fbpx

ಬುದ್ಧಭಾರತ ಬೆಳಗಲು ಪೆರಿಯಾರ್ ವಿಚಾರದ ಬೆಳಕನ್ನು ಹಂಚಬೇಕಿದೆ- ಡಾ. ಮೊಗಳ್ಳಿ ಗಣೇಶ್

ಹೊಸಪೇಟೆ: ಮತೀಯ ಭಾರತದಲ್ಲಿ ಬುದ್ಧಭಾರತ ಬೆಳಗಲು ಪೆರಿಯಾರ್ ವಿಚಾರದ ಬೆಳಕನ್ನು ಎಲ್ಲರೂ ಹಂಚಬೇಕಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಮೊಗಳ್ಳಿ ಗಣೇಶ್ ಹೇಳಿದರು.
ನಗರದಲ್ಲಿ ಶನಿವಾರ ಸಂಜೆ ಏಕಲವ್ಯ ಗ್ರಂಥಾಲಯ ಪ್ರಥಮ ವಾರ್ಷಿಕೋತ್ಸವದಲ್ಲಿ ಪೆರಿಯಾರ್ ವಿಚಾರಧಾರೆ ಕುರಿತು ವಿಚಾರ ಮಂಡಿಸಿದ ಅವರು, ಪೆರಿಯಾರ್ ಅಲಕ್ಷಿತ, ದಮನಿತರ ಪರವಾಗಿ ಧ್ವನಿತೆಗೆದು ಅವರಿಗೆ ಒಂದು ಮನ್ನಣೆ ಸಿಗಲು ವೈದಿಕಷಾಹಿ ವಿರುದ್ಧ ಬಂಡೆದ್ದ ಬಂಡಾಯಗಾರರಾಗಿದ್ದಾರೆ. ಅವರ ವಿಚಾರಧಾರೆಯು ಮೂಢನಂಬಿಕೆ, ಕಂದಾಚಾರ, ದೇವರು, ದೈವಗಳ ವಿರುದ್ಧ ದೊಡ್ಡ ಹೋರಾಟವನ್ನೇ ನಡೆಸಿದರು ಎಂದರು. ದೇಶದಲ್ಲಿ ಮಾತ್ರ ಅಲ್ಲ, ಜಗತ್ತಿನ ಯಾವದೇಶದಲ್ಲಿ ಅವರಂತೆ ನಾಸ್ತಿಕವಾದ ಹೋರಾಟ ನಡೆಸಿದ ಮತ್ತೊಬ್ಬರು ಇಲ್ಲ ಎಂದರು. ಅವರ ವಿಚಾರಧಾರೆಯು ಕರ್ನಾಟಕದ ಬರಹಗಾರರ ಮೇಲೆ, ಹೋರಾಟಗಾರರ ಮೇಲೆ ಇದೆ ಎಂದರು. ನಾಯಕ ಅನ್ನುವುದು ಒಂದು ಜಾತಿಯಲ್ಲ, ಅದು ಸಮುದಾಯದ ಇಂತಹ ತಳಸಮುದಾಯದ ತಾಯಿಕರುಳಿನಿಂತ ವ್ಯಾಸ, ವಾಲ್ಮೀಕಿ, ಪೆರಿಯಾರ್ ಹುಟ್ಟಿಬಂದಿದ್ದಾರೆ. ಅವರು ಜಾತಿಯನ್ನು ಮೀರಿ ಬೆಳೆದಿದ್ದಾರೆಂದರು.  ಸಂವಾದ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿ, ಪೆರಿಯಾರ್ ವಿಚಾರದ ದೀಪವನ್ನು ಮುಂದೆ ತೆಗೆದುಕೊಂಡು ಹೋಗಲು ಇಂತಹ ಕಾರ್ಯಕ್ರಮ ಹೆಚ್ಚು ಹೆಚ್ಚು ನಡೆಯಬೇಕೆಂದರು. ಸಂವಾದ ಗೋಷ್ಠಿಯ ಅಧ್ಯಕ್ಷತೆಯನ್ನು ಹಂಪಿ ಕನ್ನಡ ವಿವಿಯ ಪ್ರಾಧ್ಯಾಪಕ ಡಾ. ಮಂಜುನಾಥ ಬೇವಿಕಟ್ಟೆ ವಹಿಸಿದ್ದರು. ಸಂವಾದದಲ್ಲಿ ಕೆ. ಕರುಣಾನಿಧಿ, ಗುಜ್ಜಲ ನಾಗರಾಜ, ರಾಜನಹಳ್ಳಿ ಗುರುಪೀಠದ ಜಿಲ್ಲಾ ಧರ್ಮದರ್ಶಿ ಬಿ.ಎಸ್. ಜಂಬಯ್ಯ ನಾಯಕ, ಪತ್ರಕರ್ತ ಪರುಶುರಾಮ ಕಲಾಲ್ ಮತ್ತಿತರರು ಭಾಗವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಗರಸಭೆ ಸದಸ್ಯ ಗುಡಿಗುಂಟೆ ಮಲ್ಲಿಕಾರ್ಜುನ,ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಪೂಜಾರಿ ವೆಂಕೋಬ ನಾಯಕ, ತಾರಿಹಳ್ಳಿ ವೆಂಕಟೇಶ, ಗುಂಡಿ ರಾಘವೇಂದ್ರ, ಬಿ.ತಾಯಪ್ಪ ನಾಯಕ ಪಾಲ್ಗೊಂಡಿದ್ದರು. ನಂತರ ಸಮುದಾಯ ಸಾಂಸ್ಕೃತಿಕ ಸಂಘಟನೆಯಿಂದ ನಾಗರಾಜ ಪತ್ತಾರ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. 
Please follow and like us:
error

Leave a Reply

error: Content is protected !!