ಜನಲೋಕಪಾಲ ಮಸೂದೆ ಜಾರಿಗಾಗಿ ಕರವೇ ಧರಣಿ


ಗಂಗಾವತಿ : ಅಣ್ಣಾ ಹಜಾರೆ ನಡೆಸುತ್ತಿರುವ ಸತ್ಯಾಗ್ರಹಕ್ಕೆ ಬೆಂಬಲಿಸಿ ಮತ್ತು ಜನಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸಿ ಕರ್ನಾಟಕ ರಕ್ಷಣಾವೇದಿಕೆ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು. ಚನ್ನಬಸವಸ್ವಾಮಿ ವೃತ್ತದಿಂದ ಮೆರವಣಿಗೆ ಆರಂಭಿಸಿ ಗಾಂಧಿ ವೃತ್ತದ ಮೂಲಕ ಕೃಷ್ಣದೇವರಾಯ ವೃತ್ತಕ್ಕೆ ಆಗಮಿಸಿದರು.
ಸರಕಾರ ಜನರ ಭಾವನೆಗಳಿಗೆ ಬೆಲೆ ಕೊಡುತ್ತಿಲ್ಲ ಎಂದು ಕರವೇ ತಾಲೂಕ ಘಟಕದ ಅಧ್ಯಕ್ಷ ಪಂಪಣ್ಣ ನಾಯಕ್ ದೂರಿದರು. ಯುಪಿಎ ಸರಕಾರದ ಪ್ರತಿಕೃತಿ ಧಹಿಸಿಲಾಯಿತು.

Leave a Reply