ಮಾನಸಿಕ ಹಾಗೂ ದೈಹಿಕ ಸದೃಡತೆಗೆ ಕ್ರೀಡೆಗಳ ಅವಶ್ಯವಿದೆ: ಕೆ.ರಾಘವೇಂದ್ರ ಹಿಟ್ನಾಳ

ಕೊಪ್ಪಳ: ಮಾನಸಿಕ ಮತ್ತು ದೈಹಿಕ ಸದೃಡತೆಗೆ ಕ್ರೀಡೆಗಳ ಅವಶ್ಯವಿದೆ ಎಂದು ಕೊಪ್ಪಳ ಕ್ಷೇತ್ರದ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅಭಿಪ್ರಾಯ ಪಟ್ಟರು.
  ಅವರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರಥಮಿಕ ಶಾಲಾ ಶಿಕ್ಷಕರ ಕ್ರೀಡಾಕೂಟದ ದ್ವಜಾರೋಹಣವನ್ನು ನೇರವೇರಿಸಿ ಮಾತನಾಡಿ,ಶಿಕ್ಷಕರು ವರ್ಷ ಪೂರ್ತಿ ತಮ್ಮ ಪಾಠ ಬೋದನೆಯಲ್ಲಿ ತಲ್ಲಿನರಾಗಿರುತ್ತಾರೆ.ಪಾಠ ಬೋದನೆಗಳಲ್ಲಿನಿರತರಾಗಿರುವ ಶಿಕ್ಷಕರುಗಳಿಗೆ ಇಂತಹ ಕ್ರೀಡಾಕೂಟಗಳನ್ನು ಹಮ್ಮಿಕೊಳ್ಳುವುದರಿಂದ ಶಿಕ್ಷಕರ ದೈಹಿಕವಾಗಿ ಹಾಗೂ ಮಾನಸಿಕವಾಗಿ ಹೆಚ್ಚು ಆಸಕ್ತರಾಗುವುದರೊಂದಿಗೆ ಉಲ್ಲಾಸಮಯವಾಗಿ ಕಲಿಕೆಯ ಪ್ರಕ್ರೀಯೆಗಳಲ್ಲಿ ತೊಡಗಿಕೊಳ್ಳಲು ಸಾಧ್ಯವಾಗುತ್ತದೆ. ಮುಂದಿನ ವರ್ಷದಿಂದ ಸರ್ಕಾರದ ವತಿಯಿಂದ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗುವುದು.ಶಿಕ್ಷಕರಲ್ಲಿ ಅನೇಕ ಸಮಸ್ಯೆಗಳಿವೆ ಅದರಲ್ಲಿ ಮುಖ್ಯವಾಗಿ ನಲಿ-ಕಲಿ ಯೋಜನೆಯನ್ನು ೧ ಮತ್ತು ೨ನೇ ತರಗತಿಗಳಿಗೆ ಮಾತ್ರ ಸಿಮಿತಗೊಳಿಸಬೇಕು.೩ನೇ ತರಗತಿಗೆ ಅಳವಡಿಸಿರುದನ್ನು ರದ್ದುಪಡಿಸಬೇಕು.ಬಡ್ತಿ ನೀಡುವ ವಿಚಾರ,ವರ್ಗವಣೆಯಲ್ಲಿ ಪತಿ-ಪತ್ನಿ ಪ್ರಕರಣ,ವಿಕಲಚೇತನರ ಪ್ರಕರಣಗಳು ಸೇರಿದಂತೆ ಅನೇಕ ವಿಷಯಗಳ ಕುರಿತಾಗಿ ಜಿಲ್ಲಾ ಉಸ್ತುವಾರಿ ಸಚಿವರ ಜೊತೆಯಲ್ಲಿ ಚರ್ಚಿಸಲಾಗಿದ್ದು ಶೀಘ್ರವೇ ಶಿಕ್ಷಣ ಸಚಿವರ ಬಳಿಯಲ್ಲಿ ವಿಚಾರಗಳನ್ನು ಹಂಚಿಕೊಂಡು ಸಚಿವ ಸಂಪುಟದಲ್ಲಿ ಅನುಮೊದಿಸುವಂತೆ ಒತ್ತಾಯಿಸಲಾಗುವುದು.