ಡಿ. ೧೯ ರಂದು ಕನ್ನಡ ನಾಡು-ನುಡಿ ಕುರಿತು ಲೇಸರ್ ಶೋ.

ಕೊಪ್ಪಳ ಡಿ. ೧೭ (ಕ ವಾ) ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕನ್ನಡ ನಾಡು-ನುಡಿ ಸಂದೇಶ ಸಾರುವ ಅಪರೂಪದ ಲೇಸರ್ ಶೋ ಬೀಮ್ ಪ್ರದರ್ಶನವನ್ನು ಡಿ. ೧೯ ರಂದು ಸಂಜೆ ೬ ಗಂಟೆಗೆ ಕೊಪ್ಪಳ, ಗಂಗಾವತಿ, ಕುಷ್ಟಗಿ ಮತ್ತು ಯಲಬುರ್ಗಾ ಪಟ್ಟಣಗಳಲ್ಲಿ ಏಕಕಾಲಕ್ಕೆ ಹಮ್ಮಿಕೊಳ್ಳಲಾಗಿದೆ.
     ಕರ್ನಾಟಕ ರಾಜ್ಯೋತ್ಸವ ಆಚರಣೆ ಅಂಗವಾಗಿ ಇಲಾಖೆಯಿಂದ ರಚಿಸಲಾಗಿದ್ದ ಬಾರಿಸು ಕನ್ನಡ ಡಿಂಡಿಮವ ಹಾಡು,   ಕನ್ನಡ ನಾಡು-ನುಡಿ, ಸಂಸ್ಕೃತಿಯ ಸಂದೇಶ ಸಾರುವ ವಿನೂತನ ಸಂಯೋಜನೆಯ ಬೆಳಕಿನ ಕಿರಣದ ಅಪರೂಪದ ಲೇಸರ್ ಪ್ರದರ್ಶನವನ್ನು ಸಾರ್ವಜನಿಕರಿಗಾಗಿ  ಆಯೋಜಿಸಲಾಗಿದೆ.  ಇದೇ ಡಿ. ೧೯ ರಂದು ಸಂಜೆ ೬ ಗಂಟೆಗೆ ಕೊಪ್ಪಳ ನಗರದ ಕೇಂದ್ರೀಯ ಬಸ್ ನಿಲ್ದಾಣ ಹತ್ತಿರ, ಕುಷ್ಟಗಿಯ ತಾಲೂಕು ಪಂಚಾಯತಿ ಕಚೇರಿ ಹತ್ತಿರ, ಯಲಬುರ್ಗಾದ ಕಿತ್ತೂರು ರಾಣಿಚನ್ನಮ್ಮ ವೃತ್ತದ ಬಳಿ ಹಾಗೂ ಗಂಗಾವತಿಯ ಬಸ್ ನಿಲ್ದಾಣ ಹತ್ತಿರ ಲೇಸರ್ ಪ್ರದರ್ಶನ ವ್ಯವಸ್ಥೆ ಮಾಡಲಾಗಿದೆ.  ಸಾರ್ವಜನಿಕರಿಗೆ ಉಚಿತ ವೀಕ್ಷಣೆಗೆ ಅವಕಾಶವಿದೆ.  ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ವೀಕ್ಷಿಸುವಂತೆ ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಅವರು ಮನವಿ ಮಾಡಿದ್ದಾರೆ.
Please follow and like us:
error