fbpx

ಪಿಯುಸಿಎಲ್ ಜಿಲ್ಲಾ ಘಟಕ ರಚನೆ

ಕೊಪ್ಪಳ : ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಪಿಯುಸಿಎಲ್ ಘಟಕ ರಚನೆ ಮಾಡಲಾಯಿತು. ರಾಜ್ಯ ಪಿಯುಸಿಎಲ್ ಪ್ರಧಾನ ಕಾರ್‍ಯದರ್ಶಿ ಡಾ.ಲಕ್ಷ್ಮೀ ನಾರಾಯಣ ಮೈಸೂರ ಅಧ್ಯಕ್ಷತೆಯಲ್ಲಿ ಸಭೆ ಸೇರಲಾಯಿತು. ಎರಡು ವರ್ಷದ ಅವಧಿಗಾಗಿ ಜಿಲ್ಲಾ ಪಿಯುಸಿಎಲ್ (ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್) ಘಟಕ ರಚನೆ ಮಾಡಲಾಯಿತು. ಜಿಲ್ಲಾಧ್ಯಕ್ಷರನ್ನಾಗಿ ವಿಠ್ಠಪ್ಪ ಗೋರಂಟ್ಲಿ, ಉಪಾಧ್ಯಕ್ಷರಾಗಿ ಎಚ್.ರಘು,ಗಾಳೆಪ್ಪ ಮುಂಗೋಲಿ , ಪ್ರಧಾನ ಕಾರ್‍ಯದರ್ಶಿ ಅಲ್ಲಾಗಿರಿರಾಜ್, ಕಾರ್‍ಯದರ್ಶಿಗಳಾಗಿ ಬಿ.ಪೀರಬಾಷಾ, ಸಿರಾಜ್ ಬಿಸರಳ್ಳಿ, ಖಜಾಂಚಿ-ಟಿ.ರಾಘವೇಂದ್ರ, ಕಾರ್‍ಯಕಾರಿ ಸಮಿತಿ ಸದಸ್ಯರಾಗಿ ಡಿ.ಎಚ್.ಪೂಜಾರ್, ಹೆಚ್.ವಿ.ರಾಜಾಬಕ್ಷಿ, ಬಸವರಾಜ್ ಶೀಲವಂತರ, ರಾಜಶೇಖರ ಮುಳಗುಂದ,ಬಸವನಗೌಡ ಸೂಳೆಕಲ್, ಮಂಜುನಾಥ ಚಕ್ರಸಾಲಿ, ಜೆ.ಭಾರದ್ವಾಜ ಆಯ್ಕೆಮಾಡಲಾಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಮಹಿಳಾ ಪ್ರಗತಿಪರ ಸಂಘಟನೆಗಳ ಮುಖಂಡರಾದ ಡಾ.ರತಿ ರಾವ್ ಸಭೆಯನ್ನುದ್ದೇಶಿಸಿ ಮಾತನಾಡಿದರು. 
Please follow and like us:
error

Leave a Reply

error: Content is protected !!