You are here
Home > Koppal News > ಸ್ವ-ಉದ್ಯೋಗ ತರಬೇತಿ ಅರ್ಜಿ ಆಹ್ವಾನ.

ಸ್ವ-ಉದ್ಯೋಗ ತರಬೇತಿ ಅರ್ಜಿ ಆಹ್ವಾನ.

ಕೊಪ್ಪಳ, ಅ.೧೩ (ಕ ವಾ) ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆ (ರಿ), ಹಳಿಯಾಳ ಇವರ ವತಿಯಿಂದ ಮಹಿಳೆಯರಿಗಾಗಿ ೩೦ ದಿನಗಳ ಬ್ಯೂಟಿ ಪಾರ್ಲರ್ ತರಬೇತಿ ಹಾಗೂ ೪೫ ದಿನಗಳ ಕಂಪ್ಯೂಟರ್ ಡಿಟಿಪಿ ತರಬೇತಿ ಏರ್ಪಡಿಸಲು ಉದ್ದೇಶಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
     ತರಬೇತಿಯು ಅ. ೨೮ ರಿಂದ ಆರಂಭಗೊಳ್ಳಲಿದ್ದು, ಊಟ ಮತ್ತು ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿದೆ. ೧೮ ರಿಂದ ೪೫ ವರ್ಷ ದೊಳಗಿನ ವಯೋಮಿತಿ ಹೊಂದಿರುವ ಆಸಕ್ತ ನಿರುದ್ಯೋಗಿ ಯುವ ಜನರು ಈ ತರಬೇತಿ ಶಿಬಿರದಲ್ಲಿ ಭಾಗವಹಿಸಬಹುದಾಗಿದೆ. ತರಬೇತಿ ಪಡೆಯಲಿಚ್ಛಿಸುವವರು ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆ (ರಿ), ಉದ್ಯೋಗ ವಿದ್ಯಾ ನಗರ, ದಾಂಡೇಲಿ ರಸ್ತೆ, ಹಳಿಯಾಳ (ಉತ್ತರ ಕನ್ನಡ), ದೂರವಾಣಿ ಸಂಖ್ಯೆ : ೦೮೨೮೪-೨೨೦೮೦೭, ೯೪೮೩೪೮೫೪೮೯, ೯೪೮೨೧೮೮೭೮೦ ಇವರನ್ನು ಸಂಪರ್ಕಿಸಬಹುದಾಗಿದೆ.

Leave a Reply

Top