನ ಸಂಕಲನಕ್ಕೆ ಪೂರಕವಾಗಿ ಬದ್ರಿನಾಥ ಪುರೋಹಿತರವರು ಚಿತ್ರಕಲೆಯನ್ನು ರೂಪಿಸಿಕೊಟ್ಟೂ ಕವನಗಳಿಗೆ ಅರ್ಥ ಬರುವಂತೆ  ಮಾಡಿರುವುದು. ನಿಜಕ್ಕೂ ಶ್ಲಾಘನಿಯ ಎಂದರು. 
ಉಪನ್ಯಾಸಕರಾದ ಡಿ.ಎಂ ಬಡಿಗೇರ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಜಿಲ್ಲಾ ಕ.ಸಾ.ಪ ಅಧ್ಯಕ್ಷರಾದ ವೀರಣ್ಣ.ಎಮ್.ನಿಂಗೋಜಿ ಸಾಂದರ್ಭಿಕವಾಗಿ ಮಾತನಾಡಿದರು.  
ಡಾ. ಮಲ್ಲಿಕಾರ್ಜುನ ಕುಂಬಾರ, ಈಶ್ವರ ಹತ್ತಿ, ಮುಖ ಪುಟ ರಚಿಸಿದ ಬದ್ರಿನಾಥ ಪುರೋಹಿತವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. 
ತಾಲೂಕ ಕ.ಸಾ.ಪ ಕೋಶಾಧ್ಯಕ್ಷರಾದ ಮೈಲಾರಗೌಡ ಹೊಸಮನಿ. ಕಾರ್ಯಕ್ರಮವನ್ನು ನಿರೂಪಿಸಿದರು. ಫಕೀರೇಶ ಭಾಗ್ಯನಗರ ಹಾಗೂ ಸಂಗಡಿಗರು ನಾಡ ಗೀತೆಗೈದರು. ಜಿಲ್ಲಾ ಕ.ಸಾ.ಪ ಗೌರವ ಕೋಶಾಧ್ಯಕ್ಷರಾದ ಆರ್.ಎಸ್.ಸರಗಣಾಚಾರ ಸ್ವಾಗತಿಸಿದರು. ಜಿಲ್ಲಾ ಕ.ಸಾ.ಪ ಗೌರವಕಾರ್ಯದರ್ಶಿಗಳಾದ ಶಿವಾನಂದ ಮೇಟಿ ಕೊನೆಗೆ ವಂದಿಸಿದರು. 
Please follow and like us:
error