ದೀಡನಮಸ್ಕಾರ ಮೂಲಕ ಅನ್ಸಾರಿ ವಿಜಯೋತ್ಸವ ಆಚರಣೆ

ಕೊಪ್ಪಳ, ಮೇ.೧೦: ಗಂಗಾವತಿ ಜೆಡಿಎಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ಬಾರಿ ಬಹುಮತಗಳಿಂದ ಆಯ್ಕೆಗೊಂಡಿದ್ದರಿಂದ ತಾಲೂಕಿನ ಹಳೆಬಂಡಿ ಹರ್ಲಾಪುರ ಗ್ರಾಮದ ಜೆಡಿಎಸ್ ಪಕ್ಷದ ಕಾರ್ಯಕರ್ತರು ದೀಡನಮಸ್ಕಾರ ಹಾಕಿ ನೂರೊಂದು ಕಾಯಿ ಓಡೆಯುವ ಮೂಲಕ ವಿಜಯೋತ್ಸವ ಆಚರಿಸಿದ್ದಾರೆ.
ಇಲ್ಲಿನ

ಆಂಜಿನೇಯ ದೇವಸ್ಥಾನ ಹಾಗೂ ಮೈಬೂಸುಬಾನಿ ದರ್ಗಾಕ್ಕೆ ಹುಲಗಪ್ಪ ಮಾರೆಪ್ಪ ಬಾವಿಕಟ್ಟಿ ದೀಡನಮಸ್ಕಾರ ಹಾಕಿ, ಕಾರ್ಯಕರ್ತರೆಲ್ಲಾ ಸೇರಿ ನೂರೊಂದು ಕಾಯಿ ಓಡೆದು ಅವರಿಗೆ ಇನ್ನು ಹೆಚ್ಚಿನ ಉನ್ನತ ಸ್ಥಾನ ಲಭಿಸುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.

ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಿ.ಹೆಚ್. ರಮೇಶ ಓಣಬಳ್ಳಾರಿ, ಅಲ್ಪಸಂಖ್ಯಾತರ ಘಟಕದ ತಾಲೂಕಾಧ್ಯಕ್ಷ ಫೀರೋಜ್‌ಖಾನ್, ಶ್ರೀಧರ, ಭಾಷಾಸಾಬ್, ದೇವಮ್ಮ ಸೇರಿದಂತೆ ಪಕ್ಷದ ಎಲ್ಲಾ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Leave a Reply