You are here
Home > Koppal News > ಪರಿಸರ ಸಂರಕ್ಷಣೆ ನಮ್ಮೆಲರ ಹಕ್ಕು ಭಾಷಣ ಸ್ಪರ್ಧೆ

ಪರಿಸರ ಸಂರಕ್ಷಣೆ ನಮ್ಮೆಲರ ಹಕ್ಕು ಭಾಷಣ ಸ್ಪರ್ಧೆ

ನಂದಿಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಸಂರಕ್ಷಣೆ ನಮ್ಮೆಲರ ಹಕ್ಕು ಭಾಷಣ ಸ್ಪರ್ಧೆ ಕಾರ್ಯಕ್ರಮ  
ಕೊಪ್ಪಳ : ಪರಿಸರ ಸಂರಕ್ಷಣೆ ನಮ್ಮೆಲರ ಹಕ್ಕು ಭಾಷಣ ಸ್ಪರ್ಧೆ ಕಾರ್ಯಕ್ರಮ ದಿನಾಂಕ ೦೭/೦೭/೨೦೧೨ ಶನಿವಾರ ಮುಂಜಾನೆ ೧೦ ಗಂಟೆಗೆ ನಂದಿಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಮೋಹನ ಎನ್.ಬಿ ತೋಟಗಾರಿಕೆ ಉಪನಿರ್ದೆಶಕರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು ವಿಧ್ಯಾರ್ಥಿಗಳು ಪರಿಸರ ಸಂರಕ್ಷಣೆ ನಮ್ಮೆಲರ  ಹಕ್ಕುವಿಷಯದ ಮೇಲೆ ಭಾಷಣ ಮಾಡಿದರು. ಸ್ಪರ್ಧೆಯಲ್ಲಿ ತೆಜಸ್ವೀನಿ ಬೆಲ್ಲದ ಆರನೇ ತರಗತಿ ಪ್ರಥಮ, ಶ್ವೇತಾ ಕುಕನೂರು ದ್ವೀತಿಯ, ಮಂಜುಳಾ  ೬ನೇ ತರಗತಿ ತೃತೀಯ ಬಹುಮಾನ ಪಡೆದರು  ಶ್ರೀ ಶಿವಪ್ಪ ಶೇಟ್ಟರ ನಂದಿಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷತೆ ಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಮಣ್ಣ ಬೇಮಲಿ ಅಮರೇಶ ಕರಡಿ, ಶಂಕ್ರಪ್ಪ , ಈಶ್ವರಪ್ಪಗೌಡ್ರ,  ಸಾಹೆಬಗೌಡ್ರ ಪುರಾಣ ಪ್ರವಚನಕಾರರು, ಮುಖ್ಯೋಪಾಧ್ಯಾಯರಾದ ಸುರೇಶ ಕುಂಬಾರ ಪಾಲ್ಗೋಂಡಿದ್ದರು. ಕಾರ್ಯಕ್ರಮದಲ್ಲಿ ವಿಧ್ಯಾರ್ಥಿಗಳಿಗೆ ಉಚಿತವಾಗಿ ಹಾಲನ್ನು ವಿತರಿಸಲಾಯಿತು. 
ಶಿಕ್ಷಕಿಯರಾದ ಗಿರಿಜಾ ನಿರೂಪಿಸಿದರು,ಶಿಕ್ಷಕಿಯರಾದ ಸುನಂದ ಸ್ವಾಗತಿಸಿದರು, ಶಿಕ್ಷಕಿಯರಾದ ಅಶ್ವಿನಿ ಪ್ರಾಸ್ತಾವಿಕವಾಗಿ ಭಾಷಣ  ಮಾಡಿದರು, ಶಿಕ್ಷಕಿಯರಾದ ಗೀತಾ ವಂದಿಸಿದರು.  

Leave a Reply

Top