You are here
Home > Koppal News > ಬಹಿರಂಗ ಪ್ರಚಾರಕ್ಕೆ ತೆರೆ : ಹಣ, ಮದ್ಯ ಹಂಚಿಕೆ ಕಂಡುಬಂದಲ್ಲಿ ದೂರು ನೀಡಿ

ಬಹಿರಂಗ ಪ್ರಚಾರಕ್ಕೆ ತೆರೆ : ಹಣ, ಮದ್ಯ ಹಂಚಿಕೆ ಕಂಡುಬಂದಲ್ಲಿ ದೂರು ನೀಡಿ

ಕೊಪ್ಪಳ ಸೆ.   : ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ರಾಜಕೀಯ ಪಕ್ಷದವರು, ಕಾರ್ಯಕರ್ತರು, ಅಥವಾ ಯಾವುದೇ ವ್ಯಕ್ತಿಗಳು ಹಣ, ಮದ್ಯ ಹಂಚಿಕೆ ಮಾಡಿ ಆಮಿಷ ಒಡ್ಡುವುದು, ಅಥವಾ ಹಂಚಿಕೆ ಮಾಡುತ್ತಿರುವುದು ಕಂಡುಬಂದಲ್ಲಿ ತಕ್ಷಣ ದೂರವಾಣಿಗೆ ಕರೆ ಮಾಡಿ ದೂರು ನೀಡುವಂತೆ ಸೂಚನೆ ನೀಡಲಾಗಿದೆ.
  ಉಪಚುನಾವಣೆಗೆ ಸಂಬಂಧಿಸಿದಂತೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ.  ಯಾವುದೇ ರಾಜಕೀಯ ಪಕ್ಷದವರು, ಕಾರ್ಯಕರ್ತರು ಅಥವಾ ಯಾವುದೇ ವ್ಯಕ್ತಿಗಳು ಹಣ, ಮದ್ಯ ಹಂಚುವುದು ಅಥವಾ ಇನ್ಯಾವುದೇ ಬಗೆಯ ಸಾಮಗ್ರಿಗಳನ್ನು ವಿತರಿಸಿ, ಆಮಿಷ ಒಡ್ಡುವುದು ಅಥವಾ ವಿತರಣೆ ಮಾಡುವುದು ಅಥವಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡುಬಂದಲ್ಲಿ ಕೂಡಲೆ ಚುನಾವಣೆ ಕಂಟ್ರೋಲ್ ರೂಂ. ದೂರವಾಣಿ ಸಂಖ್ಯೆ: ೦೮೫೩೯- ೨೨೫೦೨ ಕ್ಕೆ ಕರೆ ಮಾಡಿ ದೂರು ಸಲ್ಲಿಸಬಹುದು.  ಚುನಾವಣಾ ವೀಕ್ಷಕರುಗಳಾದ ಎಸ್. ಕಿಶೋರ್- ೮೭೬೨೬೨೯೮೬೧, ಅಥವಾ ರಾಜೀವ್ ಅಗರವಾಲ್- ೮೨೭೭೦೧೮೧೯೦ ಕ್ಕೆ ಕರೆ ಮಾಡಿ ದೂರು ಸಲ್ಲಿಸಬಹುದಾಗಿದೆ.  ದೂರು ಕರೆಗಳಿಗೆ ಸ್ಪಂದಿಸಿ, ಅಗತ್ಯ ಕ್ರಮ ಜರುಗಿಸಲಾಗುವುದು ಎಂದು ಚುನಾವಣಾ ವೀಕ್ಷಕರು ತಿಳಿಸಿದ್ದಾರೆ.

Leave a Reply

Top