ನಮ್ಮನ್ನಗಲಿದ ಸಮಾಜಮುಖಿ ವ್ಯಕ್ತಿ ಬಸವರಾಜ ಬಂಡಿಹಾಳ -ಭಾವಪೂರ್ಣ ಶ್ರದ್ದಾಂಜಲಿ

ಕೊಪ್ಪಳ :

      ಕೊಪ್ಪಳ ನಗರದ ನಿವಾಸಿ ಶಿಕ್ಷಕ ಬಸವರಾಜ ಬಂಡಿಹಾಳ ಅವರ ಭಾವಪೂರ್ಣ  ಶ್ರದ್ದಾಂಜಲಿ ಮನೆಯ ಬಳಿ ಜರುಗಿತು. ಬಸವರಾಜ ಬಂಡಿಹಾಳ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ  ಅವರ ಆತ್ಮೀಯ ಮಿತ್ರರು ಸಹೊದ್ಯೋಗಿಗಳು, ಮುಖಂಡರು ಭಾಗವಹಿಸಿದ್ದರು .

     ಮೊದಲಿಗೆ ಒಂದು ನಿಮಿಷ ಮೌನಾಚರಣೆ ಮಾಡಿ ತಮ್ಮ ಅನಿಸಿಕೆಗಳನ್ನು ಹೇಳಿದರು. ಮೊದಲಿಗೆ ಮಾತನಾಡಿದ ವಿಜಯ ಅಮೃತರಾಜ ಅಗಲಿದ ಬಸವಾರಜ ಬಂಡಿಹಾಳ ಕುರಿತು ಸ್ವರಚಿತ ಕವನ ಎದ್ದು ಹೋಗಿಯೇ.. ಬಿಟ್ಟ ಮಡಿಲಿನಿಂದ  ವಾಚನ ಮಾಡಿದರೆ. ನಂತರದಲ್ಲಿ ಮಾತನಾಡಿದ ಹಾಲೇಶ ಕಂದಾರಿ ಬಸಣ್ಣ ನಮಗೆ ಹಿರಿಯಣ್ಣನಂತಿದ್ದ. ಸದಾ ಸ್ಪೂರ್ತಿಯಸೆಲೆಯಾಗಿದ್ದರು. ಬಹುಮುಖ ಪ್ರತಿಭೆಯುಳ್ಳ ಅವರು ನೊಂದವರಿಗೆ ಧ್ವನಿಯಾಗಿದ್ದರು. 
ನಂತರದಲ್ಲಿ ಮಾರುತಿ ಪೂಜಾರ ಮಾತನಾಡಿ ಮಿತ್ರ ಬಂಡಿಹಾಳ ಅಗಲಿಕೆ ಸಮಾಜಕ್ಕೆ ಹಾಗೂ ಕುಟುಂಬಕ್ಕೆ ತುಂಬಲಾರದ ನಷ್ಟ. ಬಾಲ್ಯದಿಂದಲೂ ಕಡುಬಡತನದಲ್ಲಿ ಬೆಳೆದರೂ ತನ್ನ ಶ್ರಮದಿಂದ ಬೆಳೆದು ನೇರ ನಿಷ್ಠುರ ಮಾತುಗಳಿಗೆ ಹೆಸರಾಗಿದ್ದರು. ಅಪಾರ ಜನಪರ ಕಾಳಜಿ ಹೊಂದಿದ್ದು ಸಮಾಜಮುಖಿ ಕಾರ್ಯದಿಂದ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದ. ಪರೋಪಕಾರಿ ಮನೋಭಾವನೆಯಿಂದ ಕೆಲಸ ನಿರ್ವಹಿಸಿ ಅಪಾರ ಸ್ನೇಹ ಬಳಗವನ್ನು ಸಂಪಾದಿಸಿದ್ದ. ಅದರಲ್ಲೂ ಶಿಕ್ಷಣ ಮತ್ತು ರಾಜಕೀಯ ಕ್ಷೇತ್ರದಲ್ಲಿ ತನ್ನದೇ ಆದ ಪ್ರಭಾವವನ್ನು ಬೆಳಸಿಕೊಂಡಿದ್ದು ನಮ್ಮೆಲ್ಲರಿಗೂ ಮಾದರಿಯಾಗಿದೆ.  