ಜಾತ್ರಾ ಸಂಭ್ರಮದಲ್ಲಿ ಜಿಲ್ಲೆಯ ಜನತೆ

ಕೊಪ್ಪಳ:  ಈಗಾಗಲೇ ಕೊಪ್ಪಳದ ಶ್ರೀಗವಿಸಿದ್ಧೇಶ್ವರ ರಥೋತ್ಸವದ ದಿನಗಳು ಹತ್ತಿರವಾಗುತ್ತಲಿವೆ. ಜಿಲ್ಲೆಯ ತುಂಬ ಸಡಗರ ಸಂಭ್ರಮ ಮೊಳಗುತ್ತಲಿದೆ. ಪ್ರತಿ ಮನೆಮನೆಗಳು  ಸುಣ್ಣಬಣ್ಣಗಳಿಂದ ಅಲಂಕೃತಗಳಾಗಿವೆ. ಓಣಿ ಓಣಿಗಳಲ್ಲಿನ ಭಕ್ತಜನರೂ ಮಹಾದಾಸೋಹಕ್ಕೆ ಸಮರ್ಪಿಸಲು ಸ್ವ ಇಚ್ಚೆಯಿಂದ ಮಾದಲಿ,  ಬೂಂದಿ,  ಲಾಡು, ಮೊದಲಾದ ಸಿಹಿತಿನಿಸುಗಳನ್ನು ತಯಾರಿಸಿ ಶ್ರೀಮಠಕ್ಕೆ ಸಮರ್ಪಿಸುವ ಯೋಜನೆಗಳನ್ನು ನಗರದ ಯುವಕರು ಹಾಕಿಕೊಂಡಿದ್ದಾರೆ. ಈಗಾಗಲೇ ಕ್ವಿಂಟಾಲ್ ಗಟ್ಟಲೇ ತುಪ್ಪವನ್ನು ಸಮರ್ಪಣೆ ಮಾಡುವದಾಗಿ ಒಂದು ಗೆಳೆಯರ ಬಳಗ ಘೋಷಿಸಿದೆ. ಹಳ್ಳಿ ಹಳ್ಳಿಗಳಿಂದಲೂ ರೊಟ್ಟಿ ಹಾಗೂ  ದವಸಾನ್ಯ- ತರಕಾರಿಗಳ  ಮಹಾಪುರ ಹರಿದುಬರುತ್ತಲಿದೆ. ಮಹಾದಾಸೋಹ ಮಂಟಪವು ಬೃಹತ್ ಆಕಾರದಲ್ಲಿ ಸಿಂಗಾರಗೊಳ್ಳುತ್ತಲಿದೆ. ನಗರದ ತುಂಬೆಲ್ಲಾ ಜಾತ್ರೆಗೆ ಆಹ್ವಾನಿಸುವ ಬಣ್ಣಬಣ್ಣಗಳಿಂದ ರಾರಾಜಿಸುತ್ತಿರು ಪ್ಲೆಕ್ಸಗಳು, ಮನೆಮನೆಯಲ್ಲಿ ಬಂಧುಬಾಂಧವರನ್ನು ಜಾತ್ರೆಗೆ ಕರೆಸಿ ಸಂಭ್ರಮವನ್ನು ಹಂಚಿಕೊಳ್ಳುವ ಉತ್ಸಕದಲ್ಲಿ  ಮಗ್ನರಾದ ಜನತೆ. ಒಟ್ಟಿನಲ್ಲಿ ರಥೋತ್ಸವದಲ್ಲಿ ಭಾಗಿಯಾಗಿ ಶ್ರೀಗವಿಸಿದ್ಧೇಶ್ವರನ ಕೃಪೆಗೆ ಪಾತ್ರರಾಗುವ  ಸಂಕಲ್ಪವನ್ನು  ಜಿಲ್ಲೆಯ ಜನತೆ ಹೊಂದಿದ್ದಾರೆ. 

ಗವಿಮಠದ ಮಹಾದಾಸೋಹಕ್ಕೆ ಹರಿದು ಬರುತ್ತಿರುವ ರೊಟ್ಟಿ ಹಾಗೂ ದವಸ ಧಾನ್ಯಗಳು, 

ಕೊಪ್ಪಳ: ಸಂಸ್ಥಾನ ಶ್ರೀಗವಿಮಠದ ಜಾತ್ರೆಯು ಹತ್ತಿರಕ್ಕೆ ಬರುತ್ತಿರಲು ಶ್ರೀಮಠದ ಮಹಾದಾಸೋಹಕ್ಕೆ ರೊಟ್ಟಿ ಹಾಗೂ ದವಸಧಾನ್ಯಗಳು ಹರಿದು ಬರುತ್ತಲಿವೆ. ಮಹಾದಾಸೋಹಕ್ಕಾಗಿ ಇಂದು ಪ್ರಥಮವಾಗಿ  ಚಿಲ್ಕಮುಕ್ಕಿ ಗ್ರಾಮದ ಸದ್ಭಕ್ತರೋರ್ವರಿಂದ  ರೊಟ್ಟಿಗಳು ಸಮರ್ಪಣೆಯಾದವು , ಇದೇ ರೀತಿ ಹೀರೆಕಾಸನಕಂಡಿ ಗ್ರಾಮದ ಸದ್ಭಕ್ತರಿಂದ ದವಸ ಧಾನ್ಯಗಳು, ಹುಣಸಿಹಾಳ ಗ್ರಾಮದ ಸದ್ಭಕ್ತರಿಂದ ರೊಟ್ಟಿಗಳು, ಭಾನಾಪುರ ಗ್ರಾಮದ ಸದ್ಭಕ್ತರಿಂದ ರೊಟ್ಟಿ, ದವಸ ಧಾನ್ಯಗಳು, ಹನುಮನಟ್ಟಿ ಗ್ರಾಮದ ಸದ್ಭಕ್ತರಿಂದ ರೊಟ್ಟಿ, ದವಸ ಧಾನ್ಯಗಳು, ಬೂಂದಿ, ಇವುಗಳು ಶ್ರೀಮಠದ ದಾಸೋಹಕ್ಕೆ ಸಮರ್ಪಣೆಯಾದವು.  ದಾನಿಗಳಿಗೆಲ್ಲ ಪೂಜ್ಯ ಶ್ರೀಗವಿಸಿದ್ದೇಶ್ವರ ಮಹಾಸ್ವಾಮೀಜಿಗಳು ಆಶಿರ್ವದಿಸಿದ್ದಾರೆ.

Please follow and like us:
error