ಮಕ್ಕಳಲ್ಲಿರುವ ಪ್ರತಿಭೆ ಹೊರತಂದು ಪ್ರೋತ್ಸಾಹಿಸುವ ಕಾರ್ಯ ಮಾಡಿ : ಶ್ರೀ ಸಿರಸಪ್ಪಯ್ಯ ಸ್ವಾಮಿಗಳು

ಕೊಪ್ಪಳ,ಆ.೨೦: ಇಂದಿನ ಮಕ್ಕಳೇ ಈ ನಾಡಿನ ಭಾವಿ ಪ್ರಜೆಗಳಾಗಿದ್ದು, ಮಕ್ಕಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಅವರಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವುದರ ಜೊತೆಗೆ ಅವರಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಿ ಹೊರತಂದು ಪ್ರೋತ್ಸಾಹಿಸುವ ಕಾರ್ಯ ಮಾಡಬೇಕೆಂದು ಸಮಾಜ ಬಾಂಧವರಿಗೆ ಕೊಪ್ಪಳದ ಶ್ರೀ ಸಿರಸಪ್ಪಯ್ಯನಮಠದ ಶ್ರೀ ಸಿರಸಪ್ಪಯ್ಯ ಸ್ವಾಮಿಗಳು ಕರೆ ನೀಡಿದರು. 
ಅವರು ನಗರದ ಸಿರಸಪ್ಪಯ್ಯ ಸ್ವಾಮಿ ಮಠದ ಆವರಣದಲ್ಲಿ ಕೊಪ್ಪಳ ಜಿಲ್ಲಾ ಹಾಗೂ ಕೊಪ್ಪಳ ತಾಲೂಕ ವಿಶ್ವಕರ್ಮ ಸಮಾಜ, ತಾಲೂಕ ವಿಶ್ವಕರ್ಮ ನೌಕರರ ಸಂಘ ಹಾಗೂ ವಿಶ್ವಕರ್ಮ ವಿದ್ಯಾರ್ಥಿ ನಿಲಯ ಇವರುಗಳ ಸಂಯುಕ್ತ ಆಶ್ರಯದಲ್ಲಿ ಪ್ರತಿಭಾವಂತ ವಿಶ್ವಕರ್ಮ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಶ್ರೀ ಮೌನೇಶ್ವರ ಬೆಳ್ಳಿ ಮೂರ್ತಿಯ ದಾನಿಗಳ ಸನ್ಮಾನ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತ, ನಮ್ಮ ವಿಶ್ವಕರ್ಮ ಸಮಾಜದವರು ತಮ್ಮ ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರತಂದು ಸಮಾಜದ ಮುಂದೆ ಇಡುವಂತಹ ಕೆಲಸ ಮಾಡಬೇಕು. ಅಂದಾಗ ಮಾತ್ರ ನಮ್ಮ ಸಮಾಜ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದರು.
ಮುಂದುವರೆದು ಮಾತನಾಡಿದ ಅವರು, ಮಕ್ಕಳು ತಮ್ಮ ಮುಂದಿನ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಶಿಕ್ಷಕರಷ್ಟೆ ಪಾಲಾಕರ ಜವಾಬ್ದಾರಿಯಾಗಿದೆ. ಅದರ ಜೊತೆಗೆ ಸಮಾಜ ಬಾಂಧವರು ಕೂಡ ಶ್ರಮಿಸಿದರೆ ಸಮಾಜದ ಸಮಗ್ರ ಅಭಿವೃದ್ದಿಯಾಗಲು ಸಾಧ್ಯ. ಈ ದಿಸೆಯಲ್ಲಿ ಪ್ರತಿಯೊಬ್ಬರು ಇಂತಹ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವಂತೆ ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿರುವ ಪ್ರತಿಭೆಗಳನ್ನು ಹೊರತರಲು ಈ ವೇದಿಕೆ ಸಂಜೀವಿನಿಯಾಗಿದೆ ಎಂದು ಕೊಪ್ಪಳದ ಶ್ರೀ ಸಿರಸಪ್ಪಯ್ಯನಮಠದ ಶ್ರೀ ಸಿರಸಪ್ಪಯ್ಯ ಸ್ವಾಮಿಗಳು ಹೇಳಿದರು.
ವಿಶೇಷ ಉಪನ್ಯಾಸಕರಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಶಾಸನ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ|| ಕಲವೀರ ಮನ್ವಾಚಾರ್ಯ ಅವರು ಆಗಮಿಸಿದ್ದರು. 