ನಾಗರಾಜ ಡೊಳ್ಳಿನ ಮಾತನಾಡಿ ಬಸಣ್ಣ ನನ್ನ ಸಹೋದರನ ಗೆಳೆಯನಾಗಿದ್ದರು ನಮಗೂ ಸಹ ಮಾರ್ಗದರ್ಶನ ನೀಡುತ್ತಿದ್ದ. ಬಸಣ್ಣ ನನ್ನಂತಹ ಕಿರಿಯರೊಂದಿಗೂ ಉತ್ತಮ ಭಾಂದವ್ಯ ಹೊಂದಿದ್ದರು, ನನ್ನ ಅವರೊಡನೆ ವಯಸ್ಸು ಎಂದು ಅಡ್ಡಿಯಾಗಿಲ್ಲ. ನಮಗೆ ದಾರಿದೀಪದಂತಿದ್ದರು.
   ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬಸವರಾಜ ಆಕಳವಾಡಿ ಮಾತನಾಡಿ ಬಂಡಿಹಾಳ ಅವರ ವ್ಯಕ್ತಿತ್ವ ಮೆಚ್ಚುವಂತಾಗಿದ್ದು ಆತನ ಆದರ್ಶ ಮಾನವೀಯ ಗುಣಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿ ಅಲ್ಪ ವಯಸ್ಸಿನಲ್ಲೇ ಸಮಾಜದಲ್ಲಿ ಎತ್ತರಕ್ಕೆ ಬೆಳೆದ ಬಗ್ಗೆ ಕೊಂಡಾಡಿದರು. ಬಂಡಿಹಾಳ ಮತ್ತು ಮಾರುತಿ ಪೂಜಾರ ಅವರ ನಡುವಿನ ಅನೂನ್ಯ ಸ್ನೇಹವು  ಇಂದಿನ ಯುವ ಸಮುದಾಯಕ್ಕೆ ಮಾದರಿಯಾಗಿದೆ. 
       ಕಾರ್ಯಕ್ರಮ ನಿರ್ವಹಣೆಯನ್ನು ಶಿವಾನಂದ ಹೂದ್ಲೂರ ನಿರ್ವಹಿಸಿದರು ಈ ಭಾವಪೂರ್ಣ ಶ್ರದ್ಧಾಂಜಲಿಯಲ್ಲಿ ನಾಭಿರಾಜ ದಸ್ತೇನವರ, ವಾಯ್.ಎಫ್ ಕುರಿ. ಬೀರನಾಯ್ಕರ್ , ಹನುಮಂತ ಹಳ್ಳಿಕೇರಿ ಭಾಗವಹಿಸಿದ್ದರು. ಮುಂಜಾನೆಯಿಂದ ಮೃತರಿಗೆ ಗೌರವ ಸಲ್ಲಿಸಲು ಸಂಸದರಾದ ಕರಡಿ ಸಂಗಣ್ಣ, ನಗರಸಭಾ ಉಪ ಅಧ್ಯಕ್ಷರಾದ  ಬಾಳಪ್ಪ ಬಾರಕೇರ. ಸದಸ್ಯರಾದ ಮುತ್ತುರಾಜ ಕುಷ್ಟಗಿ, ಅಪ್ಪಣ್ಣ ಪದಕಿ ನಗರಸಭಾ ಆಯುಕ್ತರಾದ ರಮೇಶ ಪಟ್ಟೇದಾರ , ಶಂಭುಲಿಂಗನಗೌಡ ಹಾಗೂ ನೌಕರರ ಸಂಘ ಮತ್ತು ಶಿಕ್ಷಕರ ಸಂಘ ,ಶಿಕ್ಷಣ ಇಲಾಖೆ ಹಾಗೂ ನಗರಸಭೆ ಹಿರಿಯ ಕಿರಿಯ ಅಧಿಕಾರಿಗಳು ಸಿಬ್ಬಂದಿವರ್ಗ, ಆಗಮಿಸಿದ್ದರು. 

Related posts

Leave a Comment