fbpx

ಜಾನಪದ ಕಲೆಯನ್ನು ಉಳಿಸಿ-ಬೆಳಸುವ ಕಾರ್ಯ ನಮ್ಮ ನಿಮ್ಮೆಲರ ಕರ್ತವ್ಯ – ರಾಘವೇಂದ್ರ ಪಾನಘಂಟಿ

    ಸಂದೇಶ ಸಂಸ್ಕೃತಿ ಜಾನಪದ ಸಂಘ (ರಿ) ಮುನಿರಾಬಾದ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪರಿಶಿಷ್ಠ ಜಾತಿ ಪರಿಶಿಷ್ಠ ಪಂಗಡ ಹಾಗೂ ಹಿಂದೂಳಿದ ವರ್ಗಗಳ ಪ್ರಾಯೋಜಿತ ಅಡಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ರಾಘವೇಂದ್ರ ಪಾನಘಂಟಿಯವರು ಜ್ಯೋತಿ ಬೆಲೆಗಿಸುವುದರ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಉದ್ಘಾಟನೆಯ ಭಾಷಣವನ್ನು ಮಾಡಿದ ಅವರು ಗ್ರಾಮೀಣ ಕಲೆಗಳಾದ ಜಾನಪದಗಿತೆಗಳು, ಸೊಬಾನಿ ಪದಗಳು, ಲಾವಣಿ ಪದಗಳು, ತತ್ವಪದಗಳನ್ನು ನಾಲ್ಕು ತಂಡಗಳು ನಾಡಿನ ಸಂಸ್ಕೃತಿಯನ್ನು ಉಳಿಸುವಲ್ಲಿ ಈ ಇಂತಹ ಕಲೆಗಳು ಅವಶ್ಯಕವಾಗಿದ್ದು ನಮ್ಮ ಸಂಸ್ಕೃತಿಯನ್ನು ಉಳಿಸುವಲ್ಲಿ ಕಲಾವಿದರ ಪಾತ್ರ ಬಹುಮುಖ್ಯವಾಗಿದೆ ಎಂದರು. 
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಗ್ರಾ. ಪಂ ಭಾಗ್ಯನಗರದ ಅಧ್ಯಕ್ಷರಾದ ಹೊನ್ನುರಸಾಬ ಬೈರಾಪೂರ ಮಾತನಾಡಿ ಈ ಕಾರ್ಯಕ್ರಮವನ್ನು ವಿಕ್ಷೀಸಿ ಬಹಳ ಸಂತೋಷವಾಗಿದೆ. ಸಂಸ್ಕೃತಿ ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಗಾಗೆ ಏರ್ಪಡಿಸುವುದರಿಂದ ಜನರು ಸಂತೋಷಭರಿತರಾಗುತ್ತಾರೆ ಎಂದು ಮಾತನಾಡಿದರು. ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೆಶಕರಾದ ಟಿ.ಕೋಟ್ರಪ್ಪ ಚೋರನೂರು ಮಾತನಾಡಿ ಸಾಕಷ್ಟು ಮಹಿಳೆಯರು ಪಾಲ್ಗೊಂಡಿದ್ದು ಬಹಳ ವಿಶೇಷ ಅನಿಸುತ್ತಿದೆ ಸಂಸ್ಕೃತಿ ಮಹಿಳೆಯರ ಅವಿಭಾಜ್ಯ ಅಂಗ ಆದ್ದರಿಂದ ಸಂಸ್ಕೃತಿ ಬೆಳೆಸುವಲ್ಲಿ ತಾಯಂದಿರ ಪಾತ್ರ ಬಹು ಮುಖ್ಯವಾಗಿದ್ದು ಆದ್ದರಿಂಧ ನಮ್ಮ ಕಲಾವಿದರು ಜಾನಪದ ಗೀತೆಗಳನ್ನು ಪ್ರಸ್ತುತ ಪಡಿಸುವಲ್ಲಿ ತಯಾರಿಯಲ್ಲಿದ್ದಾರೆ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದರು ನಂತರದಲ್ಲಿ ಗಾಳೆಪ್ಪ ಹೊರತಟ್ನಾಳ ಕಲಾ ತಂಡ ಲಾವಣಿ ಗೀತೆಗಳನ್ನು ಹಾಡುವುದರ ಮುಖಾಂತರ ಸೇರಿದ್ದ ಜನರನ್ನು ಮನಸೊರೆಗೊಳಿಸಿದರು. ನಂತರ ಹುಲಿಗೆವ್ವ ಕಲಾತಂಡ ಜಾನಪದ ಗೀತೆಗಳನ್ನು ಹಾಡಿದರು. ಮತ್ತು ಲಲೀತಾ ಹೆಚ್ ಹರಿಜನ ಕಲಾ ತಂಡದವರು ಸೊಬಾನ ಪದಗಳನ್ನು ಹಾಡಿದರು. ರಾಮಣ್ಣ ಮಾದಿನೂರು ತತ್ವ ಪದಗಳನ್ನು ಹಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸದರು.    
ಈ ಸಂಧರ್ಭದಲ್ಲಿ ರಾಜ್ಯ ಯುವ ಪ್ರಶಸ್ತಿ ವಿಜೇತ ಶಿದ್ದಲಿಂಗಯ್ಯ ಹಿರೇಮಠ, ಉಪನ್ಯಾಸಕರು ಮತ್ತು ಸಆಹಿತಿಗಳಾದ ಸಿದ್ದಲಿಂಗಪ್ಪ ಕೊಡ್ನೆಕಲ್ಲ, ಮಾಜಿ ಸೈನಿಕರಾದ ನಿಂಗಪ್ಪ ಗಾಣಿಗೆರ, ಯುವ ಸಾಹಿತಿಯಾದ ಪ್ರಸನ್ನಕುಮಾರ, ಪುಷ್ಪಾ ಗಾಣಿಗೇರ, ಹನುಮಂತಪ್ಪ ಹೊರತಟ್ನಾಳ, ಸುರೇಶ, ಬ್ರಹ್ಮಾನಂದ ಬಡಿಗೇರ, ದೇವರಾಜ ಬಟ್ಟಪನಳ್ಳಿ, ವಸಂತ ಮೆಳ್ಳಿಕೇರಿ, ನಿಂಗಪ್ಪ ಕುಣಿಕೇರಿ, ಗ್ರಾಮದ ಗುರು ಹಿರಿಯರು, ಯುವಕರು ಉಪಸ್ಥಿತರಿದ್ದರು. 
Please follow and like us:
error

Leave a Reply

error: Content is protected !!