ಕಾರ್ಯಕ್ರಮದಲ್ಲಿ ಗಿಣಿಗೇರಿಯ ದೇವೀಂದ್ರ ಸ್ವಾಮಿಗಳು, ನಾಗೇಂದ್ರ ಸ್ವಾಮಿಗಳು, ನರಸಿಂಹ ಸ್ವಾಮಿ ದಿವಾಕರ ಸ್ವಾಮಿ, ಸುಬ್ಬಣ್ಣಾಚಾರ್ಯ ವಿದ್ಯಾನಗರ, ವಿನಾಯಕ ಬಡಿಗೇರ, ರಾಯಚೂರು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾ ವ್ಯವಸ್ಥಾಪಕ ಗುಂಡಪ್ಪ ಕೆ.ಎಂ., ಉತ್ತರ ಕರ್ನಾಟಕ ವಿಶ್ವಕರ್ಮ ಸಮಾಜದ ರಾಯಚೂರು ಅಧ್ಯಕ್ಷ ಬಿ.ಚಂದ್ರಪ್ಪ, ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಅಶೋಕ ವೇದಪಾಠಕ, ಹೇಮಂತ ಬಡಿಗೇರ, ಶೇಖರಪ್ಪ ಬಡಿಗೇರ, ರುದ್ರಪ್ಪ ಬಡಿಗೇರ, ಈಶಪ್ಪ ಬಡಿಗೇರ, ಮಹಾದೇವಪ್ಪ ಜಿ.ಕಮ್ಮಾರ, ಲಕ್ಷ್ಮೇಶ ಎಲ್.ಬಡಿಗೇರ, ರಮೇಶ ಹೆಚ್.ಪತ್ತಾರ ಸೇರಿದಂತೆ ಜಿಲ್ಲೆಯ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿಶ್ವಕರ್ಮ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಶ್ರೀ ಮೌನೇಶ್ವರ ಬೆಳ್ಳಿ ಮೂರ್ತಿಯ ದಾನಿಗಳಿಗೆ ಸನ್ಮಾನಿಸಲಾಯಿತು.
ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆಯಾದ ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳು : ಎಸ್.ಎಸ್.ಎಲ್.ಸಿ. ಯಲ್ಲಿ ಪ್ರಥಮ ಆಶಾ ಕಿರಣ (೯೫%), ದ್ವೀತಿಯ ಭಾವನಾ (೯೨%), ಪಿಯುಸಿ ಕಲಾ ವಿಭಾಗದಲ್ಲಿ ಪ್ರಥಮ ನಾಗರತ್ನ (೯೧%), ದ್ವೀತಿಯ ಗೀತಾ (೮೬%), ಪಿಯುಸಿ ವಿಜ್ಞಾನ ವಿಭಾಗದಲ್ಲಿ ಪ್ರಥಮ ರೇಷ್ಮಾ ಮನೋಹರ ವೇದಪಾಠಕ (೯೦%), ದ್ವೀತಿಯ ವಿನಾಯಕ ಗಂಗಾವತಿ (೮೮%), ಪಿಯುಸಿ ಕಾಮರ್ಸ್ ವಿಭಾಗದಲ್ಲಿ ಪ್ರಥಮ ಸ್ವಾತಿ (೮೯%), ದ್ವೀತಿಯ ನವೀನಕುಮಾರ-(೮೬%), ಡಿಪ್ಲೋಮಾ ವಿಭಾಗದಲ್ಲಿ ಯರಿಸ್ವಾಮಿ ಪ್ರಥಮ (೮೩%), ಎಂಎಸ್‌ಡಬ್ಲ್ಯೂನಲ್ಲಿ ವಿಶ್ವನಾಥ ಬಡಿಗೇರ ಪ್ರಥಮ (೬೭), ಐಟಿಐ ವಿಭಾಗದಲ್ಲಿ ಜಕಣಾಚಾರಿ ಶಿಲ್ಪಿ (೮೫%), ಬಿಎಡ್‌ನಲ್ಲಿ ಪವಿತ್ರಾ ಪ್ರಥಮ (೭೬%), ಡಿಎಡ್‌ನಲ್ಲಿ ಭಾರತಿ ಪ್ರಥಮ (೮೮%), ಬಿಕಾಂನಲ್ಲಿ ಗೌರಿ ಪ್ರಥಮ (೭೧%), ಬಿಎಸ್‌ಸಿಯಲ್ಲಿ ನೀಲಮ್ಮ ಯಲಬುರ್ಗಾ ಪ್ರಥಮ (೭೦%), ಬಿಇ ಪ್ರಥಮ ಅವಿನಾಶ (೭೨%), ದ್ವೀತಿಯ ಬದರಿನಾಥ (೬೪), ಎಂಎಸ್‌ಸಿಯಲ್ಲಿ ಅಶ್ವೀನಿ ವೇದಪಾಠಕ ಪ್ರಥಮ (೮೦%)
Please follow and like us:
error