You are here
Home > Koppal News > ತೊಗಲು ಗೊಂಬೆಯಾಟ ಪ್ರದರ್ಶನ

ತೊಗಲು ಗೊಂಬೆಯಾಟ ಪ್ರದರ್ಶನ

ಕೊಪ್ಪಳ : ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಐ.ಕ್ಯೂ.ಎ.ಸಿ ಹಾಗೂ ಕನ್ನಡ ವಿಭಾಗದಿಂದ ದಿನಾಂಕ ೨೪-೦೩-೨೦೧೪ ರಂದು  ಸೋಮವಾರ ಸಬಾಭವನದಲ್ಲಿ ತೊಗಲುಗೊಂಬೆಯಾಟ ಪ್ರದರ್ಶನ ಏರ್ಪಡಿಸಲಾಗಿತ್ತು. ಮೋರನಾಳ ಗ್ರಾಮದ ಕೇಶಪ್ಪ ದೊಡ್ಡಬಾಳಪ್ಪ ಸಿಳ್ಳಿಕ್ಯಾತರು ಇನರು ವಿರಾಟ ಪರ್ವ ಪ್ರಸಂಗವನ್ನು ಸೊಗಸಾಗಿ ಪ್ರದರ್ಶಿಸಿದರು. ಆರಂಭದಲ್ಲಿ ಉದ್ಘಾಟನೆಯನ್ನು ಕೊಪ್ಪಳ ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷರಾದ ಬಸವರಾಕ ಆಕಳವಾಡಿ ನೆರವೇರಿಸಿ ಇಂತಹ ಕಲೆಗಳು ನಮ್ಮ ಸಂಸ್ಕೃತಿಯ ಜೀವನಾಡಿಗಳಿದ್ದಂತೆ. ಇವುಗಳನ್ನು ಉಳಿಸುವ, ಬೆಳೆಸುವ, ಪ್ರೋತ್ಸಾಹಿಸುವ ಅಗತ್ಯತೆ ಇದೆ ಎಂದರು. ಅತಿಥಿಗಳಾಗಿ ಸಾಹಿತಿ ಅಲ್ಲಮಪ್ರಭು ಬೆಟ್ಟದೂರ, ಎಚ್.ಎಸ್.ಪಾಟೀಲ, ಡಾ.ಕನಕೇಶಮೂರ್ತಿ ಆಗಮಿಸಿದ್ದರು. ಅಧ್ಯಕ್ಷತೆ ಪ್ರಭಾರಿ ಪ್ರಾಚಾರ್ಯ ಮಹೇಶ ಮಮದಾಪುರ ವಹಿಸಿದ್ದರು. ವೇದಿಕೆಯಲ್ಲಿ ಪ್ರಾಧ್ಯಾಪಕರಾದ ಗಾಯತ್ರಿ ಭಾವಿಕಟ್ಟಿ, ಸುರೇಶಕುಮಾರ, ನಟರಾಜ, ಕೇಶಪ್ಪ ಉಪಸ್ಥಿತರಿದ್ದರು. ನಿರೂಪಣೆ ಡಾ.ಯೆಂಕನಗೌಡ, ಸ್ವಾಗತ ಡಾ.ತುಕಾರಾಂ ನಾಯಕ್, ಪ್ರಾಸ್ತಾವಿಕ ಪುನೀತಾ, ವಂದನಾರ್ಪಣೆ ಡಾ ಪ್ರಕಾಶ ಬಳ್ಳಾರಿ ನೆರವೇರಿಸಿದರು. 

Leave a Reply

Top