ವಸತಿ ಶಾಲೆಗಳಿಗೆ ನಿವೃತ್ತ ಶಿಕ್ಷಕರ ಭರ್ತಿ : ಅರ್ಜಿ ಆಹ್ವಾನ

  ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಮೊರಾರ್ಜಿ ದೇಸಾಯಿ, ಕಿತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಲ್ಲಿ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷಕ್ಕೆ ಖಾಲಿ ಉಳಿಯುವ ಶಿಕ್ಷಕರ ಹುದ್ದೆಗಳಿಗೆ ಸರಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಶಿಕ್ಷಕರನ್ನು ನೇಮಿಸಿಕೊಳ್ಳಲು ಉದ್ದೇಶಿಸಲಾಗಿದ್ದು, ಅರ್ಹ ಶಿಕ್ಷಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕಾರ್ಯ ನಿರ್ವಾಹಕ ನಿರ್ದೇಶಕರು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು ಇವರ ಸೂಚನೆಯ ಮೇರೆಗೆ ಪ್ರಸಕ್ತ ಸಾಲಿಗೆ ಮೊರಾರ್ಜಿ ದೇಸಾಯಿ, ಕಿತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಲ್ಲಿ ಖಾಲಿ ಉಳಿಯುವ ಶಿಕ್ಷಕರ ಹುದ್ದೆಗಳಿಗೆ ಸರಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ ಸಹ ಶಿಕ್ಷಕರನ್ನು ಗೌರವ ಧನ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ಉದ್ದೇಶಿಸಲಾಗಿದ್ದು, ಮಾಹೆಯಾನ ರೂ.೮,೦೦೦ ಗಳ ಗೌರವಧನ ನೀಡಲಾಗುವುದು. 
ಸಮಾಜ ಕಲ್ಯಾಣ ಇಲಾಖೆಗೆ ಕನ್ನಡ ಶಿಕ್ಷಕರು-೧, ಇಂಗ್ಲೀಷ್-೧, ಹಿಂದಿ-೨, ಗಣಿತ-೧, ವಿಜ್ಞಾನ-೪, ಸಮಾಜ ವಿಜ್ಞಾನ-೨ ಹೀಗೆ ಒಟ್ಟು ೧೧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಹಿಂದಿ-೧, ಗಣಿತ-೧, ವಿಜ್ಞಾನ-೨, ಸಮಾಜ ವಿಜ್ಞಾನ-೧ ಹೀಗೆ ಒಟ್ಟು ೦೫ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಕನ್ನಡ, ಇಂಗ್ಲೀಷ್, ಹಿಂದೆ ಮತ್ತು ಸಮಾಜ ವಿಜ್ಞಾನ ವಿಷಯಕ್ಕೆ ಬಿಎಬಿಇಡಿ ವಿದ್ಯಾರ್ಹತೆ ಹಾಗೂ ಗಣಿತ ಮತ್ತು ವಿಜ್ಞಾನ ವಿಷಯಗಳಿಗೆ ಬಿಎಸ್‌ಸಿ ಬಿಇಡಿ ವಿದ್ಯಾರ್ಹತೆ ಆಗಿರಬೇಕು.  ಆಸಕ್ತ ನಿವೃತ್ತ ಶಿಕ್ಷಕರು ತಮ್ಮ ಸಂಪೂರ್ಣ ಬಯೋಡಾಟಾ ಅರ್ಜಿಯನ್ನು ಜಿಲ್ಲಾ ಅಧಿಕಾರಿಗಳು, ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕೊಪ್ಪಳ ಇವರಿಗೆ ಆ.೨೪ ರೊಳಗಾಗಿ ಸಲ್ಲಿಸಬಹುದಾಗಿದೆ ಎಂದು  ತಿಳಿಸಿದೆ.

Leave a Reply