ಗಣೇಶ ವಿಸರ್ಜನೆಗೆ ನಗರಸಭೆಯಿಂದ ಸಕಲ ಸಿದ್ಧತೆ

 ಪ್ರತಿ ವರ್ಷದಂತೆ ಈ ಭಾರಿಯೂ ನಗರದ ವಿವಿಧ ವೃತ್ತ ಹಾಗೂ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣೇಶ ಮೂರ್ತಿಗಳ ವಿಸರ್ಜನೆಗೆ ಕೊಪ್ಪಳ ನಗರಸಭೆ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ.
ನಗರದ ಹಲವಾರು ಸ್ಥಳಗಳಲ್ಲಿ ಪ್ರತಿಷ್ಠಾಪಿಸಲಾಗಿರುವ ಸಾರ್ವಜನಿಕ ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆಗಾಗಿ ನಗರಸಭೆ ಗಣೇಶ ಮೂರ್ತಿಗಳ ವಿಸರ್ಜಜನಾ ಸ್ಥಳವಾದ ಹುಲಿಕೇರಿ ಪ್ರದೇಶ ಸೇರಿದಂತೆ ನಗರದ ಪ್ರಮುಖ ರಸ್ತೆಗಳ ಸ್ವಚ್ಛತಾ ಕಾರ್ಯವನ್ನು ಈಗಾಗಲೇ ಭರದಿಂದ ಕೈಗೊಂಡಿದೆ.
        ಡಿವೈಎಸ್‌ಪಿ ರಾಜು, ಟೌನ್ ಸಿಪಿಐ ಮೋಹನ್ ಪ್ರಸಾದ, ಪೌರಾಯುಕ್ತ ರಮೇಶ ಪಟ್ಟೇದಾರ, ಉಪಾಧ್ಯಕ್ಷ ಅಮ್ಜದ್ ಪಟೇಲ್ ನೇತೃತ್ವದ ತಂಡ ಗಣೇಶ ಮೂರ್ತಿಗಳ ವಿಸರ್ಜನೆಗೆ ಸಾಗುವ ನಗರದ ಎಲ್ಲ ರಸ್ತೆಗಳು ಹಾಗೂ ಸಾಮೂಹಿಕ ಗಣೇಶ ಮೂರ್ತಿಗಳ ವಿಸರ್ಜನಾ ಸ್ಥಳವಾದ ಹುಲಿಕೇರಿ ಪ್ರದೇಶಗಳಿಗೆ ತೆರಳಿ ಪರಿಶೀಲಿಸಿದರು.
ನಗರದಲ್ಲಿ ನೀರು ಪೂರೈಕೆ, ಒಳ ಚರಂಡಿ ಹಾಗೂ ಯುಜಿಡಿ ಕಾಮಗಾರಿಗಳಿಂದ ಹಾಳಾಗಿರುವ ರಸ್ತೆಗಳಿಗೆ ಮರಂ ಹಾಕುವುದು, ಎಲ್ಲ ರಸ್ತೆಗಳಲ್ಲಿ ಸಮರ್ಪಕ ಬೀದಿ ದೀಪ ಅಳವಡಿಸುವುದು, ರಸ್ತೆಗಳ ಸ್ವಚ್ಛತೆ ಹಾಗೂ ನಗರದ ಜವಾಹರ ರಸ್ತೆಯಲ್ಲಿನ ಯೂಸೂಫಿಯಾ ಮಸೀದಿ ಬಳಿ ಬ್ಯಾರಿಕೇಡ್ ಹಾಕುವುದು ಸೇರಿದಂತೆ ಹಲವಾರು ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ನಗರಸಭೆ ಕಾಮಗಾರಿಗಳನ್ನು ತುರ್ತಾಗಿ ಕೈಗೊಂಡಿದೆ.
ಈ ಸಂದರ್ಭದಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಮಣ್ಣ ಹದ್ದಿನ, ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿ ಸಲಿಂ, ಸಹಾಯಕ ಅಭಿಯಂತರ ವೀರೇಶ ಸವಡಿ, ಮುಖಂಡ ಮಾರುತಿ ಕಾರಟಗಿ ಮತ್ತಿತರರು ಉಪಸ್ಥಿತರಿದ್ದರು.
Please follow and like us:
error