ಹಂಪಿ ವಿವಿ ಯಲ್ಲಿ ಜು. ೨೨ ರಿಂದ ವಿಜ್ಞಾನ ಲೇಖಕರ ತರಬೇತಿ ಶಿಬಿರ.

ಕೊಪ್ಪಳ, ಜು.೧೪  ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಹಯೋಗದಲ್ಲಿ ೩೦ನೇ ಅಖಿಲ ಕರ್ನಾಟಕ ಉದಯೋನ್ಮುಖ ಜನಪ್ರಿಯ ಕನ್ನಡ ಲೇಖಕರ ತರಬೇತಿ ಶಿಬಿರವನ್ನು ಜು.೨೨ ರಿಂದ ೨೬ ರವರೆಗೆ ಕನ್ನಡ ವಿಶ್ವ ವಿದ್ಯಾಲಯ, ಹಂಪಿಯಲ್ಲಿ ಏರ್ಪಡಿಸಲಾಗಿದೆ.ರಾಜ್ಯದ ಉದಯೋನ್ಮುಖ ಕನ್ನಡ ವಿಜ್ಞಾನ ಬರಹಗಾರರಿಗೆ, ಕಾರ್ಯನಿರತ ವಿಜ್ಞಾನ ಪತ್ರಿಕೋದ್ಯಮಿಗಳು, ವರದಿಗಾರರಿಗಾಗಿ ಈ ಜನಪ್ರಿಯ ವಿಜ್ಞಾನ ಬರವಣಿಗೆಯ ತರಬೇತಿ ಶಿಬಿರವನ್ನು ಆಯೋಜಿಸಲಾಗಿದ್ದು, ವಿಜ್ಞಾನ ಬರವಣಿಗೆಯಲ್ಲಿ ಆಸಕ್ತಿ ಇರುವ ವಿಜ್ಞಾನ ಶಿಕ್ಷಕರು, ಯುವ ಪತ್ರಿಕಾ ವರದಿಗಾರರು, ಚಿತ್ರ ನಿರೂಪಕರು, ರೇಡಿಯೋ ಭಾಷಣಕಾರರು ಶಿಬಿರದಲ್ಲಿ ಭಾಗವಹಿಸಬಹುದಾಗಿದೆ. ಶಿಬಿರವು ಜು.೨೨ ರಿಂದ ಜು.೨೬ ರವರೆಗೆ ೦೫ ದಿನಗಳ ಕಾಲ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆಯಲಿದ್ದು, ಶಿಬಿರದಲ್ಲಿ ನುರಿತ ವಿಜ್ಞಾನ ಬರಹಗಾರರು ಮತ್ತು ಸಂವಹನಕಾರರಿಂದ ಶಿಬಿರಾರ್ಥಿಗಳಿಗೆ ವಿಜ್ಞಾನ ಬರವಣಿಗೆಯ ಕುರಿತು ವಿವಿಧ ಕೌಶಲ್ಯ, ಆಕರ, ಶಬ್ದ, ಬಳಕೆ, ಅನುವಾದ, ವಿಜ್ಞಾನ ಪತ್ರಿಕೋದ್ಯಮ ಮುಂತಾದ ವಿಷಯಗಳ ಕುರಿತು ತರಬೇತಿ ನೀಡಲಾಗುವುದು.ಶಿಬಿರದಲ್ಲಿ ಭಾಗವಹಿಸಲಿಚ್ಛಿಸುವವರು ವಿಜ್ಞಾನ ಸಂವಹನದಲ್ಲಿ ವಿಶೇಷ ಆಸಕ್ತಿ ಹೊಂದಿರಬೇಕು. ವ್ಯಕ್ತಿ ವಿವರದೊಂದಿಗೆ ಈಗಾಗಲೇ ಒಂದು ಸ್ವ ರಚಿತ ಕನ್ನಡ ವೈಜ್ಞಾನಿಕ ಲೇಖನದ ಪ್ರತಿಯೊಂದಿಗೆ ಅರ್ಜಿಯನ್ನು ಡಾ||ವಸುಂದರಾ ಭೂಪತಿ, ಗೌರವ ಕಾರ್ಯದರ್ಶಿ, ಕರ್ನಾಟಕ ವಿಜ್ಞಾನ ಪರಿಷತ್ತು, ವಿಜ್ಞಾನ ಭವನ, ನಂ.೨೪/೨, ೨೧ನೇ ಮುಖ್ಯರಸ್ತೆ, ಬನಶಂಕರಿ ೨ನೇ ಹಂತ, ಬೆಂಗಳೂರು-೫೬೦ ೦೭೦ ಅಥವಾ ಇ-ಮೇಲ್ ವಿಳಾಸ : ಞಡಿvಠಿ.iಟಿಜಿo@gmಚಿiಟ.ಛಿom ಇವರಿಗೆ ಸಲ್ಲಿಸಬಹುದಾಗಿದೆ. ಕರಾವಿಪ ಸಂಘಟಿಸಿದ ಲೇಖಕರ ಶಿಬಿರಗಳಲ್ಲಿ ಈಗಾಗಲೇ ಭಾಗವಹಿಸಿದವರು ಅರ್ಜಿ ಸಲ್ಲಿಸುವಂತಿಲ್ಲ. ೨೦ ರಿಂದ ೪೫ ವಯೋಮಾನದವರಿಗೆ ಆದ್ಯತೆ ನೀಡಲಾಗುವುದು.  ಹೆಚ್ಚಿನ ಮಾಹಿತಿಗಾಗಿ ಪರಿಷತ್ತಿನ ಕಛೇರಿ, ೦೮೦-೨೬೭೧೮೯೩೮/೨೬೭೧೮೯೩೯/೨೬೭೧೮೯೬೨ ಫ್ಯಾಕ್ಸ್: ೦೮೦-೨೬೭೧೮೯೫೯ ಕ್ಕೆ ಸಂಪರ್ಕಿಸಬಹುದಾಗಿದೆ.
Please follow and like us:

Leave a Reply