ಸವಳಕ್ಯಾಂಪ್‌ ನೀರಿನ ಟ್ಯಾಂಕ್ ಕಾಮಗಾರಿ ಕಳಪೆ : ಸಹಾಯಕ ಕಾರ್ಯನಿರ್ವಾಹಕ ಆಯುಕ್ತರ ಕಛೇರಿ ಮುಂದೆ ಧರಣಿ.

ಹೊಸಕೇರಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಸವಳಕ್ಯಾಂಪ್‌ನಲ್ಲಿ ತಮ್ಮ ಇಲಾಖೆಯಿಂದ ನಿರ್ಮಿಸುತ್ತಿರುವ ಕುಡಿಯುವ ನೀರಿನ ಓವರ್‌ಹೆಡ್ ಟ್ಯಾಂಕ್ ಕೆಲಸ ಪೂರ್ತಿ ಕಳಪೆಯಾಗಿರುತ್ತದೆ. ಪಿಲ್ಲರಗಳ ಬುನಾದಿ ಮರಮ್‌ನಿಂದ ತುಂಬಬೇಕಾಗಿದ್ದರೂ ಗುತ್ತಿಗೆದಾರ ಟ್ಯಾಕ್ಟರ್‌ಗೆ ಬ್ಲೆಡ್ ಹಚ್ಚಿ ಪಕ್ಕದ ಜಮೀನಿನಲ್ಲಿರುವ ಸವಳು ಮಣ್ಣಿನಿಂದ ಬುನಾದಿ ತುಂಬಿದ್ದಾರೆ. ಇದರಿಂದ ಓವರ್‌ಹೆಡ್‌ಟ್ಯಾಂಕ್ ಮುಂದಿನ ದಿನಗಳಲ್ಲಿ ಬೀಳುವ ಸಾಧ್ಯತೆ ಇರುತ್ತದೆ. ನಮ್ಮ ಜಿಲ್ಲೆಯಲ್ಲಿ ಇಂತಹ ಅವಗಢಗಳು ಸಾಕಷ್ಟು ಜರುಗಿದರೂ ತಮ್ಮ ಇಲಾಖೆ ಎಚ್ಚೆತ್ತುಕೊಂಡಿಲ್ಲ. ತಾವು ಕೂಡಲೇ ಸ್ಥಳಪರಿಶೀಲನೆ ಮಾಡಿ ಕಳಪೆ ಕಾಮಗಾರಿಯನ್ನು ನಿಲ್ಲಿಸಿ ಗುಣಮಟ್ಟದ ಕಾಮಗಾರಿ ನಡೆಸಲು ಗುತ್ತಿಗೆದಾರರಿಗೆ ಆದೇಶಿಸಬೇಕು. ಸವಳಕ್ಯಾಂಪ್ ರಾಜ್ಯ ಮಾನವ ಹಕ್ಕುಗಳ ಆಯೋಗದ ನ್ಯಾಯಾಧೀಶರು ಭೇಟಿ ಮಾಡಿ ಈ ಕ್ಯಾಂಪಿಗೆ ಕಂದಾಯ ಗ್ರಾಮವೆಂದು ಘೋಷಿಸಿದ್ದಾರೆ. ಇಲ್ಲಿ ನಡೆಯುವ ಎಲ್ಲಾ ಅಭಿವೃದ್ಧಿ ಕೆಲಸಗಳು ಪಾರದರ್ಶಕವಾಗಿರಬೇಕೆಂದು ಆದೇಶಿಸಿದ್ದಾರೆ. ಈ ವಿಷಯ ತಮ್ಮ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಸಹಿತ ಆದೇಶಿಸಿರುತ್ತಾರೆ. ಆದರೆ ಜಿಲ್ಲಾ ಪಂಚಾಯತಿಯ ತಾಲೂಕ ಕಾರ್ಯಾಲಯದ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಕೂಡಿಕೊಂಡು ನಿರ್ಮಿಸುತ್ತಿರುವ ಕಳಪೆ ಕಾಮಗಾರಿಯನ್ನು ನಿಲ್ಲಿಸಿ ಕಾಮಗಾರಿಯ ಗುಣಮಟ್ಟ ತನಿಖೆ ಮಾಡಲು ಒತ್ತಾಯಿಸಿ ಜಿಲ್ಲಾ ಪಂಚಾಯತಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಾರ್ಯಾಲಯದ ಮುಂದೆ ಧರಣಿ ಸತ್ಯಾಗ್ರಹ ದಿನಾಂಕ ೨೪-೦೪-೨೦೧೫ ರಂದು ನಡೆಸಲಾಯಿತು.  ಈ ಧರಣಿಯಲ್ಲಿ ಸಿಪಿಐಎಂಎಲ್ ಮುಖಂಡರು ಭಾರದ್ವಾಜ್, ಎಐಸಿಸಿಟಿಯು ಮುಖಂಡ ಎಂ.ವಿರುಪಾಕ್ಷಪ್ಪ, ಅಖಿಲ ಭಾರತ ಕೃಷಿ ಕಾರ್ಮಿಕ ಸಂಘದ ಮುಖಂಡ ಎಂ. ಏಸಪ್ಪ, ಲಚಮಪ್ಪ, ಕರಿಯಪ್ಪ, ಪಾಮಪ್ಪ, ಯಂಕಮ್ಮ, ದೇವಿ, ಯಮನಮ್ಮ ಮುಂತಾದವರು ಪಾಲ್ಗೊಂಡಿದ್ದರು.

Related posts

Leave a Comment