ಕೊಪ್ಪಳದಲ್ಲಿ ಮುಂದಿನ ದಿನಗಳಲ್ಲಿ ಪ್ರತಿ ಜಿಲ್ಲೆಯಲ್ಲಿ ಇರುವಂತೆ ಗುರು ಭವನವನ್ನು ಕೂಡಾ ನಿರ್ಮಿಸುವ ಯೋಜನೆಯಿದ್ದು,ಅದರ ನಿರ್ಮಾಣಕ್ಕೆ ನನ್ನ ಸಂಪೂರ್ಣ ಸಹಕಾರವಿದೆ.ಒಂದು ದೇಶದ ಭವಿಷ್ಯವು ನಾಲ್ಕು ಗೋಡೆಗಳ ಮಧ್ಯೆ ನಿರ್ಮಾಣವಾಗುತ್ತದೆ.ಪ್ರತಿಯೊಬ್ಬ ವ್ಯಕ್ತಿಯ ಜೀವನಲ್ಲಿ ಪ್ರಾಥಮಿಕ ಹಂತದ ಶಿಕ್ಷಣ ಅವನ ಜೀವನಕ್ಕೆ ಬದ್ರ ಬುನಾದಿಯನ್ನು ಹಾಕಿಕೊಡುತ್ತದೆ.ಆದ್ದರಿಂದ ಪ್ರಾಥಮಿಕ ಶಾಲಾ ಶಿಕ್ಷಕರುಗಳಿಗೆ ಹೆಚ್ಚಿನ ರೀತಿಯ ಜವಾಬ್ದಾರಿಗಳಿದ್ದು, ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕು.ನಮ್ಮ ಜಿಲ್ಲೆಯು ಶೈಕ್ಷಣಿಕ ರಂಗದಲ್ಲಿ ರಾಜ್ಯದಲ್ಲೆ ಪ್ರಥಮ ಸ್ಥಾನವನ್ನು ಪಡೆಯುವಂತಾಗಬೇಕಾದರೆ ಶಿಕ್ಷಕರು ಸೇರಿದಂತೆ ಜನಪ್ರತಿನಿಧಿಗಳ,ಅಧಿಕಾರಿಗಳು ಹೆಚ್ಚು ಶ್ರಮವಹಿಸಿ ಕಾರ್ಯನಿರ್ವಹಿಸಬೇಕು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಉತ್ತಮ ಕಾರ್ಯಗಳನ್ನು,ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ ಜೊತೆಗೆ ಶಿಕ್ಷಕರ ಸಮಸ್ಯೆಗಳನ್ನು ಸಂಘದವರು ಶೀಘ್ರವೇ ಬಗೆಹರಿಸುವ ಕೆಲಸವಾಗಬೇಕು.ಇಂತಹ ಉತ್ತಮ ಕಾರ್ಯಕ್ರಮಗಳಿಗೆ ಸದಾ ನನ್ನ ಸಹಕಾರವಿದೆ  ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ನಾಗರಾಜ ಜುಮ್ಮನ್ನವರ್ ಕ್ರೀಡಾ ಜ್ಯೋತಿಯನ್ನು ಬೆಳಗಿಸಿ ಮಾತನಾಡಿ,ಸಮಾಜದಲ್ಲಿ ಏನಾದರೂ ಬದಲಾವಣೆಯನ್ನು ಬಯಸುವುದಾದರೆ ಅದು ಶಿಕ್ಷಕರಿಂದ ಮಾತ್ರ ಸಾಧ್ಯವಾಗುತ್ತದೆ.ನೌಕರರ ಸಂಘದ ಅನೇಕ ಬೇಡಿಕೆಗಳ ಕುರಿತು ಅಧಿವೇಶನದಲ್ಲಿ ಚರ್ಚಿಸಬೇಕು ಎಂದು ಹೇಳಿದರು.
