You are here
Home > Koppal News > ರಾಜ್ಯ ಹೆದ್ದಾರಿ ರಸ್ತೆ ರೋಖ್ ಚಳುವಳಿ

ರಾಜ್ಯ ಹೆದ್ದಾರಿ ರಸ್ತೆ ರೋಖ್ ಚಳುವಳಿ

  ತಾಲುಕಿನ ಜಬ್ಬಲಗುಡ್ಡ ಗ್ರಾಮದಲ್ಲಿ ಗಂಡುಗಲಿ ಕುಮಾರರಾಮ ಕುಮ್ಮಟದುರ್ಗ ರಕ್ಷಣಾ ಸಮಿತಿ, ಶ್ರೀ ಗಣಡುಗಲಿ ಕುಮಾರರಾಮ  ಯುವಕ ಮಂಡಳ ಹಾಗೂ ಸಾರ್ವಜನಿಕರು, ಎಲ್ಲಾ ಸಂಘ ಸಂಸ್ಥೆಗಳು ಜಬ್ಬಲಗುಡ್ಡ ಮೇಲ್ಬಾಗದಲ್ಲಿ ಬರುವ ಐತಿಹಾಸಿಕ ವೀರಪುರುಷ ಗಂಡುಗಲಿ ಕುಮಾರರಾಮನ ದೇವಸ್ಥಾನಕ್ಕೆ ಹೋಗುವ ರಸ್ತೆಯನ್ನು ಮುನಿರಾಬಾದ ನಿಂದ ಮೆಹಬೂಬನಗರ ರೈಲ್ವೆ ನಿರ್ಮಾಣ ಕಾಮಗಾರಿಯವರು ಕುಮಾರರಾಮನ ದೇವಸ್ಥಾನಕ್ಕೆ ಹೋಗುವ ೧ ಕಿ. ಮೀ ರಸ್ತೆಯನ್ನು ಹದಗೆಡಿಸಿ ತಮ್ಮ ಕಾಮಗಾರಿಗೆ ಉಪಯೋಗಿಸಿಕೊಂಡು ಆರಸ್ತೆಯನ್ನು ಸರಿಮಾಡದೇ ಮತ್ತು ಐತಿಹಾಸಿಕ ಸ್ಥಳಕ್ಕೆ ಹೋಗುವ ಪ್ರವಾಸಿಗರಿಗೂ ಮತ್ತು ಭಕ್ತಾಧಿಗಳಿಗೂ ಸಾರ್ವಜನಿಕರಿಗೂ, ರೈತರಿಗೂ ತುಂಬಾ ತೊಂದರೆಯಾಗಿರುತ್ತದೆ. ಇದರ ಕುರಿತಾಗಿ ಮತ್ತು ದೇವಸ್ಥಾನದ ಅಭಿವೃದ್ಧಿ ಕುರಿತಾಗಿ ಈಗಾಗಲೇ ದಿನಾಂಕ ೧೦-೦೩-೨೦೧೪ ರಂದು ಜಿಲ್ಲಾ ಕಾರ್ಯಾಲಯಕ್ಕೆ ಮನವಿ ಸಲ್ಲಿಸಿದರು ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಆದ ಕಾರಣ ದಿನಾಂಕ ೨೬-೧೧-೨೦೧೪ ರಂದು ಬೆಳಗ್ಗೆ ೮ ಗಂಟೆಯಿಂದ ಸಾಯಂಕಾಲ ೬ ಗಂಟೆಯವರೆಗೆ  ರಾಜ್ಯ ಹೆದ್ದಾರಿಯನ್ನು ಬಂದ್  ಮಾಡುವುದಾಗಿ ಇಂದು ಜಿಲ್ಲಾದಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. 
ಈ ಸಂದರ್ಭದಲ್ಲಿ ಕಮ್ಮಟದುರ್ಗ ರಕ್ಷಣಾ ಸಮಿತಿ ಅಧ್ಯಕ್ಷ ವೆಂಕಟೇಶ ಈಳಿಗೇರ, ಕುಮಾರರಾಮ ಯುವಕ ಸಂಘದ ಅಧ್ಯಕ್ಷ ಮಂಜುನಾಥ ಭೋವಿ, ಹನಮನಗೌಡ, ನಾಗಪ್ಪ ಮುಂಥಾದವರು ಉಪಸ್ಥಿತರಿದ್ದರು. 

Leave a Reply

Top