ಗಂಗಾವತಿ- ನಿರಂತರ ಜ್ಯೋತಿ ಕಾಮಗಾರಿ ಪ್ರಾರಂಭ : ಎಚ್ಚರಿಕೆ ವಹಿಸಲು ಸಾರ್ವಜನಿಕರಿಗೆ ಸೂಚನೆ

gangavathi : ಗಂಗಾವತಿ ತಾಲೂಕಿನಲ್ಲಿ ನಿರಂತರ ಜ್ಯೋತಿ ಯೋಜನೆಯ ಕಾಮಗಾರಿ ಪ್ರಾರಂಭಿಸಲಾಗಿದ್ದು, ಹಲವಾರು ಗ್ರಾಮಗಳಲ್ಲಿ ಹಾದುಹೋಗುವ ವಿದ್ಯುತ್ ಲೈನ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಗಂಗಾವತಿ ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಸೂಚನೆ ನೀಡಿದ್ದಾರೆ.
  ನಿರಂತರ ಜ್ಯೋತಿ ಯೋಜನೆಯಡಿ ಕನಕಗಿರಿ, ಹನುಮನಾಳ್, ಕನಕಾಪುರ, ಬೈಲಕಂಪುರ, ಬಸರಿಹಾಳ್, ಗೌರಿಪುರ, ದೇವಲಾಪುರ, ಲಾಯದುಣಸಿ, ವರ್ಣಖೇಡ, ಹುಲಿಹೈದರ, ಹೊಸಗುಡ್ಡಾ, ಸಿರಿವಾರ್, ಗೋಡಿನಾಳ, ಹಿರೇಖೇಡ, ಚಿಕ್ಕಖೇಡ, ನೀರಲೂಟಿ, ಮಲ್ಲಿಗೆವಾಡ, ಕೆ. ಕಾಟಾಪುರ, ಚಿಕ್ಕವಡ್ಡರಕಲ್ ಗ್ರಾಮಗಳಲ್ಲಿ ಹಾದುಹೋಗುವ ವಿದ್ಯುತ್ ಲೈನಿನ ಕಾಮಗಾರಿ ಪೂರ್ಣಗೊಂಡಿರುವುದರಿಂದ ಈಗಾಗಲೆ ನ. ೧೬ ರಂದು ಲೈನಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.  ಗ್ರಾಹಕರು ಈ ವ್ಯಾಪ್ತಿಯ ವಿದ್ಯುತ್ ಕಂಬಗಳಿಗೆ ದನ ಕರುಗಳನ್ನು ಕಟ್ಟುವುದಾಗಲಿ, ಹಗ್ಗ ತಂತಿ ಕಟ್ಟುವುದಾಗಲಿ ಮಾಡಬಾರದು.  ಅಲ್ಲದೆ ವಿದ್ಯುತ್ ಇಲಾಖೆಯ ಪರವಾನಗಿ ಪಡೆಯದೆ ವಿದ್ಯುತ್ ಕಂಬಹತ್ತಲು ಅಥವಾ ಅನಧಿಕೃತ ವಿದ್ಯುತ್ ಸಂಪರ್ಕ ಪಡೆಯಲು ಪ್ರಯತ್ನಿಸಬಾರದು.  ಇದನ್ನು ಮೀರಿ ಒಂದು ವೇಳೆ ಯಾವುದೇ ಗ್ರಾಹಕರು/ಗ್ರಾಮಸ್ತರು ಅನಾಹುತ ಮಾಡಿಕೊಂಡಲ್ಲಿ ಅದಕ್ಕೆ ಅವರೇ ನೇರ ಹೊಣೆಗಾರರಾಗುತ್ತಾರೆ.  ವಿದ್ಯುತ್ ಇಲಾಖೆಯು ಯಾವುದೇ ಹೊಣೆಯಲ್ಲವೆಂದು ಗಂಗಾವತಿ ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಎಚ್ಚರಿಕೆ ನೀಡಿದ್ದಾರೆ.

Leave a Reply