ಡಿ. ೬ ಕ್ಕೆ ಜಾರಕಿಹೊಳಿ ನೇತೃತ್ವದ ಮೂಢನಂಬಿಕೆ ವಿರುದ್ಧ ಜನಜಾಗೃತಿ ಮೂಡಿಸಲು ಸ್ಮಶಾನ ವಾಸ್ತವ್ಯ

ಕೊಪ್ಪಳ, ಡಿ. ೩.  ದೇಶದಲ್ಲಿ ತಾಂಡವಾಡುತ್ತಿರುವ ಮೂಢನಂಬಿಕೆ ವಿರುದ್ಧ ಜನಜಾಗೃತಿ ಮೂಡಿಸಲು ಸಚಿವ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಡಾ|| ಬಿ. ಆರ್. ಅಂಬೇಡ್ಕರ ಪರಿನಿರ್ವಾಣ ದಿನವಾದ ಡಿ. ೬ ರಂದು ಹಮ್ಮಿಕೊಂಡಿರುವ ಸ್ಮಶಾನ ವಾಸ್ತವ್ಯದ ಕಾರ್ಯಕ್ರಮದ ಜಾಗೃತಿ ಜಾಥಾ ನಗರದಲ್ಲಿ ಸಂಚರಿಸಿ ಕುಷ್ಟಗಿಗೆ ತೆರಳಿತು.
ಕ್ರಾಂತಿ ಗೀತೆಗಳನ್ನು, ಮೌಢ್ಯ ವಿರೋಧಿ ಚಳುವಳಿ ಗೀತೆಗಳನ್ನು ಹಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಸಾಗಿದ್ದು, ವಿವಿಧ ಭಾಗಗಳಿಂದ ನಾಲ್ಕು ಜಾಥಾ ಮಾಡುತ್ತಿದ್ದು, ಡಿ

ಸೆಂಬರ್ ೬ ರಂದು ಬೆಳಗಾವಿ ತಲುಪಲಿದೆ, ಬೆಳಗಾವಿಯ ಮಹಾನಗರಪಾಲಿಕೆ ಸ್ಮಶಾನದಲ್ಲಿ ವಿವಿಧ ಮಠಾಧೀಶರು, ಪ್ರಗತಿಪರರು ಸೇರಿ ಅಲ್ಲಿಯೇ ಊಟ ಮಾಡಿ ಅಲ್ಲಿಯೇ ಮಲಗುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಡಿಸೆಂಬರ್ ೬ ಸಮಾಜಕ್ಕೆ ಪರಿವರ್ತನಾ ದಿನವಾಗಬೇಕು ಎಂಬ ಆಶಯವನ್ನು ಹೊಂದಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ರಾಜ್ಯ ಎಲ್ಲಾ ಜಿಲ್ಲೆಗಳಿಂದ ಸಾವಿರಾರು ಜನರು ಪಾಲ್ಗೊಳ್ಳುವ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಲಾಯಿತು. ನಗರದ ವಿವಿದೆಡೆ ಸಂಚರಿಸಿದ ಜಾಥಾದಲ್ಲಿ ಮಾಜಿ ನಗರಸಭೆ ಸದಸ್ಯೆ ಇಂದಿರಾ ಭಾವಿಕಟ್ಟಿ, ಮುಖಂಡರಾದ ರಾಮಣ್ಣ ಕಲ್ಲನವರ, ಶಿವಮೂರ್ತಿ ಗುತ್ತೂರ, ಹನುಮೇಶ ಕಡೆಮನಿ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಮಂಜುನಾಥ ಜಿ. ಗೊಂಡಬಾಳ, ಕೋಟೇಶ ತಳವಾರ, ಹನುಮಂತಪ್ಪ ಗುದಗಿ, ರಮೇಶ ಬೆಲ್ಲದ, ನಾಗರಾಜ ಕಿಡದಾಳ, ನಾಗರಾಜ ಪೂಜಾರ ಇತರರಿದ್ದರು.

Leave a Reply