  ಪ್ರಾಸ್ತಾವಿಕವಾಗಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಪ್ರಭು ಕಿಡದಾಳ ಮಾತನಾಡುತ್ತ,ನಮ್ಮ ಸಂಘದ ವತಿಯಿಂದ ಈಗಾಗಲೇ ಮಹಿಳಾ ದಿನಾಚರಣೆ ಹಾಗೂ ಅಂತರರಾಷ್ಟ್ರೀಯ ಮಟ್ಟದ ಶಿಕ್ಷಕರ ದಿನಾಚರಣೆಗಳನ್ನು ವಿಶೇಷವಾಗಿ ಆಚರಿಸಲಾಗಿದೆ.ಇಂತಹ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲು ಸರ್ಕಾರವು ಯಾವುದೇ ಅನುದಾನ ನೀಡುತ್ತಿಲ್ಲ.ಆದ್ದರಿಂದ ಇಂತಹ ಕ್ರೀಡಾಕೂಟಗಳಿಗೆ ಸರ್ಕಾರಿವು ಮುಂದಿನಗಳಲ್ಲಾದರೂ ಅನುದಾನವನ್ನು ನೀಡುವಂತೆ ಹೇಳಿದರು.
ಕಾರ್ಯಕ್ರಮದಲ್ಲಿ ನಗರಸಭೆಯ ಅಧ್ಯಕ್ಷರಾದ ಲತಾ.ವಿ.ಸಂಡೂರ,ಮಾಜಿ ಅಧ್ಯಕ್ಷರಾದ ಸುರೇಶ ದೇಸಾಯಿ,ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ ಪೂಜಾರ,ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಮಕೃಷ್ಣಯ್ಯಾ.ಟಿ.,ಸರಕಾರಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಪ್ಪ ಜೋಗಿ,ಯಲಬುರ್ಗಾ ತಾಲೂಕ ಅಧ್ಯಕ್ಷರಾದ ವೈ.ಜಿ.ಪಾಟೀಲ,ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ,ಸಂಚಾಲಕರಾದ ಭರಮಪ್ಪ ಕಟ್ಟಿಮನಿ,ಜಿಲ್ಲಾಧ್ಯಕ್ಷರಾದ ಚನ್ನಬಸಪ್ಪ ಬೇಲ್ಲದ,ಪ್ರೌಢ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಬಿ.ಕುರಿ,ಪ್ರಾ.ಶಾ.ಶಿ.ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಶಿವಾನಂದ ನಾಗೂರ,ಖಂಜಾಚಿ ಖಾದರಸಾಬ ಹುಲ್ಲೂರ,ಗಂಗಾವತಿ ತಾಲೂಕ ಅಧ್ಯಕ್ಷರಾದ ಶರಣೇಗೌಡ,ಯಲಬುರ್ಗಾ ತಾಲೂಕ ಅಧ್ಯಕ್ಷರಾದ ರಾಮಣ್ಣ ತಳವಾರ,ಕುಷ್ಟಗಿ ಅಧ್ಯಕ್ಷರಾದ ಅಮರೇಗೌಡ ಎಸ್.ಎಚ್.,ಕೊಪ್ಪಳ ತಾಲೂಕ ಅಧ್ಯಕ್ಷರಾದ ಮಂಜುನಾಥ.ಬಿ.ಉಪಾಧ್ಯಕ್ಷರಾದ ಬಸಪ್ಪ ಸೊಂಪುರ,ಪ್ರಾ.ಶಾ.ಶಿ.ಪತ್ತಿನ ಸಂಘದ ಕೊಪ್ಪಳ ತಾಲೂಕ ಅಧ್ಯಕ್ಷರಾದ ಮೈಲಾರಗೌಡ,ಕುಷ್ಟಗಿ ತಾಲೂಕ ಅಧ್ಯಕ್ಷರಾದ ಸಿದ್ರಾಮಪ್ಪ ಅಮರಾವತಿ ಮುಂತಾದವರು ಹಾಜರಿದ್ದರು.
ಕಾರ್ಯಕ್ರಮವನ್ನು ನಿರ್ದೇಶಕರಾದ ಸುರೇಂದ್ರ ದೇಸಾಯಿ ನಿರೂಪಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿನ್ನುಬಾಷ ಅತ್ತಾರ ಸ್ವಾಗತಿಸಿ ವಂದಿಸಿದರು.
Please follow and like us:

Related posts

Leave a Comment